ನಿಮ್ಮ ನಾಲಿಗೆಯ ರುಚಿ ಹೆಚ್ಚಿಸುವುದರ ಜೊತೆಗೆ ಈ ಬಾತ್ ನಿಮ್ಮ ಹಸಿದ ಹೊಟ್ಟೆಯನ್ನು ತುಂಬುವಂತೆ ಮಾಡುವುದರಲ್ಲಿ ಸಂದೇಹವಿಲ್ಲ. ಕ್ಯಾಪ್ಸಿಕಂ (ದೊಣ್ಣೆ ಮೆಣಸು) ಬಳಸಿಕೊಂಡು ಮಾಡುವ ರುಚಿಯಾದ ಅಡುಗೆಯಾಗಿದೆ. ಈ ರುಚಿಯಾದ ಕ್ಯಾಪ್ಸಿಕಂ ಬಾತ್ ಮಾಡಲು ಹೆಚ್ಚಿನ ಸಮಯ ಬೇಕಾಗಿಲ್ಲ. ಹಾಗಿದ್ದರೆ ಬನ್ನಿ ನಾವು ಸರಳ ವಿಧಾನ ಜೊತೆಗೆ ಬೇಕಾಗುವ ಸಾಮಗ್ರಿಗಳ ಜೊತೆಗೆ ಈ ರೆಸಿಪಿಯನ್ನು ಈ ಕೆಳಗಿನಂತೆ ವಿವರಿಸಿದ್ದೇವೆ.
Advertisement
ಬೇಕಾಗುವ ಸಾಮಗ್ರಿಗಳು:
* ಅನ್ನ – 2 ಕಪ್
* ಈರುಳ್ಳಿ – 1
* ಹಸಿಮೆಣಸು – 3
* ಶುಂಠಿ – ಸ್ವಲ್ಪ
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಕರಿಬೇವು – ಸ್ವಲ್ಪ
*ಸಾಸಿವೆ – 1 ಚಮಚ
*ಉದ್ದಿನ ಬೇಳೆ – ಅರ್ಧ ಚಮಚ
*ಅರಶಿಣ – ಅ ಚಮಚ
*ಕ್ಯಾಪ್ಸಿಕಂ – 1 ದೊಡ್ಡದು
*ಟೊಮೇಟೊ – 1
*ಗರಮ್ ಮಸಾಲಾ – 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಹೀರೆಕಾಯಿ ಸಿಪ್ಪೆಯ ಚಟ್ನಿ ನೀವು ಮಾಡಿ
Advertisement
ಮಾಡುವ ವಿಧಾನ:
* ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಯಾದೊಡನೆ ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವಿನೆ ಎಸಳನ್ನು ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಿ.
Advertisement
* ನಂತರ ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೊ, ಅರಶಿಣ,ಗರಮ್ ಮಸಾಲೆಯ ಬಾಣಲೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
Advertisement
* ಇದೀಗ ಸಣ್ಣಗೆ ಹೆಚ್ಚಿರುವ ಕ್ಯಾಪ್ಸಿಕಂ ಅನ್ನು ಈ ಮಿಶ್ರಣಕ್ಕೆ ಹಾಕಿ ಮತ್ತು ಸ್ವಲ್ಪ ಹೊತ್ತು ಮುಚ್ಚಿಡಿ.
* ಐದು ನಿಮಿಷಗಳ ನಂತರ ಮೊದಲೇ ಬೇಯಿಸಿದ ಅನ್ನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ ಸ್ವಲ್ಪ ಬೇಯಿಸಿಕೊಳ್ಳಿ.
* ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ರುಚಿಯಾದ ಆರೋಗ್ಯಕರ ಕ್ಯಾಪ್ಸಿಕಂ ಬಾತ್ ಸವಿಯಲು ಸಿದ್ಧವಾಗಿದೆ.