ಇಡ್ಲಿ, ದೋಸೆ, ಮಸಾಲೆ ರೊಟ್ಟಿ, ತರಕಾರಿ ಪಲಾವ್, ಸವಿದಿದ್ದೇವೆ. ಆದರೆ ಇಂದು ನಾವು ಚೆನ್ನವನ್ನು ಉಪಯೋಗಿಸಿ ಪಲಾವ್ ಮಾಡಿ ಸವಿದರೆ ಸಖತ್ ಟೇಸ್ಟ್ ಆಗಿರುತ್ತದೆ. ಇನ್ನೇಕ ತಡ ಚೆನ್ನ ಪಲಾವ್ ಮಾಡುವ ಸರಳ ವಿಧಾನ ಇಲ್ಲಿದೆ. ಒಮ್ಮೆ ಈ ಅಡುಗೆ ಮಾಡಲು ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಸಾಮಗ್ರಿಗಳು:
* ಚೆನ್ನಾ- 1 ಕಪ್
* ಈರುಳ್ಳಿ- 1
* ಟೊಮೆಟೋ- 1
* ಅಡುಗೆ ಎಣ್ಣೆ- ಅರ್ಧ ಕಪ್
* ಚಕ್ಕೆ, ಏಲಕ್ಕೆ, ಲವಂಗ, ಪಲಾವ್ ಎಲೆ- ಸ್ವಲ್ಪ
* ಹಸಿಮೆಣಸು- ಸ್ವಲ್ಪ
* ಮೆಣಸಿನ ಪುಡಿ- 1ಚಮಚ
* ಅರಿಶಿಣ ಪುಡಿ- 1 ಚಮಚ
* ದನಿಯಾ ಪೌಡರ್- 1ಚಮಚ
* ಗರಂ ಮಸಾಲೆ- 1 ಚಮಚ
Advertisement
Advertisement
ಮಾಡುವ ವಿಧಾನ:
* ಒಂದು ಕುಕ್ಕರ್ಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಚಕ್ಕೆ, ಏಲಕ್ಕೆ, ಲವಂಗವನ್ನು ಹಾಕಿ ಫ್ರೈ ಮಾಡಬೇಕು.
* ಹಸಿಮೆಣಸು, ಈರುಳ್ಳಿ, ಶುಂಠಿ, ಬಳ್ಳುಳ್ಳಿ ಪೇಸ್ಟ್, ಮೆಣಸಿನಪುಡಿ, ಅರಿಶಿಣ ಪೌಡರ್, ದನಿಯಾ ಪೌಡರ್, ಗರಂ ಮಸಾಲೆ, ಟೊಮೆಟೋವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
Advertisement
* ಈಗ ಕೊತ್ತಂಬರಿ, ಚನ್ನವನ್ನು ಹಾಕಿ ಸ್ವಲ್ಪ ಸಮಯ ಬೇಯಿಸಬೇಕು.ಇದನ್ನೂ ಓದಿ: ಫಟ್ ಅಂತ ಮಾಡಬಹುದು ಮೈದಾ ದೋಸೆ
* ಅಕ್ಕಿ, ಅಳತೆಗೆ ತಕ್ಕಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮುಚ್ಚಳ ಮುಚ್ಚಿ ಬೇಯಿಸಲು ಬಿಡಬೇಕು. ಈಗ ರುಚಿಯಾದ ಚೆನ್ನ ಪಲಾವ್ ಸವಿಯಲು ಸಿದ್ಧವಾಗುತ್ತದೆ.