ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಮಧ್ಯಾಹ್ನ ವೇಳೆ ಮನೆಯಿಂದ ಹೊರಬರಲು ಆತಂಕವಾಗುತ್ತದೆ. ಬಿಸಿಲ ತಾಪದಿಂದ ಜನರ ಆರೋಗ್ಯ ಹದಗೆಡುತ್ತಿದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಬೇಸಿಗೆಯ ಬಿಸಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಟ್ ಸ್ಟ್ರೋಕ್‌ಗೆ ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು. ಹೀಗಾಗಿ ಮನೆಯಿಂದ ಹೊರಡುವ ಮುನ್ನ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸಿ.
* ಉಡುಪು ಆರಾಮದಾಯಕವಾಗಿರಲಿ: ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಆರಾಮದಾಯಕವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಅತಿಯಾದ ಬೆವರುವಿಕೆ ಉಂಟಾಗುತ್ತದೆ. ಹೀಗಾಗಿ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ. ಹತ್ತಿ ಬಟ್ಟೆಗಳು ಹೆಚ್ಚು ಶಾಖವನ್ನು ಉಂಟುಮಾಡುವುದಿಲ್ಲ.
Advertisement
Advertisement
* ದೇಹವನ್ನು ಮುಚ್ಚಿಕೊಂಡು ಹೋಗಿ: ಮಧ್ಯಾಹ್ನದ ವೇಳೆ ಮನೆಯಿಂದ ಹೊರಗೆ ಹೋಗಬೇಕಾದರೆ ನಿಮ್ಮ ದೇಹವನ್ನು ಪೂರ್ಣವಾಗಿ ಮುಚ್ಚಿಕೊಳ್ಳಿ. ಮನೆಯಿಂದ ಹೊರಡುವಾಗ ಸ್ಕಾರ್ಫ್, ಛತ್ರಿ, ಪೂರ್ಣ ತೋಳಿನ ಅಂಗಿ, ಕ್ಯಾಪ್ ಇತ್ಯಾದಿಗಳನ್ನು ಧರಿಸಿಕೊಳ್ಳಿ. ಹೊರಗೆ ಹೋಗುವಾಗ ಬಾಟ್ಲಿಯಲ್ಲಿ ನೀರು ತೆಗೆದುಕೊಂಡು ಹೋಗಿ. ಇನ್ನು ಎಸಿಯಲ್ಲಿ ಕುಳಿತು ಕೆಲಸ ಮಾಡುವವರಾದರೆ ತಕ್ಷಣವೇ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ. ಇದು ಶಾಖದ ಹೊಡೆತಕ್ಕೂ ಕಾರಣವಾಗಬಹುದು. ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ 3 ದಿನ ಒಣಹವೆ – ಏ.18 ರಿಂದ ವಿವಿಧೆಡೆ ಮಳೆ
Advertisement
* ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ: ವಿಪರೀತ ಬಿಸಿಲು ಇರುವುದರಿಂದ ನಿಮ್ಮ ದೇಹವನ್ನು ನೀವು ಹೈಡ್ರೇಟ್ ಆಗಿಟ್ಟುಕೊಳ್ಳಿ. ಇದಕ್ಕಾಗಿ ಆಗಾಗ ನೀರು ಕುಡಿಯಿರಿ. ದಿನಕ್ಕೆ ಒಂದು ಬಾರಿಯಾದರೂ ಜ್ಯೂಸ್ ಕುಡಿಯಿರಿ. ದೇಹದಲ್ಲಿ ನೀರಿನ ಕೊರತೆಯಾದರೆ ನಿರ್ಜಲೀಕರಣ ಉಂಟಾಗುತ್ತದೆ. ಈ ಸಮಸ್ಯೆ ಉಂಟಾದರೆ ತಲೆತಿರುಗುವಿಕೆ ಮತ್ತು ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
Advertisement
* ಸನ್‌ಸ್ಕ್ರೀನ್ ಬಳಸಿ: ಬೇಸಿಗೆಯಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಸನ್ಬರ್ನ್ ಮತ್ತು ಟ್ಯಾನ್ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಮನೆಯಿಂದ ಹೊರಡುವಾಗ ಉತ್ತಮ ಗುಣಮಟ್ಟದ ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ. ಇದನ್ನು ಹಚ್ಚಿಕೊಂಡು 15 ನಿಮಿಷಗಳ ನಂತರ ಮಾತ್ರ ಮನೆಯಿಂದ ಹೊರಹೋಗಿ. ಇದು ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಹಾನಿಯಾಗದಂತೆ ತಡೆಯುತ್ತದೆ.
* ಹೊರಗಡೆ ಹೋಗೋದನ್ನು ತಪ್ಪಿಸಿ: ಸುಖಾಸುಮ್ಮನೆ ಬಿಸಿಲಿಗೆ ಹೊರಗಡೆ ಹೋಗುವುದನ್ನು ತಪ್ಪಿಸಿ. ಯಾಕೆಂದರೆ ಬಿಸಿಲಿನ ತಾಪದಲ್ಲಿ ಹೊರಗೆ ಹೋಗುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾದಷ್ಟು ಮನೆಯಲ್ಲಿಯೇ ಇರಲು ಪ್ರಯತ್ನಿಸಿ. ಇದನ್ನೂ ಓದಿ: ಮಗು ಆರೋಗ್ಯವಾಗಿ, ಫಿಟ್ ಆಗಿರಲು ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿ
* ಮಸಾಲೆಯುಕ್ತ ಆಹಾರ ಕಡಿಮೆ ಮಾಡಿ: ಈ ಋತುವಿನಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯಲ್ಲಿ ಕೆಲವೊಂದು ಸಮಸ್ಯೆಯನ್ನು ಎದುರಿಸಬಹುದು. ಹೀಗಾಗಿ ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ. ಅಲ್ಲದೇ ನಿಮ್ಮ ಆಹಾರದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಾಗಿರಲಿ.