ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ಅವರೆಕಾಳು ಪಲಾವ್ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಅವರೆಕಾಳು ಪಲಾವ್ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ.
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ- 2 ಕಪ್
* ಅವರೆಕಾಳು- 1 ಕಪ್
* ಕ್ಯಾರೇಟ್- 1
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಚಕ್ಕೆ, ಲವಂಗಾ- ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್
* ಸೋಂಪು- ಸ್ವಲ್ಪ
* ಜೀರಿಗೆ- ಸ್ವಲ್ಪ
* ಈರುಳ್ಳಿ- 1
* ಹಸಿಮೆಣಸಿನಕಾಯಿ-4
* ಶುಂಠಿ ಬಳ್ಳುಳ್ಳಿ ಪೇಸ್ಟ್- 1 ಚಮಚ
* ಅರಿಶಿಣ ಪುಡಿ- ಸ್ವಲ್ಪ
* ಟೊಮೆಟೋ-2
* ಕೊತ್ತಂಬರಿ ಸೊಪ್ಪು- ಸ್ವಲ್ಪ
Advertisement
Advertisement
Advertisement
ಮಾಡುವ ವಿಧಾನ:
* ಒಂದು ಕುಕ್ಕರ್ ಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಅದಕ್ಕೆ ಕರಿಬೇವು, ಸೋಂಪು, ಜೀರಿಗೆ, ಚಕ್ಕೆ, ಲವಂಗಾ, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಬೇಕು.
* ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಅವರೆಕಾಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಟ್ ಮಾಡಿಟ್ಟುಕೊಂಡ ಟೊಮೆಟೋ ಹಾಕಿ ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
* ನಂತರ ಅಕ್ಕಿ ಹಾಕಿ ಅಳತೆಗೆ ತಕ್ಕಂತೆ ನೀರು, ಕೊತ್ತಂಬರಿ ಸೊಪ್ಪು ಹಾಕಿ ಬೇಯಿಸಿಕೊಂಡರೆ ರುಚಿಯಾದ ಅವರೆ ಕಾಳು ಪಲಾವ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಫಟ್ ಅಂತ ಮಾಡಬಹುದು ಮೈದಾ ದೋಸೆ