ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ. ದೋಸೆ, ಚಪಾತಿ, ರೊಟ್ಟಿಗೆ ತೆಂಗಿನ ಕಾಯಿ ಚಟ್ನಿ ಮಾಡಿ. ಚಟ್ನಿ ಮಾಡುವ ವಿಧಾನ ಇಲ್ಲಿದೆ….
ಬೇಕಾಗುವ ಸಾಮಗ್ರಿಗಳು:
* ತೆಂಗಿನ ಕಾಯಿ- 1 ಕಪ್
* ಬೆಳ್ಳುಳ್ಳಿ- 1
* ಈರುಳ್ಳಿ- 1
* ಜೀರಿಗೆ- ಸ್ವಲ್ಪ
* ಕಾಳು ಮೆಣಸು- ಸ್ವಲ್ಪ
* ಹಸಿಮೆಣಸಿನ ಕಾಯಿ- 4-5
* ಕರಿಬೇವು-ಸ್ವಲ್ಪ
* ಕೊತ್ತಂಬರಿ ಸೊಪ್ಪು-ಸ್ವಲ್ಪ
* ಟೊಮೆಟೋ- 1
* ರುಚಿಗೆ ತಕ್ಕಷ್ಟು ಉಪ್ಪು
* ಹುಣಸೆ ಹಣ್ಣು- ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಒಲೆಯ ಮೇಲೆ ಬಾಣಲೆಯಿಟ್ಟು 2-3 ಚಮಚ ಎಣ್ಣೆ ಹಾಕಿ ಉಪ್ಪು, ಹುಣಸೆ ಹಣ್ಣನ್ನು ಹೊರತುಪಡಿಸಿ ಮೇಲಿನ ಎಲ್ಲಾ ಪದಾರ್ಥಗಳನ್ನು ಕೆಂಪಗೆ ಹುರಿದುಕೊಳ್ಳಬೇಕು.
Advertisement
Advertisement
* ನಂತರ ಎಲ್ಲವನ್ನೂ ಮಿಕ್ಸಿ ಜಾರ್’ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
* ಬಳಿಕ ಈರುಳ್ಳಿಯನ್ನು ಸಣ್ಣಗೆ ಉದ್ದಕ್ಕೆ ಕತ್ತರಿಸಿಕೊಂಡು ರುಬ್ಬಿದ ಚಟ್ನಿಯೊಂದಿಗೆ ಮಿಶ್ರಣ ಮಾಡಿದರೆ ರುಚಿಕರವಾದ ಮಸಾಲೆ ಚಟ್ನಿ ಸವಿಯಲು ಸಿದ್ಧವಾಗುತ್ತದೆ.