ಟ್ವಿಟರ್ ನಲ್ಲಿ ಮೋದಿಯನ್ನು ಹಿಂದಿಕ್ಕಿದ ರಾಹುಲ್ ಗಾಂಧಿ

Public TV
2 Min Read
rahul modi F

ಬೆಂಗಳೂರು: ಟ್ವಿಟರ್ ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಿಂತ ಹೆಚ್ಚು ರೀಟ್ವೀಟ್ ಪಡೆಯುವದರ ಮೂಲಕ ಮೇಲುಗೈ ಸಾಧಿಸಿದ್ದಾರೆ.

ಕೆಲವು ವಾರಗಳಲ್ಲಿ ಪ್ರಧಾನಿ ಮೋದಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ ಗಿಂತ ರಾಹುಲ್ ಗಾಂಧಿ ಹೆಚ್ಚಿನ ರೀಟ್ವೀಟ್ ಪಡೆದುಕೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ತನ್ನ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.

47 ವರ್ಷದ ರಾಹುಲ್ ಗಾಂಧಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಟ್ವಿಟರ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

Rahul Modi

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಈ ಬಗ್ಗೆ ಮಾತನಾಡಿ ಸೂಕ್ತ ಸಮಯ್ಕಕೆ ನಮ್ಮ ಅಭಿಪ್ರಾಯಗಳನ್ನು ಹೇಳುವುದು ಹಾಗು ಹೆಚ್ಚು ಪ್ರಚಲಿತ ವಿಷಯಗಳ ಬಗ್ಗೆ ಚರ್ಚೆಗಳನ್ನು ಮಾಡುತ್ತಿದ್ದೇವೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಜನರು ಸಹ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ಹಾಗೇ ನಮ್ಮ ಮತ್ತಷ್ಟು ಬೆಂಬಲಿಗರನ್ನು ಸಾಮಾಜಿಕ ಜಾಲತಾಣಗಳಿಗೆ ತರುತ್ತಿದ್ದೇವೆ ಎಂದಿದ್ದಾರೆ.

`ಮೋದಿಜೀ ನೋಡಿ, ಅಮೆರಿಕದ ಅಧ್ಯಕ್ಷ ಟ್ರಂಪ್ ಅವರಿಗೆ ನಿಮ್ ಹಗ್ ಬೇಕಾಗಿದೆ ಅನ್ನಿಸುತ್ತಿದೆ’ ಎಂದು ಅಕ್ಟೋಬರ್ 15 ರಂದು ರಾಹುಲ್ ಗಾಂಧಿ ಅವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಈ ಟ್ವೀಟ್ 19,700ಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. ರಾಹುಲ್ ಗಾಂಧಿ ಜೂನ್‍ನಿಂದ ಸೆಪ್ಟಂಬರ್‍ ವರೆಗಿನ ಅವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್‍ಗಳನ್ನು ಹೆಚ್ಚಿಸಿಕೊಂಡಿದ್ದಾರೆ.

rahula Gandhi tweet

2015ರ ಮೊದಲ ಭಾಗದಲ್ಲಿ ಅರವಿಂದ ಕೇಜ್ರಿವಾಲ್ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ವಿಜಯದೊಂದಿಗೆ ಟ್ವಿಟ್ಟರ್‍ನಲ್ಲಿ ಮುಂದಿದ್ದರು. ಅವರು ಪೋಸ್ಟ್ ಮಾಡಿದ ಪ್ರತಿ ಟ್ವೀಟ್‍ ಗೂ ಸರಾಸರಿ 1665 ರೀಟ್ವೀಟ್ ಬರುತ್ತಿತ್ತು. ಈ ಸಂದರ್ಭದಲ್ಲಿ ಮೋದಿ ಅವರ ಟ್ವೀಟ್‍ಗೆ ಸರಾಸರಿ 1342 ರೀಟ್ವೀಟ್ ಬರುತ್ತಿತ್ತು.

2015ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಈ ವೇಳೆ ಮೋದಿ ಅರವಿಂದ್ ಕೇಜ್ರಿವಾಲ್‍ಗಿಂತ ಮುಂದೆ ಇದ್ದರು. ಒಂದು ವರ್ಷದ ನಂತರ ರಾಹುಲ್ ಗಾಂಧಿ ಟ್ವೀಟ್ ಮಾಡುತ್ತಿದ್ದರೂ ಮೋದಿ ಮೊದಲ ಸ್ಥಾನದಲ್ಲಿದ್ದರು.

modi tweet

ಈ ವರ್ಷ ಸೆಪ್ಟೆಂಬರ್‍ನಲ್ಲಿ ರಾಹುಲ್ ಗಾಂಧಿ ಟ್ವಿಟ್ಟರ್ ರೇಸ್‍ನಲ್ಲಿ ಮುಂದಿದ್ದು ಅವರ ಟ್ವೀಟ್‍ಗಳಿಗೆ ಸರಾಸರಿ 2784 ರೀಟ್ವೀಟ್‍ಗಳು ಸಿಗುತ್ತಿದ್ದರೆ, ಮೋದಿ ಅವರ ಟ್ವೀಟ್‍ಗೆ 2506 ಹಾಗೂ ಕೇಜ್ರಿವಾಲ್ ಅವರ ಟ್ವೀಟ್‍ಗೆ 1722 ರೀಟ್ವೀಟ್‍ಗಳು ಸಿಗುತ್ತಿವೆ ಎಂದು ವರದಿಯಾಗಿದೆ.

ಜುಲೈನಲ್ಲಿ ಮಾಜಿ ಸಂಸದೆ ರಮ್ಯಾ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾದ ಬಳಿಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ರಮ್ಯಾ ಅವರು ಪ್ರಚಲಿತ ಬೆಳವಣಿಗೆಗಳ ಬಗ್ಗೆ ಒಂದೇ ಸಾಲಲ್ಲಿ ಮೋದಿ, ಬಿಜೆಪಿ ಬಗ್ಗೆ ಬರೆದು ಪೋಶ್ಟ್ ಮಾಡುತ್ತಿರುತ್ತಾರೆ.

ramya tweet

rahul gandhi R

modi bjp prime minister

ramya congress

Share This Article
Leave a Comment

Leave a Reply

Your email address will not be published. Required fields are marked *