ವಾರದಲ್ಲಿ ಒಮ್ಮೆಯಾದರೂ ಮನೆಗಳಲ್ಲಿ ನಾವು ಇಡ್ಲಿ ಮಾಡುತ್ತೇವೆ. ಇಡ್ಲಿಯಲ್ಲಿ ಹಲವಾರು ವಿಧ. ರವೆ ಇಡ್ಲಿ, ಬಾಳೆ ಹಣ್ಣಿನ ಇಡ್ಲಿ, ಅಕ್ಕಿ ಇಡ್ಲಿ ಹೀಗೆ. ಆದರೆ ಅವಲಕ್ಕಿ ಇಡ್ಲಿ ಹೆಚ್ಚು ವಿಶೇಷ. ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ಈ ಕೆಳಗಿನಂತೆ ವಿವರಿಸಲಾಗಿದೆ.
ಬೇಕಾಗುವ ಸಾಮಗ್ರಿಗಳು:
* ಅವಲಕ್ಕಿ – 1 ಕಪ್
* ಮೊಸರು- 1 ಕಪ್
* ಅಕ್ಕಿ ರವಾ / ಇಡ್ಲಿ ರವಾ- 1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಮಿಕ್ಸಿಯಲ್ಲಿ ಅವಲಕ್ಕಿಯನ್ನು ಪುಡಿಗೆ ಪುಡಿಮಾಡಿ.
* ಅವಲಕ್ಕಿ ಪುಡಿ, ಮೊಸರು, ಅಕ್ಕಿ ರವಾ, ಉಪ್ಪು ಬೇಕಾದಲ್ಲಿ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
Advertisement
* ನಂತರ ಇಡ್ಲಿ ತಟ್ಟೆಗೆ ಅಡುಗೆ ಎಣ್ಣೆಯನ್ನು ಸವರಿ ಮಿಶ್ರಣವನ್ನು ಹಾಕಿ
* ಇಡ್ಲಿಯನ್ನು ಬೇಯಿಸಿದರೆ ರುಚಿಯಾದ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.