ರೊಟ್ಟಿ ಮಾಡಿದಾಗಲೆಲ್ಲ ಅದರ ಜೊತೆ ಏನು ಮಾಡುವುದು ಎಂಬ ತಲೆನೋವಿದ್ದರೆ, ನಿಮಗೆ ಇಲ್ಲೊಂದು ರುಚಿಕರವಾದ ರೆಸಿಪಿ ಇದೆ. ಅದೇ ಬೆಂಡೆಕಾಯಿ ಮಸಾಲವಾಗಿದೆ. ಬೆಂಡೆಕಾಯಿ ಮಸಾಲ ಮಾಡುವ ಸುಲಭ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಬೆಂಡೆಕಾಯಿ- ಅರ್ಧ ಕೆಜಿ
* ಅರಿಶಿಣ- 1 ಚಮಚ
* ಮೆಣಸಿನ ಪುಡಿ- 1ಚಮಚ
* ಗರಂ ಮಸಾಲಾ- ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್
* ಕಸೂರಿ ಮೇಥಿ- ಸ್ವಲ್ಪ
* ಜೀರಿಗೆ- 1 ಚಮಚ
* ಈರುಳ್ಳಿ- 1
* ಬೆಳ್ಳುಳ್ಳಿ- 2
* ಶುಂಠಿ ಪೇಸ್ಟ್- 1 ಚಮಚ
* ದನಿಯಾ ಪುಡಿ- 1ಚಮಚ
* ಜೀರಿಗೆ ಪುಡಿ
* ಟೊಮೆಟೋ- 1
* ಮೊಸರು- 1ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು – ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಬೆಂಡೆಕಾಯಿಯನ್ನು ಕತ್ತರಿಸಿಕೊಂಡು ಅದಕ್ಕೆ ಅರಿಶಿಣ, ಮೆಣಸಿನ ಪುಡಿ, ಗರಂ ಮಸಾಲಾ ಸೇರಿಸಿ ಎಲ್ಲಾ ಮಸಾಲೆ ಬೆಂಡೆಕಾಯಿಗೆ ಲೇಪಿಸಲು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ
Advertisement
* ಒಂದು ಪಾತ್ರೆಗೆ ಸ್ವಲ್ಪ ಅಡುಗೆ ಎಣ್ಣೆಯನ್ನು ಹಾಕಿ ಕಸೂರಿ ಮೇಥಿ, ಜೀರಿಗೆ ಸೇರಿಸಿ ಮಸಾಲೆಗಳು ಸುವಾಸನೆಯುಕ್ತವಾಗುವವರೆಗೆ ಹುರಿಯಿರಿ.
* ಈಗ ಈರುಳ್ಳಿ, ಬೆಳ್ಳುಳ್ಳಿ ಮತ್ತು 1 ಟೀಸ್ಪೂನ್ ಶುಂಠಿ ಪೇಸ್ಟ್, ಅರಿಶಿಣ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಟೊಮೆಟೋ, ಮೊಸರು 1 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಫ್ರೇ ಮಾಡಿಕೊಳ್ಳಿ. ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
* ಮತ್ತೊಂದು ಪ್ಯಾನ್ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಬೆಂಡೆಕಾಯಿ, ಈರುಳ್ಳಿ, ಟೊಮೆಟೊ, ಗರಂ ಮಸಾಲಾ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿ ಮಸಾಲೆ ಬೆಂದಿರುವ ಪಾತ್ರೆಗೆ ಹಾಕಿ ಬೇಯಿಸಿದರೆ ರುಚಿಯಾದ ಬೆಂಡೆಕಾಯಿ ಮಸಾಲಾ ಸವಿಸಲು ಸಿದ್ಧವಾಗುತ್ತದೆ.