ನಿಮಗೆ ಯಾವುದಾದರೂ ಸಿಹಿ ತಿನ್ನಬೇಕು ಎಂದು ಆಸೆಯಾದಾಗ, ಮನೆಯಲ್ಲಿ ಸಮಾರಂಭ ಇದ್ದಾಗ ಅಥವಾ ವಿಶೇಷ ಹಬ್ಬಕ್ಕೆ ಮನೆಯಲ್ಲೇ ಸಿಹಿ ತಿನಿಸು ತಯಾರಿಸಬೇಕು ಎಂದಿದ್ದರೆ ಬಾಸುಂದಿ ಮಾಡಿ ಸಖತ್ ಟೇಸ್ಟ್ ಆಗಿರುತ್ತದೆ
ಬೇಕಾಗುವ ಸಾಮಗ್ರಿಗಳು:
* ಹಾಲು- 2 ಲೀಟರ್
* ಕೇಸರಿದಳ – ಸ್ವಲ್ಪ
* ಬಾದಾಮಿ, ಗೋಡಂಬಿ, ಪಿಸ್ತಾ- ಅರ್ಧ ಕಪ್
* ಸಕ್ಕರೆ- 1 ಕಪ್
* ಏಲಕ್ಕಿಪುಡಿ- ಸ್ವಲ್ಪ
Advertisement
ಮಾಡುವ ವಿಧಾನ:
* ಒಂದು ಪಾತ್ರೆಗೆ ಹಾಲು ಹಾಗೂ ಕೇಸರಿದಳ ಹಾಕಿ ಕುದಿಸಿ. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
* ಮಧ್ಯಮ ಉರಿಯಲ್ಲಿ ಹಾಲು ಕುದಿ ಬಂದಾಗ ಕಟ್ಟಿದ ಕೆನೆಯನ್ನು ತೆಗೆದು ಹಾಲಿನ ಮಧ್ಯದಲ್ಲಿ ಹಾಕುತ್ತಾ ಬನ್ನಿ. ಹೀಗೆ ಪ್ರತಿ ಬಾರಿಯೂ ಮಾಡುತ್ತಾ ಬನ್ನಿ. ಹಾಲು ಕೆನೆಯೊಂದಿಗೆ ಗಟ್ಟಿಯಾಗುತ್ತಾ ಬಂದಾಗ ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾವನ್ನು ಹಾಕಿ ಮಿಶ್ರಣ ಮಾಡಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
Advertisement
Advertisement
* ಹಾಲು ಗಟ್ಟಿಯಾಗಲು ಅರ್ಧ ಗಂಟೆ ಬೇಕಾಗುತ್ತದೆ. ನಂತರ ಸಕ್ಕರೆಯನ್ನು ಸೇರಿಸಿ. 5 ನಿಮಿಷ ಕುದಿಸಿ. ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಹಾಲು ದಪ್ಪವಾದ ಬಳಿಕ ಒಲೆಯಿಂದ ಇಳಿಸಿ. ಪೂರ್ತಿ ಆರಲು ಬಿಡಿ. ಈಗ ಬಾಸುಂದಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್