ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ, ರುಚಿಯಾದ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ಹೆಚ್ಚಿನವರಿಗೆ ಅನಿಸುವುದುಂಟು. ಆದರೆ ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಇಡ್ಲಿ ಮಂಚೂರಿಯನ್ ಒಮ್ಮೆ ಟ್ರೈ ಮಾಡಬಹುದು.
Advertisement
ಬೇಕಾಗುವ ಸಾಮಗ್ರಿಗಳು:
* ಇಡ್ಲಿ-5
* ಮೈದಾ – ಅರ್ಧ ಕಪ್
* ಕಾರ್ನ್ ಫ್ಲೋರ್- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಕೆಂಪು ಮೆಣಸಿನ ಪುಡಿ-2 ಚಮಚ
* ಕರಿಮೆಣಸಿನ ಹುಡಿ-1 ಟೀಸ್ಪೂನ್
* ಸೋಯಾ ಸಾಸ್- 1 ಚಮಸ
* ಅಡುಗೆ ಎಣ್ಣೆ- ಅರ್ಧ ಕಪ್
* ಈರುಳ್ಳಿ – 1
* ಶುಂಠಿ- ಸ್ವಲ್ಪ
* ಬೆಳ್ಳುಳ್ಳಿ- 1
* ಲವಂಗ- 2
* ಕ್ಯಾಪ್ಸಿಕಂ- 1
* ಟೊಮೆಟೊ ಸಾಸ್- 1 ಚಮಚ
* ಚಿಲ್ಲಿ ಸಾಸ್- 2 ಚಮಚ
* ವಿನೆಗರ್ -2 ಚಮಚ
* ಸೋಯಾ ಸಾಸ್ – 1 ಚಮಚ ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಇಡ್ಲಿಗಳನ್ನು 4 ಭಾಗಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.
* ದೊಡ್ಡ ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕೆಂಪುಮೆಣಸಿನ ಪುಡಿ, ಕರಿಮೆಣಸು ಮತ್ತು ಸೋಯಾ ಸಾಸ್ ಹಾಕಿ, ಒಟ್ಟಿಗೆ ಮಿಶ್ರಣ ಮಾಡಿ. ಈಗ ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಇಡ್ಲಿ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಚೆನ್ನಾಗಿ ಫ್ರೈ ಮಾಡಿ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
Advertisement
* ಒಂದು ಪಾತ್ರೆಯಲ್ಲಿ ಅಡುಗೆಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ಟೊಮೆಟೊ ಸಾಸ್, ಚಿಲ್ಲಿ ಸಾಸ್, ಉಪ್ಪು, ಸೋಯಾ ಸಾಸ್, ವಿನೆಗರ್ ಸೇರಿಸಿ, ಚೆನ್ನಾಗಿ ಬೇಯಿಸಿರಿ.
*ನಂತರ ಹುರಿದ ಇಡ್ಲಿಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದರೆ ಇಡ್ಲಿ ಮಂಚೂರಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ