ಮಾಂಸಾಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರವೆಂದರೆ ಸಾಗರೋತ್ಪನ್ನಗಳು. ಸಿಗಡಿ ಎಲ್ಲರ ಪ್ರಥಮ ಆಯ್ಕೆಯಾಗಿದೆ. ಸಿಗಡಿಯನ್ನು ಬಳಸಿ ಸಾವಿರಾರು ವಿಧಾನದ ಅಡುಗೆಗಳನ್ನು ಮಾಡಬಹುದು. ಒಂದು ವೇಳೆ ಮಸಾಲೆಯುಕ್ತ ಮತ್ತು ಗರಿಗರಿಯಾದ ಸಿಗಡಿಯನ್ನು ನೀವು ತಿನ್ನ ಬಯಸಿದರೆ ಇಂದು ಮಸಾಲೆ ಸಿಗಡಿ ಫ್ರೈಯನ್ನೇಕೆ ಪ್ರಯತ್ನಿಸಬಾರದು? ನಿಮ್ಮ ಮನೆಗೆ ಅತಿಥಿಗಳು ಆಗಮಿಸಿದ್ದರೆ ಈ ಖಾದ್ಯ ಔತಣದ ಪ್ರಮುಖ ಆಕರ್ಷಣೆಯಾಗುವುದರಲ್ಲಿ ಅನುಮಾನವೇ ಇಲ್ಲ.
Advertisement
ಬೇಕಾಗುವ ಸಾಮಗ್ರಿಗಳು:
* ಸಿಗಡಿ: ಅರ್ಧ ಕೆಜಿ
* ಮೆಣಸಿನ ಪುಡಿ – 2 ಟೀ ಸ್ಪೂನ್
* ಅರಿಶಿನ ಪುಡಿ – 1 ಟೀ ಸ್ಪೂನ್
* ಎಣ್ಣೆ – ಅರ್ಧ ಕಪ್
* ದನಿಯ ಪುಡಿ – 2 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಬೆಳ್ಳುಳ್ಳಿ-ಶುಂಠಿ ಪೇಸ್ಟ್ – 3 ಟೀ ಸ್ಪೂನ್
* ಈರುಳ್ಳಿ – 1
* ಕರಿಬೇಬಿನ ಎಲೆಗಳು – 7-8
* ಲಿಂಬೆರಸ – 1 ಟೀ ಸ್ಪೂನ್
* ಕೊತ್ತಂಬರಿ ಸೊಪ್ಪು- ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಒಂದು ಚಿಕ್ಕ ಪಾತ್ರೆಯಲ್ಲಿ ಸಿಗಡಿ, ಉಪ್ಪು, ಮೆಣಸಿನ ಪುಡಿ, ದನಿಯ ಪುಡಿ, ಅರಿಶಿನ ಪುಡಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು
Advertisement
* ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಮೊದಲ ಪಾತ್ರೆಯಿಂದ ಸಿಗಡಿಯನ್ನು ಹಾಕಿ ಇದರ ಜೊತೆಗೆ ಕರಿಬೇವಿನ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ.
* ಬಳಿಕ ನೀರು ಹಾಕಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಸುಮಾರು ಐದರಿಂದ ಎಂಟು ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.
*ಬಳಿಕ ಮುಚ್ಚಳವನ್ನು ತೆರೆದು ಚೆನ್ನಾಗಿ ತಿರುವುತ್ತಾ ಸಿಗಡಿಯ ಎಲ್ಲಾ ಭಾಗಗಳು ಸರಿಯಾಗಿ ಬೇಯುವಂತೆ ಇನ್ನಷ್ಟು ಹುರಿಯಿರಿ. ತುಂಬಾ ಒಣಗಿದ್ದಂತೆ ಕಂಡುಬಂದರೆ ಕೊಂಚ ಎಣ್ಣೆಯನ್ನು ಸೇರಿಸಬಹುದು. ಇದಕ್ಕೆ ಕೊಂಚ ಲಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿದರೆ ಇದೀಗ ಸಿಗಡಿ ಫ್ರೈ ಸವಿಯಲು ಸಿದ್ಧವಾಗುತ್ತದೆ.