ಚಪಾತಿ ನಂತರ ರೋಟಿ ಈಗ ಫುಲ್ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದು ಪಂಜಾಬಿ ಸ್ಟೈಲ್ ಆಗಿದ್ದು, ಎಲ್ಲ ಭಾರತೀಯರು ಇಷ್ಟಪಟ್ಟು ತಿನ್ನುವ ತಿನಿಸಿನಲ್ಲಿ ಇದು ಸಹ ಒಂದು. ಅದರಲ್ಲಿಯೂ ರೆಸ್ಟೋರೆಂಟ್ ಮತ್ತು ಹೋಟೆಲ್‍ನಲ್ಲಿ ಮಾಡುವ ತಂದೂರಿ ರೋಟಿ ಸ್ವಲ್ಪ ಹೆಚ್ಚು ಜನರು ಇಷ್ಟಪಡುತ್ತಾರೆ. ಅದಕ್ಕೆ ಇಂದು ತವಾ ಮೇಲೆ ಹೇಗೆ ತಂದೂರಿ ರೋಟಿ ಮಾಡಬಹುದು ಎಂದು ಸರಳ ವಿಧಾನದಲ್ಲಿ ಹೇಳಿಕೊಡುತ್ತಿದ್ದೇವೆ.
Advertisement
ಬೇಕಾಗಿರುವ ಪದಾರ್ಥಗಳು:
* ಗೋಧಿ ಹಿಟ್ಟು – 2ವರೆ ಕಪ್
* ಸಕ್ಕರೆ – 1 ಟೀಸ್ಪೂನ್
* ಬೇಕಿಂಗ್ ಪೌಡರ್ – 1 ಟೀಸ್ಪೂನ್
* ಅಡಿಗೆ ಸೋಡಾ – ಅರ್ಧ ಟೀಸ್ಪೂನ್
* ಉಪ್ಪು – ಅರ್ಧ ಟೀಸ್ಪೂನ್
* ಮೊಸರು – ಅರ್ಧ ಕಪ್
* ನೀರು – 1 ಕಪ್
* ಎಣ್ಣೆ – 2 ಟೇಬಲ್ಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ ಗೋಧಿ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್, ಅಡಿಗೆ ಸೋಡಾ ಮತ್ತು ಉಪ್ಪು ಹಾಕಿ ಸರಿಯಾಗಿ ಕಲಸಿ. * ನಂತರ ಅದಕ್ಕೆ ಮೊಸರು ಸೇರಿಸಿ ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ, 5 ನಿಮಿಷಗಳ ಕಾಲ ಬೆರೆಸುವುದನ್ನು ಮುಂದುವರಿಸಿ.
* ಈಗ 2 ಟೇಬಲ್ಸ್ಪೂನ್ ಎಣ್ಣೆಯನ್ನು ಸೇರಿಸಿ, ಹಿಟ್ಟು ನಯವಾಗಿ ಮತ್ತು ಮೃದುವಾಗುವವರೆಗೆ ನಾದಿಕೊಳ್ಳಿ. 1 ಗಂಟೆ ಮುಚ್ಚಿಡಿ.
* 1 ಗಂಟೆಯ ನಂತರ, ಹಿಟ್ಟನ್ನು ಮೃದುವಾಗಿರುವುದನ್ನು ಖಚಿತಪಡಿಸಿಕೊಳ್ಳಿ.
Advertisement
* ಚೆಂಡು ಗಾತ್ರದಲ್ಲಿ ಹಿಟ್ಟನ್ನು ತೆಗೆದು ಮತ್ತು ಗೋಧಿ ಹಿಟ್ಟಿನೊಂದಿಗೆ ಒತ್ತಿ ನಿಧಾನವಾಗಿ ರೋಲ್ ಮಾಡಿ. ರೋಟಿ ಸ್ವಲ್ಪ ದಪ್ಪವಾಗಿದೆಯೇ ಎಂದು ನೋಡಿ.
* ಈಗ ಸ್ವಲ್ಪ ನೀರು/ಎಣ್ಣೆ ಹಾಕಿ ರೋಟಿಯನ್ನು ವೃತ್ತಕಾರವಾಗಿ ಒತ್ತಿ.
* ಮಧ್ಯಮ ಉರಿಯಲ್ಲಿ ತವಾವನ್ನು ಬಿಸಿ ಮಾಡಿ, ರೋಟಿಯನ್ನು ತವಾಕ್ಕೆ ಹಾಕಿ. ಎರಡು ಕಡೆ ಸಮವಾಗಿ ಬೇಯಿಸಿ.
– ಅಂತಿಮವಾಗಿ, ತಂದೂರಿ ರೋಟಿ ಮೇಲೆ ಬೆಣ್ಣೆಯಾಕಿ, ನಿಮಗಿಷ್ಟವಾದ ಕರಿಯೊಂದಿಗೆ ಆನಂದಿಸಿ.