ರೊಟ್ಟಿ ಮಾಡಿದಾಗಲೆಲ್ಲ ಅದರ ಜೊತೆ ಏನು ಮಾಡುವುದು ಎಂಬ ತಲೆನೋವಿದ್ದರೆ, ನಿಮಗೆ ಇಲ್ಲೊಂದು ರುಚಿಕರವಾದ ರೆಸಿಪಿ ಇದೆ. ಅದೇ ಹೀರೆಕಾಯಿ ಪಲ್ಯವಾಗಿದೆ. ಹೀರೆಕಾಯಿ ಪಲ್ಯ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
* ಹೀರೆಕಾಯಿ- 2
* ಅಡುಗೆ ಎಣ್ಣೆ- 2 ದೊಡ್ಡ ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಸಾಸಿವೆ – 1 ಚಮಚ
* ಜೀರಿಗೆ – ಅರ್ಧ ಚಮಚ
* ಈರುಳ್ಳಿ – 1
* ಟೊಮ್ಯಾಟೋ- 2
* ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
* ಅರಿಶಿಣ ಪುಡಿ- ಸ್ವಲ್ಪ
* ಖಾರದ ಪುಡಿ- 1 ಚಮಚ
* ಗರಂ ಮಸಾಲಾ ಪುಡಿ- 1 ಚಮಚ
* ಕಸೂರಿ ಮೇಥಿ-ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಟೊಮ್ಯಾಟೋ, ಹೀರೆಕಾಯಿ ಚೆನ್ನಾಗಿ ತೊಳೆದು ಸಣ್ಣದಾಗಿ ಕಟ್ ಮಾಡಿಕೊಳ್ಳಿ.
Advertisement
Advertisement
* ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸಿ. ಸಾಸಿವೆ, ಜೀರಿಗೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮ್ಯಾಟೋ ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
* ನಂತರ ಹೆಚ್ಚಿದ ಹೀರೆಕಾಯಿ ಹಾಕಿ ಹಾಗೂ ಚಿಟಿಕೆ ಉಪ್ಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದನ್ನೂ ಓದಿ: ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ
* ನಂತರ ಅದಕ್ಕೆ ಗರಂ ಮಸಾಲಾ ಪುಡಿ, ಖಾರದ ಪುಡಿ, ಕಸೂರಿ ಮೇಥಿ, ಅರಿಶಿಣ ಪುಡಿ ಹಾಕಿ ಬೇಯಿಸಿದರೆ ರುಚಿ ರುಚಿಯಾದ ಹೀರೆಕಾಯಿ ಪಲ್ಯ ಸವಿಯಲು ಸಿದ್ಧವಾಗುತ್ತದೆ.