ಮಟನ್ ರೋಸ್ಟ್ ಡ್ರೈ ಮಾಡಿ ಸಖತ್ ಟೇಸ್ಟ್ ಆಗಿರುತ್ತೆ

Public TV
1 Min Read
mutton roast

ಮಾಂಸ ಪ್ರಿಯರಿಗೆ ಬಿರಿಯಾನಿ ಎಂದರೆ ಸಖತ್ ಇಷ್ಟವಾಗುತ್ತದೆ. ಚಿಕನ್, ಮಟನ್, ಮೊಟ್ಟೆ ಬಿರಿಯಾನಿ ಮಾಡಿ ಸವಿದಿರುತ್ತೀರ. ಆದರೆ ಇಂದು ಮಟನ್ ರೋಸ್ಟ್ ಮಾಡಲು ಟ್ರೈ ಮಾಡಿ. ನಿಮ್ಮ ಮನೆ ಮಂದಿ ಇಷ್ಟ ಪಟ್ಟು ಸವಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ.

mutton roast 3

ಬೇಕಾಗುವ ಸಾಮಗ್ರಿಗಳು:
* ಮಟನ್- 1 ಕೆಜಿ
* ಶುಂಠಿ ಬೆಳ್ಳುಳ್ಳಿ ಪೇಸ್ಟ್-
* ಮೆಣಸಿನ ಹುಡಿ-1 ಚಮಚ
* ಹಸಿಮೆಣಸಿನ ಕಾಯಿ-2
* ದನಿಯಾ- 2 ಚಮಚ
* ಅರಿಶಿನ ಹುಡಿ-1 ಚಮಚ
* ಈರುಳ್ಳಿ -1
* ತೆಂಗಿನೆಣ್ಣೆ- ಅರ್ಧ ಕಪ್
* ಕರಿಬೇವು ಸೊಪ್ಪು-ಸ್ವಲ್ಪ
* ತೆಂಗಿನಕಾಯಿ-ಸ್ವಲ್ಪ
* ಸೋಂಪು ಕಾಳು ಹುಡಿ-1 ಚಮಚ
* ಗರಂ ಮಸಾಲ-1 ಚಮಚ
* ಕಾಳುಮೆಣಸು- ಸ್ವಲ್ಪ

mutton roast 2

ಮಾಡುವ ವಿಧಾನ:
* ಕುಕ್ಕ 1 ಕೆಜಿ ಮಟನ್ ಹಾಕಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸಿನ ಹುಡಿ, ಅರಿಸಿನ ನೀರು ಹಾಕಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

* ನಂತರ ಒಂದು ಬಾಣಲೆಗೆ ತೆಂಗಿನೆಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕರಿಬೇವು, ತೆಂಗಿನಕಾಯಿ ಹಾಕಿ ಕಂದು ಬಣ್ಣ ಆಗುವರೆಗೂ ಹುರಿಯಿರಿ.

mutton roast 2

* ಈಗ ಹಸಿಮೆಣಸಿನ ಕಾಯಿ, ಈರುಳ್ಳಿ, ಅರಿಸಿಣ, ಖಾರದ ಪೌಡರ್, ದನಿಯಾ ಪೌಡರ್, ಸೋಂಪುಕಾಳು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.  ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ

* ನಂತರ ಅದಕ್ಕೆ ಬೇಯಿಸಿದ ಮಟನ್, ಗರಂ ಮಸಾಲೆ, ಕಾಳುಮೆಣಸಿನ ಹುಡಿ ಸೇರಿಸಿ ಮಟನ್ ಕಂದು ಬಣ್ಣ ಆಗುವರೆಗೂ ಕೈಯಾಡಿಸುತ್ತಾ, ಚೆನ್ನಾಗಿ ರೋಸ್ಟ್ ಮಾಡಿದರೆ ರುಚಿಯಾದ ಮಟನ್ ಸವಿಯಲ್ ಸಿದ್ಧವಾಗುತ್ತದೆ.  

Share This Article