ಹಸಿವು (Hungry) ಯಾರ ಅನುಭವಕ್ಕೆ ಬಾರದೇ ಇದೆ ಹೇಳಿ? ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಸಕಲ ಜೀವರಾಶಿಗೂ ಹಸಿವು ಎನ್ನುವುದ ಇದ್ದೇ ಇರುತ್ತದೆ. ಮನುಷ್ಯ ಬುದ್ದಿಜೀವಿ. ತನಗೆ ಹಸಿವಾದಾಗ ಬಾಯಿ ಬಿಟ್ಟು ಹೇಳಿಕೊಳ್ಳುತ್ತಾನೆ. ಆದರೆ ಇತರೆ ಜೀವಿಗಳಿಗೆ ಹಸಿವಾದರೂ ಅದನ್ನು ಹೇಳಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಒಂದು ಮತ್ತೊಂದನ್ನು ಅವಲಂಬಿಸಿ, ಬೇಟೆಯಾಡಿ ತಿಂದು ಹಸಿವನ್ನು ನೀಗಿಸಿಕೊಳ್ಳುತ್ತವೆ.
ಋತುಚಕ್ರ ಬದಲಾವಣೆಯೊಂದಿಗೆ ಜಗತ್ತು ಕ್ರಿಯಾಶೀಲವಾಗಿದೆ. ಮನುಷ್ಯನ ಅಸ್ತಿತ್ವಕ್ಕೆ ಜೀವನಚಕ್ರ ಆಕಾರ. ಅಂತೆಯೇ ಮಾನವ ದೇಹದ ಬೆಳವಣಿಗೆಯಲ್ಲಿ ಜೀರ್ಣಕ್ರಿಯೆ ಆಧಾರ. ಮಾನವನಿಗೆ ಹಸಿವಾಗಲು ಜೀರ್ಣಕ್ರಿಯೆಯೇ ಪ್ರಮುಖ ಕಾರಣ. ಇದನ್ನೂ ಓದಿ: PublicTV Explainer: ಬೆಂಗಳೂರಿನ ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ; ಏನಿದು ಮಾರಕ ಕಾಯಿಲೆ – ಮನುಷ್ಯರಿಗೂ ಹರಡುತ್ತಾ?
Advertisement
Advertisement
ಹಸಿವು ಕೇವಲ ಹೊಟ್ಟೆಗೆ ಸೀಮಿತವಾದದ್ದು ಎಂದು ಕೆಲವರು ತಪ್ಪಾಗಿ ಭಾವಿಸುತ್ತಾರೆ. ಹೊಟ್ಟೆ ಹಸಿದಾಗ ಊಟ ಮಾಡಬೇಕು ಎಂದಷ್ಟೇ ಯೋಚಿಸುವವರೂ ಇದ್ದಾರೆ. ಹಸಿವಿನ ಸಂಕೇತ ಹೊಟ್ಟಿಯಿಂದಷ್ಟೇ ವ್ಯಕ್ತವಾಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು ಕಲ್ಪನೆ. ಹಸಿವು ಅನ್ನೋದು ಸಂಕೀರ್ಣ ವಿಷಯ. ಅದು ಇಡೀ ದೇಹಕ್ಕೆ ಸಂಬಂಧಿದ್ದು. ಅಷ್ಟೇ ಅಲ್ಲ, ಹಸಿವಿಗೂ ಮನುಷ್ಯನ ಆರೋಗ್ಯಕರ ಮಾನಸಿಕತೆ ಮತ್ತು ಭಾವನೆಗಳಿಗೂ ಸಂಬಂಧಿಸಿದ್ದಾಗಿದೆ. ನೀವು ನಿಜವಾಗಿಯೂ ಹಸಿದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಇದು ದೈಹಿಕ ಸೂಚನೆಗಳು, ಭಾವನಾತ್ಮಕ ಸ್ಥಿತಿಗಳು ಮತ್ತು ಅಭ್ಯಾಸದ ನಡವಳಿಕೆಗಳ ಸೂಕ್ಷ್ಮ ಸಮತೋಲನವನ್ನು ಒಳಗೊಂಡಿರುತ್ತದೆ.
Advertisement
ಹಸಿವು ಹೇಗಾಗುತ್ತೆ?
ನಾವು ತಿಂಡಿ ಅಥವಾ ಊಟ ಸೇವಿಸಿದಾಗ ಹೊಟ್ಟೆಯೊಳಗಡೆ ಒಂದು ಪ್ರಕ್ರಿಯೆ ನಡೆಯುತ್ತದೆ. ಹಿಂದಿನ ಊಟದ ಜೀರ್ಣಕ್ರಿಯೆಯು ಸಂಪೂರ್ಣವಾಗಿ ಮುಗಿದಾಗ, ಹೊಟ್ಟೆಯೊಳಗೆ ಆಹಾರದ ಮಂಥನವಾಗುತ್ತದೆ. ದೇಹದ ಜೀವಕೋಶಗಳು ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುವ ಕೆಲಸ ಮಾಡುತ್ತವೆ. ವೇಸ್ಟ್ ಎನ್ನುವಂತಹದ್ದನ್ನು ಹೊರಕ್ಕೆ ತಳ್ಳಲಾಗುತ್ತದೆ. ಈ ಕೆಲಸ ಮುಗಿದಂತೆಯೇ ಅಂಗಗಳಿಗೆ ವಿಶ್ರಾಂತಿ ಬೇಕಾಗುತ್ತದೆ. ಹೊಟ್ಟೆಯ ಚೀಲವು ಎಲ್ಲವನ್ನೂ ಸಂಪೂರ್ಣವಾಗಿ ತೆರವುಗೊಳಿಸಿದ ನಂತರ ಹಸಿವುಂಟಾಗುತ್ತದೆ.
Advertisement
ದೇಹದಲ್ಲಿ ಹಸಿವಾದಾಗ ಮನಸ್ಸು ಅದನ್ನು ಅರ್ಥೈಸಿಕೊಳ್ಳುತ್ತದೆ. ಆಹಾರ ಬೇಕೆಂಬ ಸೂಚನೆ ಬುದ್ಧಿಗೆ ರವಾನೆಯಾಗುತ್ತದೆ. ದೇಹದ ದೀರ್ಘಾಯುಷ್ಯ, ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಮತ್ತು ಮನಸ್ಸು ಚೈತನ್ಯದಿಂದ ಕೂಡಿರಲು ಆಹಾರ ಅತ್ಯವಶ್ಯಕ. ಹಸಿವಾದಾಗ ಮಾತ್ರ ನಾವು ಆಹಾರ ಸರಿಯಾದ ಪ್ರಮಾಣದಲ್ಲಿ ಸೇವಿಸಬಹುದು. ಇದನ್ನೂ ಓದಿ: ತೀವ್ರವಾಗಿರುವ ಬಿಸಿಲಿನಿಂದ ನಿಮ್ಮನ್ನು ನೀವು ಹೀಗೆ ರಕ್ಷಿಸಿಕೊಳ್ಳಿ
ಹಸಿವಾದಾಗ ತಿನ್ನುವುದು ಎಷ್ಟು ಉತ್ತಮ?
ತಿನ್ನುವುದನ್ನೇ ಹೆಚ್ಚು ಹವ್ಯಾಸ ಮಾಡಿಕೊಂಡವರು ಬೇಸರದಲ್ಲಿದ್ದಾಗ, ಕೆಲಸದ ಒತ್ತಡದಲ್ಲಿ ಬ್ರೇಕ್ ತೆಗೆದುಕೊಳ್ಳಲು.. ಹೀಗೆ ಯಾವಾಗ ಬೇಕೆಂದರಾವಾಗ ಏನನ್ನಾದರು ತಿನ್ನುತ್ತಿರುತ್ತಾರೆ. ಇದು ದೇಹದ ಆರೋಗ್ಯಕ್ಕೆ ಪೂರಕವಾಗಲ್ಲ. ಬದಲಾಗಿ ಮಾರಕವಾಗುತ್ತದೆ. ಹಸಿವಾದಾಗ ತಿನ್ನುವುದು ದೇಹಕ್ಕೆ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ.
ಹಸಿವಿನ ಸಾಮಾನ್ಯ ಸೂಚನೆಗಳೇನು?
* ದೇಹದಲ್ಲಿ ಪೋಷಕಾಂಶದಂತಹ ನಿಕ್ಷೇಪಗಳು ಖಾಲಿಯಾದಾಗ, ದೇಹ ದುರ್ಬಲಗೊಂಡಂತೆ ಭಾಸವಾಗುತ್ತದೆ. ಶಕ್ತಿ ಕುಂದುತ್ತದೆ. ಆಯಾಸದ ಭಾವನೆಗೆ ಕಾರಣವಾಗುತ್ತದೆ.
* ಖಾಲಿ ಡಬ್ಬ ಸದ್ದು ಮಾಡುತ್ತದೆ. ಹಾಗೆಯೇ ಹಸಿವಾದಾಗ ಹೊಟ್ಟೆ ಸದ್ದು ಮಾಡುತ್ತದೆ.
* ದೇಹದ ಆರೋಗ್ಯಕ್ಕೆ ಸಾತ್ವಿಕ, ಶುದ್ಧ ಆಹಾರ ತುಂಬಾ ಅವಶ್ಯಕ. ಇಂತಹ ಆಹಾರ ಸೇವನೆಯಿಂದ ಸಾಮಾನ್ಯವಾಗಿ 4 ಗಂಟೆ ಅವಧಿಯಲ್ಲಿ ಹಸಿವು ಪ್ರಾರಂಭವಾಗುತ್ತದೆ.
ನೀವು ನಿಜವಾಗಿಯೂ ಹಸಿದಿದ್ದೀರಾ?
ಮೇಲೆ ತಿಳಿದಿದ್ದು ಸಾಮಾನ್ಯ ಹಸಿವಿನ ಸೂಚನೆಗಳಷ್ಟೆ. ಆದರೆ ನಿಜವಾಗಿಯೂ ಹಸಿವಾಗುವಿಕೆ ಬಗ್ಗೆ ಕೆಲವೊಂದು ಅಚ್ಚರಿಯ ಅಧ್ಯಯನದ ಅಂಶಗಳನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಮಗು ಆರೋಗ್ಯವಾಗಿ, ಫಿಟ್ ಆಗಿರಲು ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿ
ಬಾಯಾರಿಕೆ
ಕೆಲವೊಮ್ಮೆ ಕೇವಲ ಬಾಯಾರಿಕೆಯಿಂದ ನಿಜವಾಗಿಯೂ ಹಸಿವಾಗಿದೆ ಎಂದು ಭಾವಿಸಿ ಕೆಲವರು ಆಹಾರ ಸೇವಿಸಲು ಮುಂದಾಗುತ್ತಾರೆ. ಅಂತಹ ಸನ್ನಿವೇಶದಲ್ಲಿ ಆಹಾರ ತಿನ್ನುವ ಮೊದಲು ಒಂದು ಲೋಟ ನೀರು ಕುಡಿಯಬೇಕು. ಬಾಯಾರಿಕೆ ನೀಗಲು ಕೆಲ ನಿಮಿಷ ತೆಗೆದುಕೊಳ್ಳುತ್ತದೆ.
ಬಾಯಲ್ಲಿ ಹೆಚ್ಚು ನೀರೂರುವುದು
ದೇಹಕ್ಕೆ ತುಂಬಾ ಆಯಾಸವಾಗಿ ಹಸಿವು ಉತ್ತುಂಗಕ್ಕೇರಿದಾಗ ಬಾಯಲ್ಲಿ ಜೊಲ್ಲು ಹೆಚ್ಚಾಗಿ ಆವರಿಸಲು ಪ್ರಾರಂಭವಾಗುತ್ತದೆ. ಅದು ಹೊಟ್ಟೆಯನ್ನು ಸೇರುತ್ತದೆ. ಇದು ಕೂಡ ಹಸಿವಿನ ಒಂದು ಸೂಚನೆ. ಇದನ್ನೂ ಓದಿ: ಎಲೆಗಳು ಮಾತ್ರವಲ್ಲದೆ ತುಳಸಿ ಬೀಜಗಳೂ ಆರೋಗ್ಯಕ್ಕೆ ಒಳ್ಳೆಯದು!
ತಲೆನೋವು
ಎಷ್ಟೋ ಜನ ಹೆಚ್ಚು ಒತ್ತಡ ಆದಾಗ ತಲೆನೋವು ಬರುತ್ತದೆ ಎಂದು ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ತುಂಬಾ ಹಸಿವಾದಾಗಲೂ ತಲೆನೋವು ಬರುತ್ತದೆ. ಅಂತಹವರಿಗೆ ಆಹಾರ ಸೇವಿಸಿದಾಗ ತಲೆನೋವು ಕಡಿಮೆಯಾಗುತ್ತದೆ.
ಸಿಟ್ಟು
ಸಿಟ್ಟಾದವರನ್ನು ಕಂಡಾಗ, ಯಾರೋ ಕಿಚಾಯಿಸಿರಬಹುದು ಅಥವಾ ಬೇಸರವಾಗುವಂತೆ ನಡೆದುಕೊಂಡಿರಬಹುದು ಎಂದುಕೊಳ್ಳುವವರೇ ಹೆಚ್ಚು. ಆದರೆ ತೀವ್ರತರ ಹಸಿವು ಸಹ ಸಿಟ್ಟಿಗೆ ಕಾರಣವಾಗಬಹುದು ಎಂಬುದನ್ನು ಗಮನದಲ್ಲಿಡಿ. ಹಸಿವು ತಾಳ್ಮೆಯನ್ನು ಕೆಡಿಸುತ್ತದೆ. ಆಗ ಸಣ್ಣಪುಟ್ಟ ವಿಚಾರಗಳಿಗೂ ವ್ಯಕ್ತಿ ಸಿಟ್ಟಾಗಲು ಕಾರಣವಾಗುತ್ತದೆ.