ಈ ಆಲೂಗಡ್ಡೆ ದೋಸೆ ಸಖತ್ ಟೇಸ್ಟೀ ಮತ್ತು ಆರೋಗ್ಯಕಾರಿಯಾಗಿದೆ. ನಿಮ್ಮ ಹಸಿವನ್ನು ಇಂಗಿಸಿ ನಾಲಗೆಯಲ್ಲಿ ಆ ರುಚಿ ಇನ್ನೂ ಇರುವಂತೆ ಈ ದೋಸೆ ಮಾಡುತ್ತದೆ. ಸುಲಭವಾಗಿ ತಯಾರಿಸಬಹುದಾದ ಈ ಆಲೂಗಡ್ಡೆ ದೋಸೆ ಮಾಡುವ ವಿಧಾನ ನಿಮಗಾಗಿ ನೀಡಲಾಗಿದೆ. ರಾಗಿ ದೋಸೆ, ಗೋಧಿ ದೋಸೆಗಳಿಗಿಂತ ಈ ದೋಸೆ ವಿಭಿನ್ನವಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಆಲೂಗಡ್ಡೆ – 3
* ಮೈದಾ – 2 ಸ್ಪೂನ್
* ಹಸಿಮೆಣಸು – 2
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಅಡುಗೆಎಣ್ಣೆ – ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
Advertisement
ಮಾಡುವ ವಿಧಾನ:
* ಮೊದಲು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಪಕ್ಕದಲ್ಲಿರಿಸಿ.
* ಒಂದು ಪಾತ್ರೆಗೆ ಸಿಪ್ಪೆ ತೆಗೆದ ಆಲೂಗಡ್ಡೆ, ಮೈದಾ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣವನ್ನು ಮಿಶ್ರಣ ಮಾಡಿ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
Advertisement
Advertisement
* ಈ ಮಿಶ್ರಣ ಇಡ್ಲಿ ಹಿಟ್ಟಿನಂತೆ ಸ್ವಲ್ಪ ದಪ್ಪನೆಯ ಹಿಟ್ಟಿನಂತೆ ಇರಲಿ. ಹಿಟ್ಟಿಗೆ ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಿ.
* ತವಾಗೆ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ದೋಸೆ ಹುಯ್ಯಿರಿ. ಈ ದೋಸೆ ಚೆನ್ನಾಗಿ ಬೇಯಿಸಿದರೆ ರುಚಿಯಾದ ಆಲೂಗಡ್ಡೆ ದೋಸೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ