ಚಳಿಗೆ ಬಿಸಿ ಬಿಸಿಯಾದ ತಿಂಡಿಯನ್ನು ತಿನ್ನಬೇಕು ಎಂದು ಪ್ರತಿಯೊಬ್ಬರಿಗೂ ಎನ್ನಿಸುತ್ತದೆ. ಚಳಿಗಾಲದಲ್ಲಿ ರುಚಿಯಾದ ತಿಂಡಿಯನ್ನು ಬಯಸುವುದು ಸಹಜವಾಗಿದೆ. ಬೀದಿ ಬದಿ ಅಂಗಡಿಗಳಲ್ಲಿ ಸಿಗುವ ಬಜ್ಜಿ ಎಲ್ಲರಿಗೂ ಇಷ್ಟವಾಗುತ್ತದೆ. ವಿಭಿನ್ನ ಟೇಸ್ಟ್‌ನ ಮೆಣಸಿನಕಾಯಿ ಬಜ್ಜಿ ಮನೆಯಲ್ಲಿಯೇ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಕಡಲೆ ಹಿಟ್ಟು- 1ಕಪ್
* ಅಕ್ಕಿ ಹಿಟ್ಟು- ಸ್ವಲ್ಪ
* ಕಾರ್ನ್ ಫ್ಲೋರ್ – ಸ್ವಲ್ಪ
* ಚಿರೋಟಿ ರವೆ – ಸ್ವಲ್ಪ
* ಅಡುಗೆ ಸೋಡಾ- ಸ್ವಲ್ಪ
* ಜೀರಿಗೆ- ಸ್ವಲ್ಪ
* ಅರಿಶಿಣ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- ಸ್ವಲ್ಪ
* ಮೆಣಸಿನ ಕಾಯಿ- 5 ರಿಂದ 6
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಚಿರೋಟಿ ರವೆ ,ಅಡುಗೆ ಸೋಡಾ, ಉಪ್ಪು, ಜೀರಿಗೆ, ಬಣ್ಣಕ್ಕೆ ಅರಿಶಿಣ ಹಾಕಿ ಸ್ವಲ್ಪ ಗಟ್ಟಿಯಾದ ಹದಕ್ಕೆ ಮಿಶ್ರಣವನ್ನು ಸಿದ್ಧ ಪಡಿಸಿಕೊಳ್ಳಬೇಕು. ವಿಭಿನ್ನ ಟೇಸ್ಟ್‌ನ ಬಾಳೆಕಾಯಿ ಸಮೋಸ ನೀವೂ ಒಮ್ಮೆ ರುಚಿ ನೋಡಿ
Advertisement
* ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಿ. ಇದನ್ನೂ ಓದಿ: ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ
* ಹಸಿ ಮೆಣಸಿನ ಕಾಯಿಯನ್ನು ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣಕ್ಕೆ ಬೇಯಿಸಿದರೆ ರುಚಿಯಾದ ಬಜ್ಜಿ ಸವಿಯಲು ಸಿದ್ಧವಾಗುತ್ತದೆ.