ಮೊಟ್ಟೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಈ ಮೊಟ್ಟೆಯನ್ನು ಉಪಯೋಗಿಸಿಕೊಂಡು ಬಿರಿಯಾನಿ, ಮಂಚೂರಿ, ಆಮ್ಲೆಟ್ ಮಾಡುತ್ತೇವೆ. ಆದರೆ ನಾವು ಇಂದು ಹೇಳುವ ಸರಳ ವಿಧಾನವಾಗಿ ಮೊಟ್ಟೆ ಗ್ರೇವಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಬಿಸಿ-ಬಿಸಿಯಾದ ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಬನ್ನಿ ಈ ಮೊಟ್ಟೆ ಗ್ರೇವಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.
Advertisement
ಬೇಕಾಗುವ ಸಾಮಗ್ರಿಗಳು:
* ಮೊಟ್ಟೆ -6
* ಅರಿಶಿಣ ಪುಡಿ
* ಖಾರದ ಪುಡಿ ಚಮಚ
* ಅಡುಗೆ ಎಣ್ಣೆ
* ಸಾಸಿವೆ _ ಅರ್ಧ ಚಮಚ
* ಮೆಂತೆ- ಅರ್ಧ ಚಮಚ
* ಜೀರಿಗೆ -ಅರ್ಧ ಚಮಚ
* ಒಣ ಮೆಣಸು-2
* ಹಸಿ ಮೆಣಸು 1-2
* ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್-1 ಚಮಚ
* ಈರುಳ್ಳಿ -1
* ದನಿಯಾ ಪುಡಿ -ಅರ್ಧ ಚಮಚ
* ಜೀರಿಗೆ ಪುಡಿ- ಅರ್ಧ ಚಮಚ
* ಹುಣಸೆ ಹಣ್ಣಿನ ರಸ- 2 ಚಮಚ
* ರುಚಿಗೆ ತಕ್ಕ ಉಪ್ಪು ಸ್ವಲ್ಪ
* ಕೊತ್ತಂಬರಿ ಸೊಪ್ಪು
Advertisement
Advertisement
ಮಾಡುವ ವಿಧಾನ:
* ಬೇಯಿಸಿದ ಮೊಟ್ಟೆಗಳನ್ನು ಸಮ ಅರ್ಧ ಭಾಗಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ.
Advertisement
* ನಂತರ ಒಂದು ಪಾತ್ರೆಗೆ ಅರಿಶಿಣ ಪುಡಿ ಮತ್ತು ಮೆಣಸಿನ ಪುಡಿ, ಅಡುಗೆ ಎಣ್ಣೆ, ಬೇಯಿಸಿದ ಮೊಟ್ಟೆ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಬೇಕು.
* ಈಗ ಮತ್ತೋಂದು ಪಾತ್ರೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಅದರಲ್ಲಿ ಸಾಸಿವೆ ಹಾಕಿ ನಂತರ ಮೆಂತೆ, ಜೀರಿಗೆ, ಒಣ ಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್. ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದನ್ನೂ ಓದಿ: ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ
* ನಂತರ ಅರಿಶಿಣ, ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ ಹಾಕಿ ಸೌಟ್ ನಿಂದ ಆಡಿಸಿ. ನಂತರ 1/4 ಕಪ್ ನೀರು ಸೇರಿಸಿ, ಹುಣಸೆ ಹಣ್ಣಿನ ರಸ ಮತ್ತು ರುಚಿಗೆ ಉಪ್ಪು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ, ನಂತರ ಫ್ರೈ ಮಾಡಿದ ಮೊಟ್ಟೆ ಹಾಕಿ 2 ನಿಮಿಷ ಬಿಸಿ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೊಟ್ಟೆ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.