ರೈಸ್ ಬಾತ್ಗಳು, ಇಡ್ಲಿ, ದೋಸೆ ಹೀಗೆ. ನಾವು ಮಸಾಲೆ ರೊಟ್ಟಿ, ಮಾಡುವುದು ಸಾಮಾನ್ಯ, ಅಕ್ಕಿ ರೊಟ್ಟಿ ಎಂದರೆ ಪ್ರತಿಯೊಬ್ಬರು ಇಷ್ಟ ಪಡುತ್ತಾರೆ. ಅಕ್ಕಿ ರೊಟ್ಟಿಯನ್ನು ಬೆಣ್ಣೆ ಅಥವಾ ತುಪ್ಪದೊಂದಿಗೆ ಬಿಸಿಯಾಗಿ ತಿಂದರೆ ಅದರ ರುಚಿಯೇ ಬೇರೆ. ಇದು ತನ್ನದೇ ಆದ ರುಚಿಯನ್ನು ಹೊದಿದೆ. ಇನ್ನೇಕ ತಡ ಅಕ್ಕಿ ರೊಟ್ಟಿ ಮಾಡುವ ಸರಳ ವಿಧಾನ ಇಲ್ಲಿದೆ. ಒಮ್ಮೆ ಈ ಅಡುಗೆ ಮಾಡಲು ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
* ಅಕ್ಕಿ ಹಿಟ್ಟು- 2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ದೊಡ್ಡ ಪಾತ್ರೆಯಲ್ಲಿ ನೀರು, ಅಡುಗೆ ಎಣ್ಣೆ, ಉಪ್ಪು ಹಾಕಿ ನೀರನ್ನು ಕುದಿಯಲು ಬಿಡಿ.
Advertisement
* ಈಗ 2 ಕಪ್ ಅಕ್ಕಿ ಹಿಟ್ಟು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
Advertisement
* ಅಕ್ಕಿ ಹಿಟ್ಟಿನ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ಹಾಕಿಕೊಂಡು ನಯವಾದ ಮತ್ತು ಮೃದುವಾಗಿ ಮಿಶ್ರ ಮಾಡಿಕೊಳ್ಳಿ. ಬೇಕಾದಲ್ಲಿ ಅಕ್ಕಿ ಹಿಟ್ಟನ್ನು ಸೇರಿಸಿಕೊಳ್ಳ ಬಹುದಾಗಿದೆ. ಇದನ್ನೂ ಓದಿ: ಫಟ್ ಅಂತ ಮಾಡಬಹುದು ಮೈದಾ ದೋಸೆ
* ಈಗ ಹಿಟ್ಟಿನ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಬೇಕು.
* ನಂತರ ರೊಟ್ಟಿಯನ್ನು ಕೈಯಿಂದ ತಟ್ಟಿಕೊಳ್ಳಬೇಕು.
* ರೊಟ್ಟಿಯನ್ನು ಬಿಸಿ ತವಾಕ್ಕೆ ವರ್ಗಾಯಿಸಿ ಬೇಯಿಸಿದರೆ ರುಚಿಯಾದ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.