ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕೋವಿಡ್‌ನ ಮೂರನೇ ಅಲೆ ಪ್ರಾರಂಭವಾಗಿ, ದಿನಕ್ಕೆ ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಾಗ ಕೋವಿಡ್ ಲಸಿಕೆಗಳ ಪ್ರಮಾಣಪತ್ರವನ್ನು ತೋರಿಸುವುದು ಅಗತ್ಯವಾಗಿದೆ.
ಆರೋಗ್ಯ ಸೇತು ಅಪ್ಲಿಕೇಶನ್ ಇಲ್ಲವೇ ಕೋವಿನ್ ಪೋರ್ಟಲ್‌ನಿಂದ ಕೋವಿಡ್-19 ಲಸಿಕೆಯ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡುವುದು ನಿಮಗೆ ತಿಳಿದಿರಬಹುದು. ಇದೀಗ ಸರ್ಕಾರ ವಾಟ್ಸಪ್‌ನಲ್ಲೂ ಲಸಿಕೆಯ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಅನುವು ಮಾಡಿದೆ. ಇದನ್ನೂ ಓದಿ: ಕಂಪನಿಗೆ ಮರಳುವ ಉದ್ಯೋಗಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯ – ಫೇಸ್‌ಬುಕ್ ಆದೇಶ
Advertisement
Advertisement
ಕೇವಲ ಒಂದು ಕ್ಲಿಕ್‌ನಿಂದ ಪ್ರಮಾಣಪತ್ರವನ್ನು ಪಡೆಯುವಂತಹ ಸೌಲಭ್ಯವನ್ನು ಸರ್ಕಾರ ಒದಗಿಸಿದ್ದು, ರೈಲು ಅಥವಾ ವಿಮಾನದಲ್ಲಿ ಪ್ರಯಾಣಿಸುವವರಿಗೆ ಈ ಸೇವೆ ಬಹಳ ಉಪಯುಕ್ತವಾಗಲಿದೆ. ಇದನ್ನು ಬಳಸುವ ಸುಲಭ ವಿಧಾನ ಹೀಗಿದೆ:
Advertisement
ಮೊದಲಿಗೆ ನಿಮ್ಮ ಮೊಬೈಲಿನಲ್ಲಿ 90131 51515 ಸಹಾಯವಣಿ ಸಂಖ್ಯೆಯನ್ನು ಉಳಿಸಿಕೊಳ್ಳಬೇಕು. ಚ್ಯಾಟ್ ಆಯ್ಕೆಯಲ್ಲಿ ಈ ಸಹಾಯವಾಣಿ ನಂಬರ್ ತೆಗೆದು ಅದರಲ್ಲಿ Certificate ಎಂದು ಟೈಪ್ ಮಾಡಿ ಕಳುಹಿಸಿ. ಎಸ್‌ಎಂಎಸ್ ಮೂಲಕ ನಿಮ್ಮ ಫೋನ್‌ಗೆ 6 ಅಂಕಿಯ ಒಟಿಪಿ ಬರುತ್ತದೆ. 3 ನಿಮಿಷಗಳ ಒಳಗಾಗಿ ಒಟಿಪಿ ನಂಬರ್ ಅನ್ನು ನಮೂದಿಸಿ, ಕಳುಹಿಸಿ. ಇದನ್ನೂ ಓದಿ: ವಾಟ್ಸಪ್ ಕಾರ್ಯ ಸ್ಥಗಿತ – ಆಂಡ್ರಾಯ್ಡ್, ಐಫೋನ್ ಫೋನ್‌ಗಳ ಪಟ್ಟಿ ಇಲ್ಲಿದೆ
Advertisement
ನಿಮ್ಮ ಫೋನ್ ನಂಬರ್‌ನಿಂದ ನೋಂದಾಯಿಸಿ, ಲಸಿಕೆ ಹಾಕಿಸಿಕೊಂಡ ವ್ಯಕ್ತಿಯ ಹೆಸರು ಕಾಣಿಸುತ್ತದೆ. ಅಂದರೆ ನಿಮ್ಮ ಫೋನ್ ನಂಬರ್‌ನಿಂದ ಒಬ್ಬರಿಗಿಂತ ಹೆಚ್ಚಿನವರು ನೋಂದಾಯಿಸಿದ್ದರೂ ಅವರ ಹೆಸರು ಗೋಚರಿಸುತ್ತದೆ. ನಿಮಗೆ ಯಾರ ಲಸಿಕೆಯ ಪ್ರಮಾಣ ಪತ್ರ ಬೇಕು ಅವರ ಹೆಸರಿನ ಮುಂದೆ ಇರುವ ಸಂಖ್ಯೆಯನ್ನು ಬರೆದು ಕಳುಹಿಸಿ. ಈಗ ನಿಮ್ಮ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಕೇವಲ 30 ಸೆಕೆಂಡುಗಳಲ್ಲಿ ಪಿಡಿಎಫ್ ಆವೃತ್ತಿಯಲ್ಲಿ ಪಡೆಯಬಹುದು.