ಬೆಂಗಳೂರು: ಅಂಬಿಡೆಂಟ್ ಡೀಲ್ ಕೇಸ್‍ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೆಸರು ಬಂದಿರುವ ಹಿಂದೆ ಮಹತ್ವದ ಅಂಶಗಳಿದ್ದು, ಜನಾರ್ದನ ರೆಡ್ಡಿ ಅವರು ಎನ್ನೋಬೆಲ್ ಇಂಡಿಯಾ ಚಿಟ್‍ಫಂಡ್ ಕಂಪನಿ ನಿದೇರ್ಶಕರಾಗಿದ್ದೇ ಪ್ರಕರಣಲ್ಲಿ ಸಿಸಿಬಿ ಪೊಲೀಸರಿಗೆ ಅನುಮಾನ ಉಂಟಾಗಲು ಕಾರಣವಾಗಿದೆ ಎನ್ನಲಾಗಿದೆ.
ಬಳ್ಳಾರಿಯಲ್ಲಿ ಎನ್ನೋಬೆಲ್ ಇಂಡಿಯಾ ಚಿಟ್‍ಫಂಡ್ ಕಂಪನಿ ಪ್ರಸಿದ್ಧ ಸಂಸ್ಥೆಯಾಗಿದ್ದು, ಸದ್ಯ ಇದೇ ಕಂಪನಿಯ ಹೆಸರಲ್ಲಿ 57 ಕೆಜಿ ಖರೀದಿ ಮಾಡಿದ್ದ ಚಿನ್ನದ ಬಿಲ್ ಲಭ್ಯವಾಗಿತ್ತು. ಈ ಕುರಿತು ಫರೀದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಇದೇ ವೇಳೆ ತಾಜ್ ವೆಸ್ಟ್ ಎಂಡ್ ಡೀಲ್ ಸತ್ಯ ಸಿಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ಬಳ್ಳಾರಿಯ ರಾಜ್ ಮಹಲ್ ಜುವೆಲರ್ಸ್ ಮಾಲೀಕ ರಮೇಶ್, 57 ಕೆಜಿ ಚಿನ್ನದ ಬಿಲ್ ನ್ನು ಜನಾರ್ದನ ರೆಡ್ಡಿ ಒಡೆತನದ ಎನ್ನೋಬೆಲ್ ಇಂಡಿಯಾ ಚಿಟ್‍ಫಂಡ್ ಕಂಪನಿ ಹೆಸರಲ್ಲಿ ಮಾಡಿದ್ದರು. ಈ ವೇಳೆ ಎನ್ನೋಬೆಲ್ ಇಂಡಿಯಾ ಚಿಟ್‍ಫಂಡ್ ಸಂಸ್ಥೆಗೆ ಹೆಸರಿಗೆ ಬಂದ ಬಿಲ್ ಅನ್ವಯವಾಗಿ ಅಲಿಖಾನ್ ಡೀಲ್ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ರೆಡ್ಡಿ ಆಪ್ತರಾಗಿದ್ದ ಅಲಿಖಾನ್ ಹೆಸರು ಪ್ರಕರಣದಲ್ಲಿ ಕೇಳಿ ಬರುತ್ತಿದಂತೆ ಸಂಸ್ಥೆಯ ನಿರ್ದೇಶಕರಾಗಿದ್ದ ಜನಾರ್ದನ ರೆಡ್ಡಿ ಹೆಸರು ಪ್ರಕರಣದಲ್ಲಿ ಕೇಳಿಬಂತು.
Advertisement
ಎನ್ನೋಬೆಲ್ ಇಂಡಿಯಾ ಕಂಪನಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮಾತ್ರವಲ್ಲದೇ ಶಾಸಕ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಕರುಣಾಕರ್ ರೆಡ್ಡಿ ಅವರು ಕೂಡ ನಿರ್ದೇಶಕರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿಚಾರಣೆ ನಡೆಯುವ ಸಾಧ್ಯತೆಗಳು ಕೂಡ ಇದೆ. ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್ ಅವರು, ನಮಗೆ 57 ಕೆಜಿ ಚಿನ್ನದ ಬಿಲ್ ರಹಸ್ಯ ಮಾತ್ರವಲ್ಲ, ಇದರ ಹಿಂದೆ ಮತ್ತಷ್ಟು ಮಾಹಿತಿ ಸಂಗ್ರಹಿಸಬೇಕಿದೆ ಎಂದು ತಿಳಿಸಿದ್ದರು. ಅಲೋಕ್ ಕುಮಾರ್ ಅವರ ಹೇಳಿಕೆಯಂತೆ ಸದ್ಯ ಎನ್ನೋಬೆಲ್ ಇಂಡಿಯಾ ಕಂಪನಿಯ ನಿರ್ದೇಶಕರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews