ನಿಮ್ಮ ದೇಹದಲ್ಲಿ ರೋಗನಿರೋಧ ಶಕ್ತಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಕರಿಬೇವಿನ ಎಲೆಗಳಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳೊಂದಿಗೆ ತಯಾರಿಸಿದ ರಸಂ ಬಹಳ ಸಹಕಾರಿ. ರೋಗನಿರೋಧಕ ಶಕ್ತಿಯನ್ನು ನೀವು ಹೆಚ್ಚಿಸಿಕೊಳ್ಳಬೇಕಾ? ಹಾಗಿದ್ದರೆ ಈ ರಸಂ ಮಾಡಿ ಸವಿಯ ಬಹುದಾಗಿದೆ. ಬೇಯಿಸಿದ ಅನ್ನದೊಂದಿಗೆ ನಿಂಬೆಹಣ್ಣಿನ ರಸಂ ಸವಿಯಲ್ ಸಖತ್ ಟೇಸ್ಟ್ ಆಗಿರುತ್ತದೆ.
Advertisement
ಬೇಕಾಗುವ ಸಾಮಗ್ರಿಗಳು:
* ಟೊಮೆಟೋ-1
* ಶುಂಠಿ- ಸ್ವಲ್ಪ
* ಕರಿಬೇವಿನ ಎಲೆ
* ಹಸಿ ಮೆಣಸಿನಕಾಯಿ- 3
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಅರಿಶಿಣ- 1 ಚಮಚ
* ತೊಗರಿ ಬೇಳೆ- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ನಿಂಬೆ- 1
* ತುಪ್ಪ- 2 ಚಮಚ
* ಸಾಸಿವೆ- 1 ಚಮಚ
* ಜೀರಿಗೆ- 1 ಚಮಚ
* ಒಣ ಮೆಣಸಿನಕಾಯಿ- 1
* ಕಾಳು ಮೆಣಸಿನ ಪುಡಿ- ಅರ್ಧ ಚಮಚ
Advertisement
ಮಾಡುವ ವಿಧಾನ:
* ಪಾತ್ರೆಯಲ್ಲಿ ಟೊಮೆಟೋ, ಶುಂಠಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆ, ಅರಿಶಿಣ 10 ನಿಮಿಷ ಕುದಿಸಬೇಕು.
* ಪ್ರೆಶರ್ ಕುಕ್ಕರ್ನಲ್ಲಿ ತೊಗರಿ ಬೇಳೆಯನ್ನು ಬೇಯಿಸಿಕೊಳ್ಳಬೇಕು.
Advertisement
Advertisement
* ಬೇಯಿಸಿದ ತೊಗರಿ ಬೇಳೆ ಹಾಗೂ ಟೊಮೆಟೋವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರನ್ನು ಸೇರಿಸಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
* ಈಗ ರಸಂನ್ನು ಕುದಿಯುಲು ಬಿಡಬೇಕು
* ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕೆಂಪು ಮೆಣಸಿನಕಾಯಿ, ಕರಿಬೇವು, ಕಾಳು ಮೆಣಸು ಸೇರಿಸಿ ರಸಂಗೆ ಒಗ್ಗರಣೆ ಹಾಕಿ. ಇದನ್ನೂ ಓದಿ: ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ
* ನಂತರ ಕೊನೆಯಲ್ಲಿ ರಸಂಗೆ ನಿಂಬೆ ರಸವನ್ನು ಹಿಂಡಿದರೆ ರುಚಿಯಾದ ರಸಂ ಸವಿಯಲು ಸಿದ್ಧವಾಗುತ್ತದೆ.