ನಾಟಿ ಸ್ಟೈಲ್ ಆಹಾರ ಎಂದುರೆ ಹಲವರು ತುಂಬಾ ಇಷ್ಟ ಪಟ್ಟು ಸವಿಯುತ್ತಾರೆ. ಅಡುಗೆಮನೆಯಲ್ಲಿರುವ ಕೆಲವು ಸುಲಭ ಪರಿಕರಗಳಿಂದ ಭಿನ್ನವಾದ ರುಚಿಯಲ್ಲಿ ಅತ್ಯುತ್ತಮವಾದ ಖಾದ್ಯದೊಂದನ್ನು ಇಂದೇಕೆ ತಯಾರಿಸಬಾರದು? ಮೊಟ್ಟೆ, ತರಕಾರಿಗಳು ನಾಟಿಬೇಕು ಎಂದು ಕೇಳುವ ನಾವು ಇಂದು ನಾಟಿ ಸ್ಟೈಲ್‍ನಲ್ಲಿ ಅಡುಗೆ ಮಾಡಿ ಕುಟುಂಬದವರಿಗೆ ನೀಡಿದರೆ ನಿಜ್ವಾಗಲೂ ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಹಾಗಿದ್ದರೆ ಇನ್ನೇಕೆ ತಡ ಬನ್ನಿ ರುಚಿಯಾದ ನಾಟಿಕೋಳಿ ಸಾರು ಮಾಡೋಣ
ಬೇಕಾಗುವ ಸಾಮಗ್ರಿಗಳು:
* ಈರುಳ್ಳಿ – 1,
* ಬೆಳ್ಳುಳ್ಳಿ-2
* ಶುಂಠಿ – ಸ್ವಲ್ಪ
* ಮೆಣಸಿನಕಾಯಿ – 6
* ಹುರಿಗಡಲೆ – 1 ಚಮಚ
* ಗಸೆಗಸೆ- ಚಮಚ
* ಚಕ್ಕೆ- 1
* ಲವಂಗ -2
* ದನಿಯಾ ಪುಡಿ- 2 ಚಮಚ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ತೆಂಗಿನತುರಿ- 1 ಕಪ್
* ಅಡುಗೆ ಎಣ್ಣೆ- ಅರ್ಧ ಕಪ್
* ಟೊಮೆಟೊ-1
* ಮೆಂತ್ಯ ಸೊಪ್ಪು- ಸ್ವಲ್ಪ
* ಅರಿಸಿಣ ಪುಡಿ – 1 ಚಮಚ ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
Advertisement
ಮಾಡುವ ವಿಧಾನ:
Advertisement
* ದನಿಯಾ ಪುಡಿ, ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹುರಿಗಡಲೆ, ಗಸೆಗಸೆ, ತೆಂಗಿನತುರಿ, ಈ ಎಲ್ಲಾ ಪದಾರ್ಥಗಳನ್ನು ಒಂದು ಚಮಚ ಎಣ್ಣೆ ಹಾಕಿ ಹುರಿದು, ನುಣ್ಣಗೆ ರುಬ್ಬಿಕೊಳ್ಳಬೇಕು.
Advertisement
Advertisement
* ಕುಕರ್‍ಗೆ ಅಡುಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಲವಂಗ, ಚಕ್ಕೆ, ಈರುಳ್ಳಿ, ಟೊಮೆಟೊ, ಸ್ವಲ್ಪ ಮೆಂತ್ಯ ಸೊಪ್ಪು, ನಂತರ ನಾಟಿ ಕೋಳಿಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಅರಿಸಿಣ ಪುಡಿ ಹಾಕಿ 5 ನಿಮಿಷ ಬಾಡಿಸಿಕೊಳ್ಳಿ.
* ಈಗ ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ ನೀರು ಹಾಕಿ ಕುಕರ್ ಮುಚ್ಚಿ 5 ವಿಷಲ್ ಕೂಗಿಸಿದರೆ ಗೌಡ್ರು ಸ್ಪೆಷಲ್ ನಾಟಿಕೋಳಿ ಸಾರು ಮುದ್ದೆಯೊಂದಿಗೆ ಸವಿಯಲು ಸಿದ್ಧವಾಗುತ್ತದೆ.