ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ? ನೀವು ಆಫೀಸ್‍ಗೆ ಹೋಗುತ್ತಿದ್ದರೆ ಬೆಳಗ್ಗೆ ಅಡುಗೆ ಮಾಡುವುದರ ಜೊತೆಗೆ ಮಧ್ಯಾಹ್ನದ ಊಟವನ್ನು ಸಿದ್ಧ ಮಾಡಿಕೊಂಡು ಹೋಗಲು ಸಮಯ ಇರುವುದಿಲ್ಲ. ಹೀಗಾಗಿ ನೀವು 10 ನಿಮಿಷದಲ್ಲಿ ಮಾಡಬಹುದಾದ ರುಚಿಯಾದ ಜೀರಿಗೆ ರಸಂ ರೆಸಿಪಿ ಇಲ್ಲಿದೆ. ನಾಲಿಗೆಗೆ ರುಚಿ ನೀಡುವುದರ ಜೊತೆಗೆ ನಿಮ್ಮ ಸಮಯವನ್ನು ಉಳಿಸುವ ರೆಸಿಪಿ ಇದಾಗಿದೆ.
ಬೇಕಾಗುವ ಪದಾರ್ಥಗಳು:
* ಹುಣಸೆ ಹಣ್ಣು- ಸ್ವಲ್ಪ
* ಬೆಳ್ಳುಳ್ಳಿ -1
* ಟೊಮ್ಯಾಟೊ -1
* ಅರಿಶಿಣ ಪುಡಿ- ಸ್ವಲ್ಪ
* ಜೀರಿಗೆ- 2 ಚಮಚ
* ಸಾಸಿವೆ – ಸ್ವಲ್ಪ
* ಇಂಗು – ಸ್ವಲ್ಪ
* ಅಡುಗೆ ಎಣ್ಣೆ – ಅರ್ಧ ಕಪ್
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಕಾಳು ಮೆಣಸು- ಸ್ವಲ್ಪ
* ಕರಿಬೇವು- ಸ್ವಲ್ಪ
* ಒಣ ಮೆಣಸಿನಕಾಯಿ- 2
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಒಣ ಮೆಣಸಿನಕಾಯಿ, ಕರಿಮೆಣಸು, ಕಾಳು ಮೆಣಸಿನ ಪುಡಿ, ಸ್ವಲ್ಪ ಜಾಸ್ತಿ ಜೀರಿಗೆ, ಬೆಳ್ಳುಳ್ಳಿ ಕರಿಬೇವಿನ ಎಲೆಗಳನ್ನು ಬಾಣಲೆಯಲ್ಲಿ ಹುರಿದು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
* ನಂತರ ಒಂದು ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ, ಟೊಮ್ಯಾಟೊ, ಕರಿಬೇವು, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿ.
Advertisement
Advertisement
* ರುಬ್ಬಿದ ಮಸಾಲಾ, ಹುಣಸೆ ಹಣ್ಣಿನ ತಿರುಳು, ನೀರು ಸೇರಿಸಿ ಕುದಿಯಲು ಬಿಡಬೇಕು.
* ಇನ್ನೊಂದು ಬಾಣಲೆಯಲ್ಲಿ ಅಡುಗೆ ಎಣ್ಣೆ, ಸಾಸಿವೆ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗನ್ನು ರಸಂಗೆ ಒಗ್ಗರಣೆ ಕೊಟ್ಟರೆ ರುಚಿಯಾದ ರಸಂ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್