ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಮನೆಗಳಲ್ಲಿ ಮಾಡುವ ವಿಶಿಷ್ಟ ಪದಾರ್ಥ ಅಪ್ಪೆ ಹುಳಿಯಾಗಿದೆ. ಇದು ಸ್ವಲ್ಪ ಹುಳಿಯಾಗಿದ್ದು ಕುಡಿಯಲು ಬರುತ್ತದೆ. ಹೆಚ್ಚಾಗಿ ಇದನ್ನು ಅಪ್ಪೆಕಾಯಿ ಎಂದು ಕರೆಯಲ್ಪಡುವ ಮಾವಿನಕಾಯಿಯಿಂದ ಮಾಡುವುದರಿಂದ ಅಪ್ಪೆಹುಳಿ ಎಂದು ಹೆಸರು ಬಂದಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಮಾವಿನಕಾಯಿ- 1
* ಹಸಿಮೆಣಸು- 4
* ಜೀರಿಗೆ- 1 ಚಮಚ್
* ಸಾಸಿವೆ- 1ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- 4 ಚಮಚ
* ಒಣ ಮೆಣಸಿನಕಾಯಿ- 2
* ಬೆಳ್ಳುಳ್ಳಿ- 1
Advertisement
Advertisement
ಮಾಡುವ ವಿಧಾನ:
* ಮಾವಿನ ಕಾಯಿಯನ್ನು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
* ಒಂದು ಮಿಕ್ಸಿ ಜಾರಿಗೆ ಹಸಿಮೆಣಸಿನಕಾಯಿ, ಹಾಗೂ ಮಾವಿನಕಾಯಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
Advertisement
* ನಂತರ ಒಂದು ಬಾಣಲೆಗೆ ಸಾಸಿವೆ, ಅಡುಗೆ ಎಣ್ಣೆ, ಜೀರಿಗೆ, ಒಣಮೆಣಸು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿದ ಮಾವಿನ ಕಾಯಿ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ನಂತರ ಅಗತ್ಯವಿದ್ದಷ್ಟು ಉಪ್ಪು, ನೀರು ಸೇರಿಸಿ ಕುದಿಸಿದರೆ ರುಚಿಯಾದ ಮಾವಿನಕಾಯಿ ಅಪ್ಪೆ ಹುಳಿ ಸವಿಯಲು ಸಿದ್ಧವಾಗುತ್ತದೆ.