ಮಟನ್‌ನಿಂದ ಮಾಡುವ ಹತ್ತು ಹಲವು ಪದಾರ್ಥಗಳನ್ನು ನೀವು ಸೇವಿಸಿರಬಹುದು. ಆದರೆ ನಾವು ಇಂದು ಹೇಳಲು ಹೊರಟಿರುವ ಮಟನ್ ಡ್ರೈ ರೋಸ್ಟ್ ನಿಮ್ಮ ಮನೆ ಮಂದಿಗೆ ಎಲ್ಲರಿಗೂ ಇಷ್ಟವಾಗುತ್ತದೆ. ಈ ಖಾದ್ಯ ನಿಮ್ಮ ಬಾಯಿ ರುಚಿ ಹೆಚ್ಚಿಸುವಲ್ಲಿ ಸಂಶಯವಿಲ್ಲ. ಹಾಗಿದ್ದರೆ ಇನ್ಯಾಕೆ ತಡ, ಬನ್ನಿ ಮನೆಯಲ್ಲಿ ಸರಳವಾಗಿ ಮಟನ್ ಡ್ರೈ ರೋಸ್ಟ್ ಹೇಗೆ ಮಾಡುವುದು ಎನ್ನುವುದನ್ನು ನೋಡೋಣ..
Advertisement
ಬೇಕಾಗುವ ಸಾಮಗ್ರಿಗಳು:
* ಮಟನ್- 1 ಕೆಜಿ
* ಶುಂಠಿ ಬೆಳ್ಳುಳ್ಳಿ ಪೇಸ್ಟ್-2 ಚಮಚ
* ಮೆಣಸಿನ ಪೌಡರ್-1 ಚಮಚ
* ಅರಿಸಿನ -1 ಚಮಚ
* ತೆಂಗಿನೆಣ್ಣೆ- ಅರ್ಧ ಕಪ್
* ಕರಿಬೇವು ಸೊಪ್ಪು- ಸ್ವಲ್ಪ
* ತೆಂಗಿನಕಾಯಿ -ಸ್ವಲ್ಪ
* ಹಸಿಮೆಣಸಿನ ಕಾಯಿ-2
* ಈರುಳ್ಳಿ -1
* ದನಿಯಾ ಪೌಡರ್-1 ಚಮಚ
* ಸೋಂಪು- 1 ಚಮಚ
* ಗರಂ ಮಸಾಲ-1 ಚಮಚ
* ಕಾಳುಮೆಣಸಿನ ಪೌಡರ್-1 ಚಮಚ
Advertisement
Advertisement
ಮಾಡುವ ವಿಧಾನ:
Advertisement
* ಕುಕ್ಕರ್‌ಗೆ ಮಟನ್ ಹಾಕಿ ತೆಂಗಿನ ಎಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸಿನ ಪೌಡರ್, ಅರಿಸಿನ ಬೇಕಾದಷ್ಟು ನೀರು ಹಾಕಿ ಬೇಯಿಸಿಕೊಳ್ಳಬೇಕು
* ನಂತರ ಒಂದು ಬಾಣಲೆಗೆ ತೆಂಗಿನೆಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕರಿಬೇವು ಸೊಪ್ಪು, ತೆಂಗಿನಕಾಯಿ, ಹಸಿಮೆಣಸಿನ ಕಾಯಿ, ಈರುಳ್ಳಿ, ಅರಿಶಿನ, ಮೆಣಸಿನ ಪೌಡರ್, ದನಿಯಾ, ಸೋಂಪುಕಾಳು ಹುಡಿ ಸೇರಿಸಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ
* ನಂತರ ಈ ಪಾತ್ರೆಗೆ ಅದಕ್ಕೆ ಬೇಯಿಸಿದ ಮಟನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗರಂ ಮಸಾಲೆ, ಕಾಳುಮೆಣಸಿನ ಪೌಡರ್ ಸೇರಿಸಿ ಮಟನ್ ಬೇಯಿಸಿದರೆ ರುಚಿಯಾದ ಮಟನ್ ಡ್ರೈ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ