ಹಬ್ಬ ಎಂದರೆ ಸಿಹಿ ತಿಂಡಿ ಇರಲೇಬೇಕು. ದೀಪಾವಳಿಗಾಗಿ ಪ್ರತಿ ಮನೆಯಲ್ಲಿಯೂ ವಿಶೇಷ ತಿಂಡಿಗಳ ಖಾದ್ಯಗಳು ತಯಾರಾಗುತ್ತವೆ. ಈ ವರ್ಷ ಕೊಂಚ ಭಿನ್ನವಾಗಿರುವ ಬರ್ಫಿಯನ್ನು ಮಾಡುವ ಮೂಲಕ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಬಾರದೇಕೆ? ಹಬ್ಬದ ಸಂತೋಷದ ಸಮಯದಲ್ಲಿ ಈ ಬರ್ಫಿಯನ್ನು ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿ ಸಂತೋಷವನ್ನು ಹೆಚ್ಚಿಸುತ್ತದೆ.
Advertisement
ಬೇಕಾಗಿರುವ ಸಾಮಗ್ರಿಗಳು:
* ಕಡ್ಲೆಹಿಟ್ಟು- 1 ಕಪ್
* ಸಕ್ಕರೆ- 2 ಕಪ್
* ಹಾಲು-1 ಕಪ್
* ತುಪ್ಪ-1 ಕಪ್
* ಕಾಯಿತುರಿ- 1 ಕಪ್
* ಬಾದಾಮಿ- ಒಂದು ಕಪ್
Advertisement
ಮಾಡುವ ವಿಧಾನ:
* ಒಂದು ಪಾತ್ರೆಗೆ ತುಪ್ಪ ಹಾಕಿ, ಕರಗಿದ ಬಳಿಕ ಕಡ್ಲೆಹಿಟ್ಟು ಹಾಕಿ ಕಂದುಬಣ್ಣ ಬರುವವರೆಗೂ ಹುರಿಯಿರಿ.
* ನಂತರ ಹಾಲು, ಸಕ್ಕರೆ ಮಿಶ್ರಣ ಮಾಡುತ್ತಾ ಚೆನ್ನಾಗಿ ಬೇಯಿಸಿರಿ.
Advertisement
Advertisement
* ಇನ್ನು ಉಳಿದ ತುಪ್ಪ, ಬಾದಾಮಿ, ಕಾಯಿತುರಿ ಹಾಕಿ ಮಿಶ್ರಣ ಮಾಡಿ
*ತದನಂತರ ಈ ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಸುರಿದು ತಣಿಯಲು ಬಿಡಿ
* ನಂತರ ಅರ್ಧ ಗಂಟೆಯ ಬಳಿಕ ಚಾಕು ಉಪಯೋಗಿಸಿ ನಿಮಗೆ ಸೂಕ್ತವೆನಿಸಿದ ಆಕೃತಿಯಲ್ಲಿ ಕತ್ತರಿಸಿದರೆ ರುಚಿಯಾದ ಬರ್ಪಿ ಸವಿಯಲು ಸಿದ್ಧವಾಗುತ್ತದೆ.