ಬಂಗುಡೆ ಫ್ರೈಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಫಿಶ್ ಫ್ರೈ ಗರಿ ಗರಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಮೀನಿನ ಫ್ರೈಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ. ರವೆ ಬಳಸಿ ಫ್ರೈ ಮಾಡುತ್ತೇವೆ. ಆದರೆ ಇಂದು ನಾವು ಅಕ್ಕಿ ಹಿಟ್ಟನ್ನು ಮಾತ್ರ ಫಿಶ್ ಫ್ರೈ ಮಾಡುವುದನ್ನು ಹೇಳುತ್ತಿದ್ದೇವೆ
ಬೇಕಾಗುವ ಸಾಮಗ್ರಿಗಳು:
* ಬಂಗಡೆ ಮೀನು- ಅರ್ಧ ಕೆಜಿ
* ಖಾರದ ಪುಡಿ- 4 ಚಮಚ
* ನಿಂಬೆ ರಸ- 2 ಚಮಚ
* ಅಡುಗೆ ಎಣ್ಣೆ- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅರಿಶಿನ ಪುಡಿ- 1 ಚಮಚ
* ಮೊಟ್ಟೆ- 1 (ಬಿಳಿಯ ಭಾಗ)
* ಅಕ್ಕಿ ಹಿಟ್ಟು- 2 ಚಮಚ
Advertisement
Advertisement
ಮಾಡುವ ವಿಧಾನ:
* ಮೀನನ್ನ ಚೆನ್ನಾಗಿ ತೊಳೆದು ಅರಿಶಿಣ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ಒಂದು ಬೌಲ್‍ಗೆ ಖಾರದ ಪುಡಿ, ಅರಿಶಿಣ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಚಮಚ ಅಕ್ಕಿ ಹಿಟ್ಟು, ಒಂದು ಮೊಟ್ಟೆ ಜೊತೆಗೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
Advertisement
Advertisement
* ಮಿಶ್ರಣ ಸ್ವಲ್ಪ ಸ್ವಲ್ಪ ದಪ್ಪವಾಗಿವಾಗಿ ಮಾಡಿಕೊಳ್ಳಬೇಕು
* ನಂತರ ಮೀನಿಗೆ ಮಿಶ್ರಣವನ್ನು ಸವರ ಬೇಕು.
* ತವದಲ್ಲಿ ಸ್ವಲ್ಪ ಅಡುಗೆ ಎಣ್ಣೆಯನ್ನು ಫಿಶ್ ಬೇಯಿಸಿದರೆ ರುಚಿಯಾದ ಫಿಶ್ ಫ್ರೈ ಸವಿಯಲು ಸಿದ್ಧವಾಗುತ್ತದೆ.