ಮಾಂಸಹಾರಿಗಳಿಗೆ ವಾರಕ್ಕೊಮ್ಮೆಯಾದರೂ ನಾಲಿಗೆ ಮಾಂಸದ ಆಹಾರವನ್ನು ತಿನ್ನಲು ಬಯಸುತ್ತದೆ. ಫಿಶ್ ಸಾಂಬಾರ್, ಫಿಶ್ ಫ್ರೈ ಮಾಡಿರುವ ನೀವು ಇಂದು ಫಿಶ್ ಕಬಾಬ್ ಮಾಡಲು ಟ್ರೈ ಮಾಡಿ. ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ಬಳಸಿ ಫಿಶ್ ಕಬಾಬ್‌ನ್ನು ಸರಳ ವಿಧಾನದ ಜೊತೆಗೆ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
* ಮೀನು- 1 ಕೆಜಿ
* ನಿಂಬೆಹಣ್ಣಿನ ರಸ- 2 ಚಮಚ
* ಕಡಲೆಹಿಟ್ಟು-1 ಕಪ್
* ಬೆಳ್ಳುಳ್ಳಿ, ಶುಂಠಿ ಪೆಸ್ಟ್- ಸ್ವಲ್ಪ
* ಹಸಿಹಸಿಮೆಣಸಿನ ಪೇಸ್ಟ್- ಚಮಚ
* ದನಿಯಾ ಪುಡಿ- ಚಮಚ
* ಅರಿಶಿಣ ಪುಡಿ – ಅರ್ಧ ಚಮಚ
* ಜೀರಿಗೆ ಪುಡಿ- 1 ಚಮಚ
* ಗರಂಮಸಾಲೆ- ಅರ್ಧ ಚಮಚ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಈರುಳ್ಳಿ-1
* ಅಡುಗೆ ಎಣ್ಣೆ- 2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
Advertisement
ಮಾಡುವ ವಿಧಾನ:
* ಮೊದಲು ಮೀನನ್ನು ಚೆನ್ನಾಗಿ ತೊಳೆದು ಒಣಗಿಸಿ ಬೌಲ್ ಒಂದರಲ್ಲಿ ಹಾಕಿ ಅದಕ್ಕೆ ಉಪ್ಪು ಹಾಗೂ ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಎಣ್ಣೆಯನ್ನು ಬಿಸಿಮಾಡಿ ಮೀನನ್ನು ಎಣ್ಣೆಯಲ್ಲಿ ಹಾಕಿ ಸ್ವಲ್ಪ ಕರಿದುಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
Advertisement
Advertisement
* ನಂತರ ಮೀನಿಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಉಪ್ಪು ಹಾಗೂ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
Advertisement
* ಈ ಮಿಶ್ರಣವನ್ನು 30 ನಿಮಿಷ ಹಾಗೆ ಇಟ್ಟಿರಬೇಕು.
* ನಂತರ ಕಡಲೆಹಿಟ್ಟು ಹಾಗೂ ಈರುಳ್ಳಿ ಸೇರಿಸಿ ಮಿಶ್ರಣ ಮಾಡಿ. ಎಣ್ಣೆ ಬಿಸಿ ಮಾಡಿ ಎಣ್ಣೆಯಲ್ಲಿ ಮೀನನ್ನು ಕರಿದರೆ ರುಚಿಯಾದ ಮೀನಿನ ಕಬಾಬ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ