ಹಬ್ಬ ಎಂದರೆ ಸಿಹಿ ತಿಂಡಿ ಇರಲೇಬೇಕು. ದೀಪಾವಳಿಗಾಗಿ ಪ್ರತಿ ಮನೆಯಲ್ಲಿಯೂ ವಿಶೇಷ ತಿಂಡಿಗಳ ಖಾದ್ಯಗಳು ತಯಾರಾಗುತ್ತವೆ. ಈ ವರ್ಷ ಕೊಂಚ ಭಿನ್ನವಾಗಿರುವ ಗೋಧಿ ಪಾಯಸ ಮಾಡುವ ಮೂಲಕ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಬಾರದೇಕೆ? ಹಬ್ಬದ ಸಂತೋಷದ ಸಮಯದಲ್ಲಿ ಗೋಧಿ ಪಾಯಸ ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿ ತಿಂದು ಸಂತೋಷವನ್ನು ಹೆಚ್ಚಿಸಿಕೊಳ್ಳಿ.
Advertisement
ಬೇಕಾಗುವ ಸಾಮಗ್ರಿಗಳು:
* ಗೋಧಿ ನುಚ್ಚು- 1 ಕಪ್
* ತೆಂಗಿನಕಾಯಿ ತುರಿ- 1 ಕಪ್
* ಬೆಲ್ಲ -2 ಕಪ್
* ಬಾದಾಮಿ – ಅರ್ಧ ಕಪ್ ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
Advertisement
ಮಾಡುವ ವಿಧಾನ:
* ಬಾಣಲೆಯಲ್ಲಿ ಒಂದು ಕಪ್ ಗೋಧಿ ನುಚ್ಚು ಹಾಕಿ ಸ್ವಲ್ಪ ಹುರಿದು ಕೊಂಡು ಕುಕ್ಕರಲ್ಲಿ ಹುರಿದ ನುಚ್ಚು ಮೂರು ಕಪ್ ನೀರು ಹಾಕಿ ಬೇಯಿಸಿಕೊಳ್ಳಬೇಕು.
Advertisement
Advertisement
* ಮಿಕ್ಸಿಗೆ ತುರಿದ ತೆಂಗಿನ ಕಾಯಿ, ಬಾದಾಮಿ ಹಾಕಿ ನುಣ್ಣಗೆ ರುಬ್ಬಿ ಕೊಳ್ಳಬೇಕು
* ಬೆಂದ ಗೋಧಿ ನುಚ್ಚಿಗೆ ಸೇರಿಸಿ, ಬೆಲ್ಲ ಹಾಕಿ ಕುದಿಸಿದರೆ ರುಚಿ ಮತ್ತು ಆರೋಗ್ಯಕರವಾದ ಗೋಧಿ ನುಚ್ಚಿನ ಪಾಯಸ ಸಿದ್ಧವಾಗುತ್ತದೆ.