ಪನೀರ್ ಗ್ರೇವಿ, ಪನೀರ್ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಅದರಿಂದ ಯಾವುದೇ ಆಹಾರ ಪದಾರ್ಥವನ್ನು ತಯಾರಿಸಿದರೂ ಇಷ್ಟಪಟ್ಟು ತಿನ್ನುತ್ತಾರೆ. ಮನೆಯ ಚಿಣ್ಣರಿಂದ ಹಿಡಿದು ದೊಡ್ಡವರವರೆಗೂ ಇದು ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಪನೀರ್ ಗ್ರೇವಿಯನ್ನು ಫಟಾಫಟ್ ಅಂತಾ ಮಾಡುವ ವಿಧಾನ ನಿಮಗಾಗಿ.
Advertisement
ಬೇಕಾಗುವ ಸಾಮಗ್ರಿಗಳು:
* ಪನೀರ್ – 1 ಕಪ್
* ಹಸಿಮೆಣಸು – 5
* ಮೆಣಸಿನ ಪುಡಿ – 1 ಚಮಚ
* ಅಕ್ಕಿ ಪುಡಿ – 1 ಚಮಚ
* ಕಾರ್ನ್ ಪ್ಲೋರ್ – 2 ಚಮಚ
* ಚಿಲ್ಲಿ ಸಾಸ್ – 1 ಚಮಚ
* ಸೋಯಾ ಸಾಸ್ – 1 ಚಮಚ
* ಟೊಮೆಟೋ – 1
* ಈರುಳ್ಳಿ – 1 P
* ಗ್ರೀನ್ ಕ್ಯಾಪ್ಸಿಕಮ್ – 1
* ಬೆಳ್ಳುಳ್ಳಿ – 1
* ಶುಂಠಿ – ಸ್ವಲ್ಪ
* ಲಿಂಬೆ ರಸ – 1 ಚಮಚ
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಅಡುಗೆ ಎಣ್ಣೆ- ಸ್ವಲ್ಪ
* ಗರಂ ಮಸಾಲ- 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಅಕ್ಕಿ ಪುಡಿ, ಗರಂ ಮಸಾಲಾ, ಉಪ್ಪು ಮತ್ತು ನೀರು ಸೇರಿಸಿ ಮಿಶ್ರಣ ತಯಾರಿಸಿಕೊಂಡು, ಪನೀರ್ ತುಂಡುಗಳನ್ನು ಹಾಕಿ.
Advertisement
* ಎಣ್ಣೆಯನ್ನು ಬಿಸಿ ಮಾಡಿ, ಪನೀರ್ ತುಂಡನ್ನು ಹಾಕಿ ಇದು ಕಂದು ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಬೇಕು. ಇದನ್ನೂ ಓದಿ: ವಿಭಿನ್ನ ಟೇಸ್ಟ್‌ನ ಬಾಳೆಕಾಯಿ ಸಮೋಸ ನೀವೂ ಒಮ್ಮೆ ರುಚಿ ನೋಡಿ
* ಇನ್ನೊಂದು ಪಾತ್ರೆಯನ್ನು ಅಡುಗೆ ಎಣ್ಣೆ ಈರುಳ್ಳಿ, ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಕ್ಯಾಪ್ಸಿಕಮ್ ಅನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ, ಇದನ್ನೂ ಓದಿ: ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ
* ನಂತರ, ಪಾತ್ರೆಗೆ ಹುರಿದ ಪನೀರ್ ಅನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಂತರ ಎಲ್ಲಾ ಸಾಮಗ್ರಿಗಳನ್ನು ಮಿಶ್ರಣ ಮಾಡಿದರೆ ಪನೀರ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.