ಸಮಂತಾ ಜೊತೆಗಿನ ಸಂಬಂಧಕ್ಕೆ ನಾಗಚೈತನ್ಯ ಫುಲ್ ಸ್ಟಾಪ್ ಇಟ್ಟ ಮೇಲೆ ನಟಿ ಶೋಭಿತಾ ಜತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದೆ. ಈ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ನಾಗಚೈತನ್ಯಗೆ ಶೋಭಿತಾ ಕುರಿತ ಪ್ರಶ್ನೆ ಎದುರಾಗಿದೆ. ಈ ಕುರಿತು ನಟ ನೀಡಿರುವ ಉತ್ತರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ನಾಗಚೈತನ್ಯ ಮತ್ತು ಸಮಂತಾ ಕಳೆದ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಬಳಿಕ ಶೋಭಿತಾ ಮತ್ತು ನಾಗಚೈತನ್ಯ ಪರಸ್ಪರ ಪ್ರೀತಿಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಕೂಡ ಆಗುತ್ತಿದೆ. ಈ ಬೆನ್ನಲ್ಲೇ `ಲಾಲ್ ಸಿಂಗ್ ಚಡ್ಡಾ’ ಸಂದರ್ಶನದಲ್ಲಿ ನಾಗಚೈತನ್ಯಗೆ ಶೋಭಿತಾ ಕುರಿತು ಪ್ರಶ್ನೆ ಎದುರಾಗಿದೆ. ನಿರೂಪಕಿ ಶೋಭಿತಾ ಜತೆಗಿನ ಒಡನಾಟದ ಬಗ್ಗೆ ಕೇಳಿದ್ದಾರೆ. ಇದನ್ನೂ ಓದಿ:ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್



