ಮಳೆಗಾಲ ಆರಂಭವಾಗಿದೆ, ಹೀಗಾಗಿ ವಾತಾವರಣ ತಂಬಾ ತಂಪಾಗಿದೆ. ಮನೆಯೊಳಗೆ ಬೆಚ್ಚಗೆ ಕುಳಿತು ಕಾಫಿ ಜೊತೆಗೆ ತಿನ್ನೋ ಸ್ನ್ಯಾಕ್ಸ್ ಮಾಡೋ ವಿಧಾನ ಇವತ್ತು ಹೇಳ್ಕೊಡ್ತಿನಿ. ಅದೇನಂದ್ರೆ ಕಡಲೆ ಸ್ಯಾಂಡ್‌ವಿಚ್! ಇದನ್ನು ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
ಬೇಕಾಗುವ ಪದಾರ್ಥಗಳು
ಬೇಯಿಸಿದ ಕಡಲೆ – 1 ಕಪ್
ಕತ್ತರಿಸಿದ ಈರುಳ್ಳಿ – ½ ಕಪ್
ಕತ್ತರಿಸಿದ ಕ್ಯಾಪ್ಸಿಕಂ – ½ ಕಪ್
ಬ್ರೆಡ್ – 4
ಚನಾ ಮಸಾಲ – ½ ಟೀಸ್ಪೂನ್
ಕೊತ್ತಂಬರಿ ಪುಡಿ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬೆಣ್ಣೆ – 1 ಟೀ ಸ್ಪೂನ್
ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಿ, ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಮ್ ಮತ್ತು ಬೇಯಿಸಿದ ಕಡಲೆ ಸೇರಿಸಿ, ಈರುಳ್ಳಿ ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಬೇಕು. ಇದಾದ ಬಳಿಕ ಚನಾ ಮಸಾಲ, ಧನಿಯಾ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಬೇಕು.
ಬಳಿಕ ಒಂದು ಬ್ರೆಡ್‌ಗೆ ಗ್ರೀನ್ ಚಟ್ನಿ ಹಚ್ಚಬೇಕು. ಬಳಿಕ ಎರಡು ಬ್ರೆಡ್ ನಡುವೆ ಮೊದಲೇ ತಯಾರಿಸಿಟ್ಟಿದ್ದ ಮಸಾಲೆಯನ್ನು ಸೇರಿಸಿ, ಎರಡೂ ಬದಿಗಳಲ್ಲಿ ಬೆಣ್ಣೆ ಹಚ್ಚಿ ಮತ್ತು 3-4 ನಿಮಿಷಗಳ ಕಾಲ ಟೋಸ್ಟರ್‌ನಲ್ಲಿ ಇಡಬೇಕು. ಈಗ ರುಚಿಯಾದ ಸ್ಯಾಂಡ್‌ವಿಚ್ ರೆಡಿ! ಇದನ್ನೂ ಮಳೆಬರುವಾಗ ಸವಿಯುತ್ತಿದ್ದರೆ ಅದರ ಮಜಾವೇ ಬೇರೆ!