ನವದೆಹಲಿ: ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಡ್ರೋನ್, ಫೈಟರ್ ಜೆಟ್ (Fighter Jets) ಹಾಗೂ ಕ್ಷಿಪಣಿ ದಾಳಿಯನ್ನು ಭಾರತೀಯ ಸಶಸ್ತ್ರ ಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸಿವೆ. ಜೊತೆಗೆ ಪ್ರತೀಕಾರದ ದಾಳಿ ನಡೆಸಿರುವ ಭಾರತ ಸ್ವದೇಶಿ ನಿರ್ಮಿತ ʻಆಕಾಶ್ʼ ಕ್ಷಿಪಣಿ (Akash Missile) ಸೇರಿ ಒಟ್ಟು ಮೂರು ರಾಷ್ಟ್ರಗಳು ತಯಾರಿಸಿದ ಕ್ಷಿಪಣಿಗಳನ್ನು ಪರಿಣಾಮಕಾರಿಯಾಗಿ ಬಳಸಿ ದಾಳಿ ನಡೆಸಿರುವುದಾಗಿ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಹೌದು.. ಆಪರೇಷನ್ ಸಿಂಧೂರ (Operation Sindoor) ಪಾರ್ಟ್-1 ಮತ್ತು ಪಾರ್ಟ್-2ನಲ್ಲಿ ರಷ್ಯಾ, ಇಸ್ರೇಲ್ ಹಾಗೂ ನಾವು (ಭಾರತ) ನಿರ್ಮಿಸಿದ ಮೂರು ರಾಷ್ಟ್ರಗಳ ವೆಪನ್ ಬಳಸಿ ಪಾಕ್ ಉಗ್ರರ ತಾಣಗಳು, ಬಂದರು ಇತರ ಪ್ರಮುಖ ನೆಲೆಗಳನ್ನು ಛಿದ್ರ, ಛಿದ್ರ ಮಾಡಿವೆ. 1971ರ ಬಳೀಕ ಕರಾಚಿ ಬಂದರಿನ ಮೇಲೂ ದಾಳಿ ನಡೆಸಿ, ಶತ್ರುಗಳಲ್ಲಿ ನಡುಕ ಹುಟ್ಟಿಸಿವೆ. ಚೀನಾ ನಿರ್ಮಿತ ಪವರ್‌ಫುಲ್ ಶಸ್ತ್ರಾಸ್ತ್ರಗಳನ್ನು (Chinese weapon) ಭೇಸಿದಿ ಪಾಕ್ ಪತರುಗುಟ್ಟುವಂತೆ ಮಾಡಿದ್ದು ಈ ಅಸ್ತ್ರಗಳೇ ಅನ್ನುವುದು ಗಮನಾರ್ಹ.
ಯಾವ ಅಸ್ತ್ರ – ಯಾವ ದೇಶ ನಿರ್ಮಿಸಿದ್ದು?
1. ಸುದರ್ಶನ್ ಚಕ್ರ – S-400 ಮಿಸೈಲ್ – ರಷ್ಯಾ ನಿರ್ಮಿತ
2. ಕಾಮಿಕಾಜ್ ಡ್ರೋನ್ – ಭಾರತ ನಿರ್ಮಿತ
3. ಏರ್ ಮಿಸೈಲ್ – ಭಾರತ ನಿರ್ಮಿತ
4. ಹಾರ್ಪಿ ಡ್ರೋನ್ – ಇಸ್ರೇಲ್ ನಿರ್ಮಿತ
5. ಡೀಪ್ ಸ್ಟ್ರೈಕ್ ಕ್ರೂಸರ್ ಕ್ಷಿಪಣಿ – ಭಾರತ ನಿರ್ಮಿತ
2ಕ್ಕೂ ಹೆಚ್ಚು ಫೂಟರ್ ಜೆಟ್ ಉಡೀಸ್:
ಕ್ಷಿಪಣಿ ದಾಳಿಗಷ್ಟೇ ನಿಲ್ಲದ ಭಾರತೀಯ ಸೇನೆಯ ಪರಾಕ್ರಮ ಇನ್ನೂ ಮುಂದುವರಿಯಿತು. ಚೀನಾ ನಿರ್ಮಿತ ಜೆಎಫ್-10, JF-17 ಅಮೆರಿಕ ನಿರ್ಮಿತ ಎಫ್-16 ಶಕ್ತಿಶಾಲಿ ಫೈಟರ್‌ಜೆಟ್ ಹಾಗೂ ಡ್ರೋನ್, ಕ್ಷಿಪಣಿಗಳನ್ನ ಸಾಲು ಸಾಲಾಗಿ ಹೊಡೆದುರುಳಿಸಿತು. ಈ ಕಾರ್ಯಾಚರಣೆಯಲ್ಲಿ ಭಾರತ ಈ ಕಾರ್ಯಾಚರಣೆಯಲ್ಲಿ L-70 ಗನ್, ಆಕಾಶ್, MRSAM, Zu-23, L-70 ಮತ್ತು ಶಿಲ್ಕಾ ಡಿಫೆನ್ಸ್ ಸಿಸ್ಟಮ್‌ಗಳನ್ನ ಬಳಕೆ ಮಾಡಿತ್ತು. ಶತ್ರುಗಳ ವಾಯುದಾಳಿಗಳನ್ನು ಸಮರ್ಥವಾಗಿ ಎದುರಿಸಬಲ್ಲ ಈ ರಕ್ಷಣಾ ವ್ಯವಸ್ಥೆಗಳು ಪಾಕ್‌ಗೆ ದಿಟ್ಟ ಉತ್ತರ ನೀಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವು.
ಗುರುವಾರ ಭಾರತೀಯ ನಗರಗಳನ್ನ (Indian Cities) ಟಾರ್ಗೆಟ್ ಮಾಡಿದ್ದ ಪಾಕ್‌ಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆ, ಲಾಹೋರ್‌ನಲ್ಲಿರುವ ರೆಡಾರ್ ಕೇಂದ್ರವನ್ನೇ ಧ್ವಂಸ ಮಾಡಿತ್ತು. ಶೇಖ್‌ಪುರ, ಸಿಯಾಲ್ ಕೋಟ್, ಗುಜರನ್ ವಾಲಾ ಮತ್ತು ನರೊವಾಲಾ ಮತ್ತ ಚಕ್ವಾಲ್ ಮೇಲೂ ಭಾರತದ ಕಾಮಕಾಜಿ ಡ್ರೋನ್ ದಾಳಿ ನಡೆಸಿತ್ತು. ಒಟ್ಟು 25 ಕ್ಷಿಪಣಿಗಳನ್ನು ಭಾರತ ಹಾರಿಸಿತ್ತು, ಇದರಲ್ಲಿ 7 ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯನ್ನ ಗುರಿಯಾಗಿಸಿದ್ದವು. ಆದರೂ ಕಿತಾಪತಿ ಬಿಡದ ಪಾಕಿಸ್ತಾನ ರಾತ್ರಿ ವೇಳೆಗೆ ಜಮ್ಮುವಿನ ಮೇಲೆ 100 ಕ್ಷಿಪಣಿಗಳಿಂದ ದಾಳಿ ನಡೆಸಿತ್ತು. ಇದಕ್ಕೆ ಕೆರಳಿ ಕೆಂಡವಾದ ಭಾರತ ಏಕಾಏಕಿ ನೂರಕ್ಕೂ ಹೆಚ್ಚು ಕ್ಷಿಪಣಿಗಳನ್ನ ಪಾಕ್ ಮೇಲೆ ಹಾರಿಸಿತು. ಇದರಿಂದ ಪಾಕ್‌ನ 16 ನಗರಗಳಲ್ಲಿ ಭಾರೀ ಹಾನಿ ಸಂಭವಿಸಿದೆ.