ಊಟಕ್ಕೆ ಏನನ್ನು ಮಾಡಬೇಕು ಎನ್ನುವ ಯೋಚನೆ ಇದ್ದೆ ಇರುತ್ತದೆ. ಅನ್ನ ಮಾಡಿ ರಸಂ ಮಾಡುವ ಯೋಚನೆ ಇದ್ದರೆ ಇಂದು ಹುರುಳಿ ರಸಂ ಮಾಡಿ ಸಖತ್ ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದಾಗಿದೆ. ಹುರುಳಿ ರಸಂ ಮಾಡುವುದು ಸುಲಭ ಮತ್ತು ಸರಳವಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಹುರುಳಿ ಕಾಯಿ- ಅರ್ಧ ಕಪ್
* ಅಡುಗೆ ಎಣ್ಣೆ- ಅರ್ಧ ಕಪ್
* ಸಾಸಿವೆ- 1 ಚಮಚ
* ಕರೀಬೇವು- ಸ್ವಲ್ಪ
* ಮೆಂತ್ಯ- ಅರ್ಧ ಚಮಚ
* ಜೀರಿಗೆ- 1ಚಮಚ
* ಟೊಮೆಟೋ- 1
* ಹುಣಿಸೇಹಣ್ಣು- ಸ್ವಲ್ಪ
* ಅರಿಶಿಣ- ಅರ್ಧ ಚಮಚ
* ಬೆಲ್ಲ- ಅರ್ಧ ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಬೆಳ್ಳುಳ್ಳಿ- 2
* ಕಾಳು ಮೆಣಸು- ಅರ್ಧ ಚಮಚ
Advertisement
Advertisement
ಮಾಡುವ ವಿಧಾನ:
* ಹುರುಳಿ, ಉಪ್ಪು, ನೀರು ಕುಕ್ಕರ್ನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
* ಬೆಳ್ಳುಳ್ಳಿ, ಜೀರಿಗೆ, ಪೆಪ್ಪರ್ ಮತ್ತು 2 ಟೀಸ್ಪೂನ್ ಬೇಯಿಸಿದ ಹುರುಳಿಯನ್ನು ಹಾಕಿ ರುಬ್ಬಿಕೊಳ್ಳಿ.
* ಒಂದು ಪಾತ್ರೆಗೆ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಮೆಂತೆ, ಜೀರಿಗೆ ಕರಿ ಬೇವಿನ ಎಲೆಗಳನ್ನು ಸೇರಿಸಿ. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
* ನಂತರ ಈ ಮೊದಲು ತಯಾರಾದ ಮಸಾಲಾವನ್ನು ಸೇರಿಸಿ ಬೇಯಿಸಬೇಕು. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್
Advertisement
* ಟೊಮೆಟೊ, ಹುಣಿಸೇಹಣ್ಣು, ಅರಿಶಿನ, ಬೆಲ್ಲ ಉಪ್ಪು, ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸ ಬೇಕು.
* ನಂತರ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಯಾದ ಹುರುಳು ರಸಂ ಅನ್ನು ಬಿಸಿ ಅನ್ನದ ಜೊತೆ ಸವಿಯಲು ಸಿದ್ಧವಾಗುತ್ತದೆ.