ನಿಮ್ಮ ದೇಹದಲ್ಲಿ ರೋಗನಿರೋಧ ಶಕ್ತಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಕರಿಬೇವಿನ ಎಲೆಗಳಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳೊಂದಿಗೆ ತಯಾರಿಸಿದ ರಸಂ ಬಹಳ ಸಹಕಾರಿ. ಕೋವಿಡ್ ವಿರುದ್ಧ ಹೋರಾಡಲು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಅಡುಗೆಯಲ್ಲಿ ಈ ರಸಂ ಮಾಡಿ ಸವಿಯ ಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
* ಹುಣಸೆ ಹಣ್ಣಿನ ತಿರುಳು – 2 ಚಮಚ
* ಟೊಮ್ಯಾಟೋ- 2
* ಕರಿಬೇವು- ಸ್ವಲ್ಪ
* ಕಾಳು ಮೆಣಸು- 1 ಚಮಚ
* ಬೆಳ್ಳುಳ್ಳಿ-2
* ಅರಿಶಿಣ ಪುಡಿ- ಸ್ವಲ್ಪ
* ಒಣ ಮೆಣಸಿನಕಾಯಿ- 2
* ರುಚಿಗೆ ತಕ್ಕಷ್ಟು ಉಪ್ಪು
* ಜೀರಿಗೆ- 1 ಚಮಚ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಅಡುಗೆ ಎಣ್ಣೆ
* ಸಾಸಿವೆ- ಸ್ವಲ್ಪ
Advertisement
ಮಾಡುವ ವಿಧಾನ :
* ಮೆಣಸಿನಕಾಯಿ, ಕಾಳು ಮೆಣಸು, ಜೀರಿಗೆ, ಬೆಳ್ಳುಳ್ಳಿ ಮತ್ತು ಕರಿಬೇವು ಎಲೆಗಳನ್ನು ಬಾಣಲೆಯಲ್ಲಿ ಹುರಿದು ಮಿಕ್ಸರ್‍ನಲ್ಲಿ ರುಬ್ಬಿಕೊಳ್ಳಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
Advertisement
Advertisement
* ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಟೊಮ್ಯಾಟೋ, ಕರಿಬೇವು, ಅರಿಶಿಣ ಪುಡಿ, ಹುಣಸೆ ಹಣ್ಣಿನ ತಿರುಳು ಹಾಗೂ ರುಬ್ಬಿದ ಮಸಾಲೆಯನ್ನು ಹಾಕಿ ಬೇಯಿಸಬೇಕು.
Advertisement
* ಇನ್ನೊಂದು ಬಾಣಲೆಯಲ್ಲಿ ಅಡುಗೆ ಎಣ್ಣೆ, ಸಾಸಿವೆ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ ಹಾಕಿ ಒಗ್ಗರಣೆಯನ್ನು ಸಿದ್ಧಪಡಿಸಿಕೊಂಡು ರಸಂಗೆ ಒಗ್ಗರಣೆ ಕೊಟ್ಟರೆ ಅನ್ನದ ಜೊತೆಗೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ