ಸ್ವಲ್ಪ ತಲೆ ನೋವು ಬಂದರೆ ಸಾಕು ನಾವು ಕಾಫಿ ಅಥವಾ ಚಹಾ ಕುಡಿದು ಸುಧಾರಿಸಿಕೊಳ್ಳುತ್ತೇವೆ. ಚಳಿಗಾಲದಲ್ಲಿ ಕಂಡುಬರುವ ಶೀತ ,ನೆಗಡಿ, ಕೆಮ್ಮು, ಎದೆ ಕಟ್ಟುವಿಕೆ, ಮೂಗು ಕಟ್ಟುವುದು ಕಫ ಇತ್ಯಾದಿ ಸಮಸ್ಯೆಗಳಿಗೆ ಲೆಮನ್ ಟೀ ಕುಡಿಯುವುದರಿಂದ ಪರಿಹಾರ ಸಿಗುತ್ತದೆ. ಹೀಗಾಗಿ ಲೆಮನ್ ಟೀ ಮಾಡುವ ಸುಲಭ ವಿಧಾನ ನಿಮಗಾಗಿ.
Advertisement
ಬೇಕಾಗುವ ಸಾಮಗ್ರಿಗಳು:
* ನಿಂಬೆಹಣ್ಣು- 1
* ಚಹಾ ಪುಡಿ- 2 ಚಮಚ
* ಜೇನು ತುಪ್ಪ- 2 ಚಮಚ ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
Advertisement
Advertisement
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಲು ಇಟ್ಟುಕೊಳ್ಳಬೇಕು.
* ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆ ಚಹಾ ಪುಡಿ ಹಾಕಿ ಸ್ವಲ್ಪ ಕುದಿಸಿಕೊಂಡು ಸ್ಟೋವ್ ಆಫ್ ಮಾಡಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
Advertisement
* ನಂತರ ಇದಕ್ಕೆ ಜೇನುತುಪ್ಪ, ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ ಮಾಡಬೇಕು.
* ನಂತರ ಚಹಾವನ್ನು ಸೊಸಿಕೊಂಡು ಬಿಸಿ ಬಿಸಿ ಇರುತ್ತಿದ್ದಂತೆ ಚಹಾವನ್ನು ಕುಡಿದರೆ ಸಖತ್ ಟೇಸ್ಟ್ ಆಗಿರುತ್ತದೆ. ಇದನ್ನೂ ಓದಿ: ಫಟಾಫಟ್ ಅಂತ ಮಾಡಿ ರುಚಿಯಾದ ಮೊಸರು ಅವಲಕ್ಕಿ