ನಿಮಗೆ ಯಾವುದಾದರೂ ಸಿಹಿ ತಿನ್ನಬೇಕು ಎಂದು ಆಸೆಯಾದಾಗ, ಮನೆಯಲ್ಲಿ ಸಮಾರಂಭ ಇದ್ದಾಗ ಅಥವಾ ವಿಶೇಷ ಹಬ್ಬಕ್ಕೆ ಮನೆಯಲ್ಲೇ ಸಿಹಿ ತಿನಿಸು ತಯಾರಿಸಬೇಕು ಎಂದಿದ್ದರೆ ಚುರುಮುರಿ ಚಿಕ್ಕಿ ಮಾಡಿ ಸಖತ್ ಟೇಸ್ಟ್ ಆಗಿರುತ್ತದೆ.
Advertisement
ಬೇಕಾಗುವ ಸಾಮಗ್ರಿಗಳು:
* ಮಂಡಕ್ಕಿ- 4 ಕಪ್
* ಬಾದಾಮಿ – ಅರ್ಧ ಕಪ್
* ಕುಂಬಳಕಾಯಿ ಬೀಜಗಳು- ಸ್ವಲ್ಪ
* ಬೆಲ್ಲ- 2 ಕಪ್
* ತುಪ್ಪ- ಅರ್ಧ ಕಪ್
* ಏಲಕ್ಕಿ ಪುಡಿ- 1 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮಂಡಕ್ಕಿ ಹುರಿಯಿರಿದಿಡ್ಡುಕೊಳ್ಳಿ.
* ನಂತರ ಬಾದಾಮಿ, ಕುಂಬಳಕಾಯಿ ಬೀಜಗಳನ್ನು ಹುರಿಯಿರಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
* ಒಂದು ಪಾತ್ರೆಗೆ ಬೆಲ್ಲ, ತುಪ್ಪ, ನೀರನ್ನು ಹಾಕಿ, ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.
Advertisement
* ಈಗ ನೊರೆಯಾಗುವವರೆಗೆ ಕುದಿಸಿ. ಹುರಿದ ಚುರುಮುರಿ ಮತ್ತು ¼ ಟೀಸ್ಪೂನ್ ಏಲಕ್ಕಿ ಪುಡಿ, ಬಾದಾಮಿ, ಕುಂಬಳಕಾಯಿ ಬೀಜ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
* ನಂತರ ಒಂದು ಬಟ್ಟಲಿಗೆ ತುಪ್ಪವನ್ನು ಸವರಿ ಅದಕ್ಕೆ ಬೇಯಿಸಿದ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಿ.
* ಒಂದು ನಿಮಿಷ ತಣ್ಣಗಾಗಲು ಬಿಡಿ, ಮತ್ತು ಅದು ಇನ್ನೂ ಬೆಚ್ಚಗಿರುವಾಗ ತುಂಡುಗಳಾಗಿ ಕತ್ತರಿಸಿದರೆ ಚುರುಮುರಿ ಚಿಕ್ಕಿ ಸವಿಯಲು ಸಿದ್ಧವಾಗುತ್ತದೆ.