ರಿಯಲ್ ಸ್ಟಾರ್ ಉಪೇಂದ್ರ (Upendra), ಇದೀಗ ಮತ್ತೊಂದು ಪ್ರತಿಷ್ಠಿತ ಹಾಗೂ ದುಬಾರಿ ಏರಿಯಾದಲ್ಲಿ ಹೊಸ ಮನೆಯೊಂದನ್ನು (New House) ಖರೀದಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸದಾಶಿವನಗರದಲ್ಲಿ(Sadashivnagar) ಅವರು ಹೊಸ ಮನೆ ಖರೀದಿಸಿದ್ದಾರೆ.
Advertisement
ಸದಾಶಿವನಗರದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರ ಮನೆಗಳಿವೆ. ಹಾಗೂ ಅನೇಕ ರಾಜಕಾರಣಿಗಳ ನಿವಾಸಗಳು ಇದೇ ಏರಿಯಾದಲ್ಲಿವೆ. ಮುಖ್ಯಮಂತ್ರಿ, ಮಾಜಿಮುಖ್ಯಮಂತ್ರಿ, ಸಚಿವರು, ಪ್ರಭಾವಿ ನಾಯಕರ ಮನೆಗಳೆಲ್ಲ ಇದೇ ಬಡಾವಣೆಯಲ್ಲೇ ಇವೆ.
Advertisement
Advertisement
ಹಲವು ವರ್ಷಗಳಿಂದ ಕತ್ರಿಗುಪ್ಪೆಯಲ್ಲೇ ವಾಸವಿದ್ದ ಉಪೇಂದ್ರ, ಸಡನ್ನಾಗಿ ಸದಾಶಿವ ನಗರದಲ್ಲೇ ಮನೆ ಖರೀದಿಸಲು ಕಾರಣವೇನು ಎನ್ನುವ ಚರ್ಚೆ ಕೂಡ ಶುರುವಾಗಿದೆ. ರಾಜಕಾರಣಿಯಾಗಿ ಬೆಳೆಯುತ್ತಿರುವ ಉಪ್ಪಿ, ಈ ಕಾರಣದಿಂದಾಗಿಯೇ ರಾಜಕಾರಣಿಗಳೇ ಹೆಚ್ಚಿರುವ ಏರಿಯಾದಲ್ಲಿ ಮನೆ ಖರೀದಿಸಿದ್ರಾ ಎನ್ನುವ ಮಾತು ಹರಿದಾಡುತ್ತಿದೆ.
Advertisement
ಈಗಾಗಲೇ ಹೊಸ ಮನೆಯ ಗೃಹಪ್ರವೇಶ ಕೂಡ ಆಗಿದ್ದು, ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಹಾಗೂ ಗಣ್ಯರು ಭಾಗಿಯಾಗಿದ್ದಾರೆ. ಸ್ಯಾಂಕಿ ಟ್ಯಾಂಕ್ ಹತ್ತಿರದಲ್ಲೇ ಈ ನಿವಾಸವಿದ್ದು, ಶನಿವಾರ ಅಧಿಕೃತವಾಗಿ ಗೃಹಪ್ರವೇಶ ಮಾಡಿದ್ದಾರಂತೆ ಉಪ್ಪಿ ಮತ್ತು ಪ್ರಿಯಾಂಕಾ (Priyanka Upendra). ಮುಂದಿನ ದಿನಗಳಲ್ಲಿ ಕತ್ರಿಗುಪ್ಪೆ ನಿವಾಸದಿಂದ ಈ ಮನೆಗೆ ಶಿಫ್ಟ್ ಆಗಲಿದ್ದಾರೆ ರಿಯಲ್ ಸ್ಟಾರ್.
ಸಂಗೀತ ನಿರ್ದೇಶಕ ಗುರುಕಿರಣ್, ಹಿರಿಯ ನಟಿ ಸರೋಜಾ ದೇವಿ ಸೇರಿದಂತೆ ಹಲವಾರು ನಟಿಯರು ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆ ಫೋಟೋಗಳನ್ನು ಉಪ್ಪಿ ದಂಪತಿ ಹಂಚಿಕೊಂಡಿದ್ದಾರೆ. ಇದೊಂದು ಕುಟುಂಬದ ಕಾರ್ಯಕ್ರಮವಾಗಿದ್ದರಿಂದ ಆಪ್ತರಿಗಷ್ಟೇ ಆಹ್ವಾನ ನೀಡಿದ್ದರಂತೆ ಉಪ್ಪಿ ದಂಪತಿ.
2003ರಲ್ಲಿ ಕತ್ರಿಗುಪ್ಪೆ ಮನೆಯನ್ನು ಕಟ್ಟಿಸಿದ್ದ ಉಪೇಂದ್ರ, ಆ ಮನೆಯಲ್ಲೇ ಆಫೀಸು, ಜಿಮ್ ಹೊಂದಿದ್ದರು. ತಂದೆ ತಾಯಿ ಜೊತೆ ಅದೇ ಮನೆಯಲ್ಲೇ ವಾಸವಾಗಿದ್ದರು. ಹಲವು ವರ್ಷಗಳಿಂದ ಈ ಮನೆ ತೊರೆದು ರುಪ್ಪಿ ರೇಸಾರ್ಟ್ ಗೆ ಸ್ಥಳಾಂತರಗೊಳ್ಳಬೇಕು ಎಂಬ ಆಲೋಚನೆ ಮಾಡಿದ್ದರು. ಆದರೆ, ಆ ಯೋಚನೆ ಬಿಟ್ಟು ಸದಾಶಿವ ನಗರಕ್ಕೆ ಶಿಫ್ಟ್ ಆಗುತ್ತಿದ್ದಾರೆ.