ಚಳಿಗೆ ಬಿಸಿ ಬಿಸಿಯಾದ ತಿಂಡಿಯನ್ನು ತಿನ್ನಬೇಕು ಎಂದು ಪ್ರತಿಯೊಬ್ಬರಿಗೂ ಎನ್ನಿಸುತ್ತದೆ. ಚಳಿಗಾಲದಲ್ಲಿ ರುಚಿಯಾದ ತಿಂಡಿಯನ್ನು ಬಯಸುವುದು ಸಹಜವಾಗಿದೆ. ಹೀಗಿರುವಾಗ ರುಚಿಯಾದ ಮತ್ತು ಆರೋಗ್ಯಕರವಾದ ವಿಭಿನ್ನ ಟೇಸ್ಟ್‌ನ ನೀಡುವ ಬಾಳೆಕಾಯಿ ಸಮೋಸ ಮನೆಯಲ್ಲಿಯೇ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
* ಗೋಧಿಹಿಟ್ಟು- 2 ಕಪ್
* ಓಂ ಕಾಳು- ಸ್ವಲ್ಪ ಕಾಲು
* ರುಚಿಗೆ ತಕ್ಕಷ್ಟು ಉಪ್ಪು
* ತುಪ್ಪ- ಅರ್ಧ ಕಪ್
* ಬಾಳೆಕಾಯಿ – 4
* ಹಸಿರು ಬಟಾಣಿ – ಅರ್ಧ ಕಪ್
* ಅಡುಗೆ ಎಣ್ಣೆ – 2 ಕಪ್
* ಜೀರಿಗೆ- ಸ್ವಲ್ಪ
* ಜೀರಿಗೆ ಪುಡಿ- ಸ್ವಲ್ಪ
* ಅರಿಸಿಣ ಪುಡಿ-ಸ್ವಲ್ಪ
* ದನಿಯಾ ಪುಡಿ- 1 ಚಮಚ
* ಗರಂಮಸಾಲ – ಸ್ವಲ್ಪ
* ಖಾರದಪುಡಿ – 1 ಚಮಚ
Advertisement
ಮಾಡುವ ವಿಧಾನ:
* ಮೊದಲು ಹಸಿರು ಬಟಾಣಿಯನ್ನು ನೆನೆಸಿಟ್ಟುಕೊಂಡು, ನಂತರ ಬಾಳೆಕಾಯಿ ಹಾಗೂ ಹಸಿರು ಬಟಾಣಿಯನ್ನು ಕುಕ್ಕರಿನಲ್ಲಿ ಮೆತ್ತಗೆ ಬೇಯಿಸಿಕೊಳ್ಳಬೇಕು.
Advertisement
* ನಂತರ ಮತ್ತೋಂದು ಪಾತ್ರೆಯಲ್ಲಿ ಗೋಧಿಹಿಟ್ಟಿಗೆ ಓಂಕಾಳು, ಉಪ್ಪು, ಮೂರು ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಚಪಾತಿ ಹಿಟ್ಟಿಗಿಂತಲೂ ಗಟ್ಟಿಯಾಗಿ ಚೆನ್ನಾಗಿ ಕಲೆಸಿಡಿ. ಇದನ್ನೂ ಓದಿ: ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ
Advertisement
Advertisement
* ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ ಬೇಯಿಸಿ ಜಜ್ಜಿದ ಬಟಾಣಿ, ಬಾಳೆಕಾಯಿ, ಬೇಯಿಸಿದ ಬಟಾಣಿ, ಜೀರಿಗೆ, ಅರಿಸಿಣಪುಡಿ, ಜೀರಿಗೆ ಪುಡಿ, ದನಿಯಾ ಪುಡಿ, ಗರಂಮಸಾಲ, ಖಾರದಪುಡಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
* ನಾದಿದ ಹಿಟ್ಟನ್ನು ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಿಸಿ. ಅದರೊಳಗೆ ಹೂರಣ ತುಂಬಿಸಿ.
*ಸಮೋಸಾವನ್ನು ಬೇಯಿಸಿದರೆ ರುಚಿಯಾದ ಬಾಳೆಕಾಯಿ ಸಮೋಸ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ