Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮ್ಯೂಸಿಯಂನಲ್ಲಿ ಸಿಕ್ಕ ಫೋಟೋ ಕೊಟ್ಟ ಸುಳಿವು – ಕಾಶ್ಮೀರದಲ್ಲಿ 2,000 ವರ್ಷ ಹಳೆಯ ಬೌದ್ಧ ಸ್ತೂಪ ಪತ್ತೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮ್ಯೂಸಿಯಂನಲ್ಲಿ ಸಿಕ್ಕ ಫೋಟೋ ಕೊಟ್ಟ ಸುಳಿವು – ಕಾಶ್ಮೀರದಲ್ಲಿ 2,000 ವರ್ಷ ಹಳೆಯ ಬೌದ್ಧ ಸ್ತೂಪ ಪತ್ತೆ!

Latest

ಮ್ಯೂಸಿಯಂನಲ್ಲಿ ಸಿಕ್ಕ ಫೋಟೋ ಕೊಟ್ಟ ಸುಳಿವು – ಕಾಶ್ಮೀರದಲ್ಲಿ 2,000 ವರ್ಷ ಹಳೆಯ ಬೌದ್ಧ ಸ್ತೂಪ ಪತ್ತೆ!

Public TV
Last updated: January 20, 2026 10:35 pm
Public TV
Share
3 Min Read
how stupas found in zehanpora highlight kashmirs rich buddhist past 4
SHARE

ಬೌದ್ಧ ಧರ್ಮದ ತವರಾದ ಭಾರತದ ಹಲವೆಡೆ ಸ್ತೂಪಗಳು, ಬೌದ್ಧ ಬಿಕ್ಕುಗಳು ವಾಸವಾಗಿದ್ದ ನೆಲೆಗಳು ಮಣ್ಣಿನಲ್ಲಿ ಅಂತರ್ಗತವಾಗಿ ಹೋಗಿವೆ. ಅದರಲ್ಲಿ ಎಷ್ಟೋ ಅವಶೇಷಗಳು ಸಿಕ್ಕಿವೆ.. ಇನ್ನೂ ಕೆಲವು ಇಂದಿಗೂ ಸಿಗುತ್ತಲೇ ಇವೆ. ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಜೆಹಾನ್‌ಪೋರಾದಲ್ಲಿ ಪತ್ತೆಯಾದ ಸಾವಿರಾರು ವರ್ಷಗಳ ಹಿಂದಿನ ಮೂರು ಬೌದ್ದ ಸ್ತೂಪಗಳು. ಹೌದು ಸುಮಾರು 2000 ವರ್ಷಗಳ ಹಿಂದಿನ ಬೌದ್ಧ ಸ್ತೂಪಗಳು ಬಾರಾಮುಲ್ಲಾದಲ್ಲಿ ಪತ್ತೆಯಾಗಿವೆ. ಇದರ ಪತ್ತೆಗೆ ಕಾರಣವಾಗಿದ್ದು ಫ್ರಾನ್ಸ್‌ನಲ್ಲಿರೋ ಫೋಟೋ ಎಂಬುದು ಅಚ್ಚರಿಯ ವಿಚಾರವಾಗಿದೆ. ಈ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. 

how stupas found in zehanpora highlight kashmirs rich buddhist past 2 1

ಫ್ರಾನ್ಸ್‌ನಲ್ಲಿ ಪತ್ತೆಯಾದ ಫೋಟೋ
ಕಾಶ್ಮೀರದಿಂದ ಸಾವಿರಾರು ಮೈಲು ದೂರದಲ್ಲಿರುವ ಫ್ರಾನ್ಸ್‌ನ ವಸ್ತುಸಂಗ್ರಹಾಲಯದಲ್ಲಿ ಬಾರಾಮುಲ್ಲಾದಲ್ಲಿನ ಮೂರು ಬೌದ್ಧ ಸ್ತೂಪಗಳಿರುವ ಹಳೆಯ ಫೋಟೊ ಪತ್ತೆಯಾಗಿದೆ. ಇಷ್ಟು ದಿನಗಳ ಕಾಲ 10 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಈ ದಿಬ್ಬಗಳನ್ನು ಸಾಮಾನ್ಯ ದಿಬ್ಬಗಳು ಎಂದು ಜನರು ಭಾವಿಸಿದ್ದರು. ಆದರೆ, ಪುರಾತತ್ವ ಶಾಸ್ತ್ರಜ್ಞರು ಆ ಸ್ಥಳವನ್ನು ಅಧ್ಯಯನ ಮಾಡಿದ ಬಳಿಕ ಅದು ಮಾನವ ನಿರ್ಮಿತ ರಚನೆಗಳು ಎಂದು ಗುರುತಿಸಿದ್ದಾರೆ. ಇದಕ್ಕಾಗಿ ಡ್ರೋನ್ ಮೂಲಕ ಚಿತ್ರಗಳನ್ನು ತೆಗೆಯಲಾಗಿತ್ತು.

how stupas found in zehanpora highlight kashmirs rich buddhist past

2023 ರಲ್ಲಿ, ಫೆಲೋಶಿಪ್‌ನಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದವರು ಅಲ್ಲಿನ ವಸ್ತುಸಂಗ್ರಹಾಲಯ ಒಂದಲ್ಲಿರುವ ಫೋಟೋದಲ್ಲಿ ಕಾಶ್ಮೀರದಲ್ಲಿರುವ ಈ ಸ್ಥಳವನ್ನು ಗುರುತಿಸಿದ್ದರು. ಬ್ರಿಟಿಷರು ಲಾಹೋರ್ ಮತ್ತು ಹಿಂದಿನ ತಕ್ಷಶಿಲಾ (ವಾಯುವ್ಯ ಪಾಕಿಸ್ತಾನ) ಮೂಲಕ ಕಾಶ್ಮೀರಕ್ಕೆ ಪ್ರಯಾಣಿಸುವಾಗ ಸೆರೆಹಿಡಿದ ಫೋಟೋ ಅದಾಗಿದೆ.  

ಡ್ರೋನ್ ಸಮೀಕ್ಷೆ
ಡ್ರೋನ್ ಸಮೀಕ್ಷೆಗಳು ಗ್ರಾಮದಲ್ಲಿನ ದಿಬ್ಬಗಳು ನೈಸರ್ಗಿಕ ರಚನೆಗಳಲ್ಲ, ಮಾನವ ನಿರ್ಮಿತವಾದದ್ದು ಎಂದು ಬಹಿರಂಗಪಡಿಸಿವೆ.  ಪುರಾತತ್ವ ಇಲಾಖೆ, ಜಮ್ಮು ಮತ್ತು ಕಾಶ್ಮೀರ ವಸ್ತು ಸಂಗ್ರಹಾಲಯ ಮತ್ತು ಕಾಶ್ಮೀರ ವಿಶ್ವವಿದ್ಯಾಲಯಗಳು ಜಂಟಿಯಾಗಿ ಉತ್ಖನನವನ್ನು ನಡೆಸಿವೆ. 

how stupas found in zehanpora highlight kashmirs rich buddhist past 2

ಜೆಹಾನ್‌ಪೋರಾದಲ್ಲಿ ಮರುಶೋಧನೆ ಕಾಶ್ಮೀರದ ಐತಿಹಾಸಿಕ ಸ್ಥಳದ ನಾಗರಿಕತೆಯನ್ನು ತಿಳಿಸುತ್ತದೆ. ಇದು ದೀರ್ಘಕಾಲದಿಂದ ಮುಚ್ಚಿಹೋಗಿದ್ದ ಕಾಶ್ಮೀರದ ಬೌದ್ಧ ಪರಂಪರೆಯನ್ನು ಬೆಳಕಿಗೆ ತರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಐತಿಹಾಸಿಕ ಮಹತ್ವ
ಜೆಹಾನ್‌ಪೋರಾ ಪ್ರಾಚೀನ ಕಾಶ್ಮೀರದಲ್ಲಿ ಪ್ರಮುಖ ಬೌದ್ಧ ಕೇಂದ್ರವಾಗಿತ್ತು ಎಂದು ನಂಬಲಾಗಿದೆ. ಇದು ಗಾಂಧಾರ ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ವ್ಯಾಪಾರ ಮಾರ್ಗವಾಗಿತ್ತು. ಈ ಸ್ಥೂಪಗಳು ಕುಶಾನರ ಕಾಲದ್ದಾಗಿರಬಹುದು ಎನ್ನಲಾಗಿದೆ. 

how stupas found in zehanpora highlight kashmirs rich buddhist past 3

ಕುಶಾನರ ಕಾಲವು ಮೌರ್ಯ ಸಾಮ್ರಾಜ್ಯದ ಪತನದ ನಂತರ ಭಾರತದಲ್ಲಿ ಸ್ಥಾಪಿತವಾದ ಒಂದು ವಿಶಾಲ ಸಾಮ್ರಾಜ್ಯವಾಗಿದೆ. ಕುಶಾನರ ಸಾಮ್ರಾಜ್ಯ ಉತ್ತರ ಭಾರತದಿಂದ ಮಧ್ಯ ಏಷ್ಯಾದವರೆಗೆ ವ್ಯಾಪಿಸಿತ್ತು. ಇವರು ಗಾಂಧಾರ ಕಲೆ ಮತ್ತು ಮಹಾಯಾನ ಬೌದ್ಧ ಧರ್ಮವನ್ನು ಬೆಳೆಸಿದರು. ಇವರ ಚರಿತ್ರೆ ತಿಳಿಯಲು ಹಲವಾರು ಶಾಸನ, ನಾಣ್ಯ ಮತ್ತು ಸಾಹಿತ್ಯ ಕೃತಿಗಳು ಲಭ್ಯವಿವೆ. ಇವರ ಕಾಲದಲ್ಲಿ ನಾಲ್ಕನೇ ಬೌದ್ಧ ಸಮ್ಮೇಳನವು ಕ್ರಿ.ಶ 100ರಲ್ಲಿ ಕಾಶ್ಮೀರದ ಕುಂಡಲವನದಲ್ಲಿ ನಡೆದಿತ್ತು.

how stupas found in zehanpora highlight kashmirs rich buddhist past 1

ಬೌದ್ಧಧರ್ಮದ ವಿಕಸನ, ಹರಡುವಿಕೆಯಲ್ಲಿ ಕಾಶ್ಮೀರದ ಪಾತ್ರ
ರಾಜ ಸುರೇಂದ್ರ ಕಾಶ್ಮೀರದಲ್ಲಿ ಅನೇಕ ಸ್ತೂಪಗಳನ್ನು ನಿರ್ಮಿಸಿದ್ದಾನೆಂದು ನಂಬಲಾಗಿದೆ. ಈ ಬಗ್ಗೆ ರಾಜತರಂಗಿಣಿಯಲ್ಲಿ ಅನೇಕ ಉಲ್ಲೇಖಗಳು ಇವೆ. ಈ ಪ್ರದೇಶದಲ್ಲಿ ಇಂಡೋ-ಗ್ರೀಕ್ ಆಡಳಿತಗಾರ ಮೆನಾಂಡರ್ ಮತ್ತು ಬೌದ್ಧ ಸನ್ಯಾಸಿ ನಾಗಸೇನರ ಬೌದ್ಧಧರ್ಮದ ಕುರಿತು ಸಂವಾದವು ನಡೆದಿತ್ತು. ಇದು ಈ ಪ್ರದೇಶದಾದ್ಯಂತ ಬೌದ್ಧಧರ್ಮವನ್ನು ಮತ್ತಷ್ಟು ಬಲಪಡಿಸಿತ್ತು.  ಕಾಲನಂತರ ಕಾಶ್ಮೀರದ ಮಿಷನರಿ ಸನ್ಯಾಸಿಗಳಿಂದ ಚೀನಾ ಮತ್ತು ಮಧ್ಯ ಏಷ್ಯಾದಾದ್ಯಂತ ಹರಡಿತು.

ಪ್ರಧಾನಿ ಮೋದಿ ಮಾತು
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಪುರಾತತ್ತ್ವ  ಸಂಶೋಧನೆಯು ಕಾಶ್ಮೀರದ ಬೌದ್ಧ ಭೂತಕಾಲವನ್ನು ಬೆಳಕಿಗೆ ತಂದಿದೆ. ಈ ಆವಿಷ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. ಇದು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ತೋರಿಸಿದೆ. ಇದು ಎರಡು ಸಾವಿರ ವರ್ಷಗಳ ಹಿಂದಿನ ಕಾಶ್ಮೀರದ ಗತವೈಭವಕ್ಕೆ ಸಾಕ್ಷಿಯಾಗಿದೆ ಎಂದು ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

TAGGED:BuddhistfranceJammu and KashmirStupaZehanpora
Share This Article
Facebook Whatsapp Whatsapp Telegram

Cinema news

Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood
ranveer singh deepika padukone 2
ಬಿಷ್ಣೋಯ್ ಗ್ಯಾಂಗ್‌ ಹೆಸರಲ್ಲಿ ರಣವೀರ್ ಸಿಂಗ್‌ಗೆ ಬೆದರಿಕೆ – ವಾಯ್ಸ್‌ ಮೆಸೇಜ್‌ನಲ್ಲಿ ಕೋಟಿ ಕೋಟಿ ಡಿಮ್ಯಾಂಡ್‌
Bollywood Cinema Crime Latest Top Stories
Gilli
ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ
Cinema Latest Sandalwood Top Stories

You Might Also Like

OM BIRLA RAHUL GANDHI
Latest

ಲೋಕಸಭಾ ಸ್ಪೀಕರ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ – ಮಾ.9 ರಂದು ಚರ್ಚೆ ಸಾಧ್ಯತೆ

Public TV
By Public TV
39 minutes ago
Canada Shooting 1
Latest

ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ – ಶಂಕಿತ ಗನ್‌ಮ್ಯಾನ್‌ ಸೇರಿ 10 ಮಂದಿ ಸಾವು

Public TV
By Public TV
57 minutes ago
Bengaluru Basavanagudi Theft Arrest
Bengaluru City

ಕಾರಿನ EMI ಕಟ್ಟಲು ದೊಡ್ಡಮ್ಮ ಕೆಲಸ ಮಾಡ್ತಿದ್ದ ಮನೆಯಲ್ಲೇ ಕಳ್ಳತನ – ಆರೋಪಿ ಅರೆಸ್ಟ್

Public TV
By Public TV
1 hour ago
daily horoscope dina bhavishya
Astrology

ದಿನ ಭವಿಷ್ಯ: 11-02-2026

Public TV
By Public TV
2 hours ago
Haveri APMC Scam For Farmer
Districts

ಕಷ್ಟಪಟ್ಟು ಬೆಳೆದ ರೈತರಿಗೆ ತೂಕದಲ್ಲಿ ಮೋಸ – ಹಾವೇರಿ ಎಪಿಎಂಸಿಯಲ್ಲಿ ರೈತರ ಆಕ್ರೋಶ

Public TV
By Public TV
2 hours ago
Spicy Honey Chicken Wings 2
Bengaluru City

ಏರ್ ಫ್ರೈಯರ್ ಸ್ಪೈಸಿ ಹನಿ ಚಿಕನ್ ವಿಂಗ್ಸ್ ಟೇಸ್ಟ್‌ ಮಾಡಿದ್ದೀರಾ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?