Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತ 40 ದೇಶಗಳಿಂದ ಹೇಗೆ ತೈಲ ಆಮದು ಮಾಡಿಕೊಳ್ತಿದೆ? ಎಲ್ಲಿ ಸಂಗ್ರಹಿಸುತ್ತಿದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಾರತ 40 ದೇಶಗಳಿಂದ ಹೇಗೆ ತೈಲ ಆಮದು ಮಾಡಿಕೊಳ್ತಿದೆ? ಎಲ್ಲಿ ಸಂಗ್ರಹಿಸುತ್ತಿದೆ?

Latest

ಭಾರತ 40 ದೇಶಗಳಿಂದ ಹೇಗೆ ತೈಲ ಆಮದು ಮಾಡಿಕೊಳ್ತಿದೆ? ಎಲ್ಲಿ ಸಂಗ್ರಹಿಸುತ್ತಿದೆ?

Public TV
Last updated: February 15, 2026 5:11 pm
Public TV
Share
5 Min Read
Oil
SHARE

ಸದ್ಯ ಜಾಗತಿಕವಾಗಿ ಅತಿಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಕಚ್ಚಾತೈಲ (Crude Oil). ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿ ನಿಲ್ಲಿಸಲು ಒಪ್ಪಿಕೊಂಡಿದೆ ಎಂದಿದ್ದರು. ಇದಕ್ಕೆ ಭಾರತದ ಜೊತೆಗೆ 500 ಶತಕೋಟಿ ಡಾಲರ್‌ ಒಪ್ಪಂದ ಮಾಡಿಕೊಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಷ್ಯಾ, ಭಾರತ (India) ಯಾವುದೇ ಪೂರೈಕೆದಾರರದಿಂದ ಕಚ್ಚಾತೈಲ ಖರೀದಿಸಲು ಮುಕ್ತವಾಗಿದೆ ಎಂದು ಹೇಳಿತ್ತು. ಆದ್ರೆ ಕಳೆದ ಜನವರಿಯಲ್ಲಿ ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾತೈಲ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಟ್ರಂಪ್‌ ಮಾತು ನಿಜವಾಗುತ್ತಿದೆಯೇ ಅನ್ನೋ ಚರ್ಚೆಗಳು ಹುಟ್ಟಿಕೊಂಡಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹೊಸದೊಂದು ಅಪ್‌ಡೇಟ್ಸ್‌ ಹೊರಬಿದ್ದಿದೆ.

ಜಾಗತಿಕ ಸರಬರಾಜಿನಲ್ಲಿ ಹಠಾತ್‌ ತೊಂದರೆ ಉಂಟಾದ್ರೆ ಅಥವಾ ಆಪ್ತಮಿತ್ರರು ತಕ್ಷಣಕ್ಕೆ ತೈಲ ಪೂರಿಕೆ ನಿಲ್ಲಿಸಿದ್ರೂ ಸುಮಾರು 75 ದಿನಗಳ ವರೆಗೆ ತನ್ನನ್ನ ಕಾಪಾಡಿಕೊಳ್ಳಲು ಭಾರತ ಸಾಕಷ್ಟು ತೈಲ ಸಂಗ್ರಹ ಸಾಮರ್ಥ್ಯ ಹೊಂದಿದೆ. ಜೊತೆಗೆ ತೈಲ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸುತ್ತಲೇ ಇದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ. ಹಾಗಾದ್ರೆ ಭಾರತದಲ್ಲಿ ಒಂದು ದಿನಕ್ಕೆ ಬಳಕೆಯಾಗುವ ತೈಲ ಪ್ರಮಾಣ ಎಷ್ಟು? ಯಾವೆಲ್ಲಾ ದೇಶಗಳಿಂದ ಹಾಗೂ ಎಷ್ಟು ದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ? ಎಲ್ಲೆಲ್ಲಿ ಸಂಗ್ರಹ ಮಾಡುತ್ತಿದೆ? ಎಂಬುದರ ಬಗ್ಗೆ ತಿಳಿಯೋಣ…

why is india buying russian crud 1

ವಿಶ್ವದ 3ನೇ ಅತಿದೊಡ್ಡ ಕಚ್ಚಾತೈಲ ಗ್ರಾಹಕ ರಾಷ್ಟ್ರವಾಗಿರುವ ಭಾರತಕ್ಕೆ ಒಂದು ದಿನಕ್ಕೆ 50 ರಿಂದ 55 ಲಕ್ಷ ಬ್ಯಾರಲ್‌ ಕಚ್ಚಾತೈಲ (Crude Oil Barrels) ಬಳಕೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಆದ್ರೆ ತನ್ನ ಅವಶ್ಯಕತೆಗಳಲ್ಲಿ ಕೇವಲ 12-13% ರಷ್ಟು ಮಾತ್ರ ದೇಶಿಯವಾಗಿ ಉತ್ಪಾದಿಸುತ್ತಿದೆ. ಉಳಿದಿದ್ದು ತೈಲ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಮೊದಲು ಇರಾಕ್‌, ಸೌದಿ ಅರೇಬಿಯಾ ಮತ್ತು ಇರಾನ್‌ ದೇಶಗಳಿಂದ ಭಾರತಕ್ಕೆ ಹೆಚ್ಚಿನ ತೈಲ ಆಮದಾಗುತ್ತಿತ್ತು. ಆದ್ರೆ, ಇತ್ತೀಚಿನ ವರ್ಷಗಳಲ್ಲಿ ರಷ್ಯಾ ಭಾರತದ ಅತಿದೊಡ್ಡ ತೈಲ ಆಮದಿನ ಮೂಲವಾಗಿದೆ. ಒಟ್ಟಾರೆ ಕಚ್ಚಾತೈಲ ಆಮದಿನ ಶೇ.30 ರಷ್ಟು ರಫ್ತು ಮಾಡುತ್ತಿದೆ. ಆದ್ರೆ ಈ ವರ್ಷದ ಜನವರಿಯಲ್ಲಿ 11 ಲಕ್ಷ ಬ್ಯಾರಲ್‌ಗೆ ತೈಲ ಪೂರೈಕೆ ಇಳಿದಿರೋದು, ಅಚ್ಚರಿ ಮೂಡಿಸಿದೆ.

ಎಷ್ಟು ದೇಶಗಳಿಂದ ತೈಲ ಖರೀದಿ?
ಭವಿಷ್ಯದ ದೃಷ್ಟಿಯಿಂದ ಅತಿಹೆಚ್ಚು ತೈಲ ಸಂಗ್ರಹದಲ್ಲಿ ತನ್ನನ್ನ ತೊಡಗಿಸಿಕೊಂಡಿರುವ ಭಾರತ ಹೊಸ ಹೊಸ ಅನ್ವೇಷಣೆಗಳನ್ನೂ ನಡೆಸುತ್ತಿದೆ. ಹೀಗಾಗಿ ತೈಲ ಆಮದು ಮಾಡಿಕೊಳ್ಳುವ ದೇಶಗಳ ಸಂಖ್ಯೆ 27 ರಿಂದ 40ಕ್ಕೆ ಏರಿಕೆಯಾಗಿದೆ. ಆದಾಗ್ಯೂ ಪ್ರಸಕ್ತ ವರ್ಷದಲ್ಲಿ ರಷ್ಯಾ ಪ್ರಮುಖ ಪೂರೈಕೆದಾರನಾಗಿ ಮುಂದುವರಿದಿದೆ. ನಂತರದ ಸ್ಥಾನದಲ್ಲಿ ಇರಾಕ್‌, ಸೌದಿ ಅರೇಬಿಯಾ, ಯುಎಇ ಹಾಗೂ ಯುನೈಟೆಡ್‌ ಸ್ಟೇಟ್ಸ್‌ ಇವೆ. ಈ ಸಾಲಿಗೆ ಈಗ ವೆನೆಜುವೆಲಾ ಸೇರಿಕೊಂಡಿದೆ.

top crude oil producing countries
2023ರ ವರದಿ

ವೆನೆಜುವೆಲಾದಿಂದ ನೇರವಾಗಿ ಕಚ್ಚಾತೈಲ ಆಮದು ಮಾಡಿಕೊಳ್ಳಲು ಅಮೆರಿಕ ಸರ್ಕಾರದಿಂದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಡೆಡ್‌ ಪರವಾನಗಿ ಪಡೆದುಕೊಂಡಿದೆ. ಸಾಲದ್ದಕ್ಕೆ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ತೈಲ ಉತ್ಪಾದಕರಲ್ಲಿ ಒಂದಾದ ಗಯಾನಾ, ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಆಫ್‌ಶೋರ್‌ ಬ್ಲಾಕ್‌ ಹರಾಜಿನಲ್ಲಿ ಭಾಗವಹಿಸಲು ಭಾರತಕ್ಕೆ ವಿಶೇಷ ಆಹ್ವಾನ ಕೊಟ್ಟಿದೆ. ಇದು ಭಾರತದ ತೈಲ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ವಿಶ್ವಾಸವಿದೆ. ಇದಲ್ಲದೇ ಭಾರತ ನೈಜಿರಿಯಾ, ಅಂಗೋಲಾದಂತಹ ಆಫ್ರಿಕನ್‌ ಪೂರೈಕೆದಾರರನ್ನ ಮೀರಿ, ಹೊಸದನ್ನು ಅನ್ವೇಷಿಸುತ್ತಿದೆ.

russia pakistan crude oil

ಭಾರತದ ಈಗಿನ ಸಾಮರ್ಥ್ಯ ಹೇಗಿದೆ?
ಸದ್ಯ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೆಟ್ರೋಲಿಯಂ ನಿಕ್ಷೇಪಗಳು ತುರ್ತು ಅಗತ್ಯತೆಗಳನ್ನು ಪೂರೈಸಲಿವೆ. ದೇಶವು ಸುಮಾರು 5.33 ಮಿಲಿಯನ್‌ ಮೆಟ್ರಿಕ್‌ ಟನ್‌ ಭೂಗತ ಕಚ್ಚಾತೈಲ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇದು ಜಾಗತಿಕ ಬಿಕ್ಕಟ್ಟು ಎದುರಾದಲ್ಲಿ ಹೆಚ್ಚುಕಡಿಮೆ 10 ದಿನಗಳ ಕಾಲ ತೈಲ ಪೂರೈಕೆ ಮಾಡುತ್ತದೆ. ಹೊರತುಪಡಿಸಿ ತೈಲ ಕಂಪನಿಗಳ ಸಂಸ್ಕರಣಾ ಘಟಕಗಳು ಮತ್ತು ಟರ್ಮಿನಲ್‌ಗಳಲ್ಲಿ ನಿರ್ವಹಿಸುವ ಹೆಚ್ಚುವರಿ ನಿಕ್ಷೇಪಗಳು ಸುಮಾರು 64.5 ದಿನಗಳ ವರೆಗೆ ಪೆಟ್ರೋಲ್‌, ಡೀಸೆಲ್‌ ಮತ್ತು ಇತರ ಇಂಧನಗಳನ್ನ ಪೂರೈಸುವ ಸಾಮರ್ಥ್ಯ ಹೊಂದಿವೆ. ಒಟ್ಟಾರೆಯಾಗಿ ಈ ದಾಸ್ತಾನು 74 ರಿಂದ 75 ದಿನಗಳ ವರೆಗೆ ಪೂರೈಕೆ ನೀಗಿಸುತ್ತದೆ. ಜಾಗತಿಕ ಬಿಕ್ಕಟ್ಟು ಎದುರಾದರೂ, ಬೆಲೆ ಏರಿಕೆಯಂತಹ ತೊಂದರೆಯಾದದ್ರೂ ಸಾರಿಗೆ, ಕೃಷಿ, ಕೈಗಾರಿಕೆಗಳಂತಹ ವಲಯಗಳು ಕಾರ್ಯನಿರ್ವಹಿಸಲು ಈ ಪ್ರಮಾಣದ ತೈಲ ಅನುಕೂಲವಾಗಲಿದೆ ಎನ್ನುತ್ತಿವೆ ವರದಿಗಳು.

ತೈಲ ಸಂಗ್ರಹಣಾ ಕೇಂದ್ರ ಎಲ್ಲೆಲ್ಲಿದೆ?
ದೇಶದಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣ, ಕರ್ನಾಟಕದ ಮಂಗಳೂರು ಮತ್ತು ಪಾದೂರಿನಲ್ಲಿ ತೈಲ ಸಂಗ್ರಹಣಾ ಕೇಂದ್ರಗಳಿವೆ. ಈ ಸೌಲಭ್ಯಗಳು ಉಪ್ಪಿನಾಂಶವಿರುವ ಭೂಗತ ಗುಹೆಗಳಲ್ಲಿ ಕಚ್ಚಾತೈಲ ಸಂಗ್ರಹಿಸುತ್ತವೆ. ಇವು ಲಕ್ಷಾಂತರ ಟನ್‌ ಕಚ್ಚಾ ತೈಲವನ್ನ ದೀರ್ಘಕಾಲ ಸಂಗ್ರಹಿಸಬಹುದಾದ ಸುರಕ್ಷಿತ ತಾಣಗಳಾಗಿವೆ. ಇವುಗಳಲ್ಲದೇ ದೇಶದ ವಿವಿಧೆಡೆ ಇರುವ ತೈಲ ಸಂಸ್ಕರಣಾ ಘಟಕಗಳು, ತೈಲ ಟರ್ಮಿನಲ್‌ಗಳು (ಟ್ಯಾಂಕ್‌ ಮಾದರಿಯಲ್ಲಿರುತ್ತವೆ) ಪೆಟ್ರೋಲ್‌, ಡೀಸೆಲ್‌ ಹಾಗೂ ವಾಯುಯಾನ ಇಂಧನಗಳ ದಾಸ್ತಾನು ನಿರ್ವಹಿಸುತ್ತಿವೆ.

india usa crude oil storage 2

ಭಾರತದ ಮುಂದಿನ ಗುರಿ ಏನು?
ಭಾರತವು ಈಗ ತನ್ನ ಸಂಗ್ರಹಣಾ ಸಾಮರ್ಥ್ಯವನ್ನ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದಕ್ಕಾಗಿ ಒಡಿಶಾದಲ್ಲಿ ಚಾಂಡಿಖೋಲ್‌ನಲ್ಲಿ ಹೊಸ ತೈಲ ಸಂಸ್ಕರಣ ಘಟಕಕ್ಕೆ ಯೋಜನೆ ರೂಪಿಸಿದೆ. ಜಾಗತಿಕ ಇಂಧನ ಭದ್ರತಾ ಮಾನದಂಡಗಳಿಗೆ ಅನುಗುಣವಾಗಿ 90 ದಿನಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಬೇಡಿಕೆ ಪೂರೈಸಲು ಸಾಕಷ್ಟು ಮೀಸಲು ಕೇಂದ್ರಗಳನ್ನ ನಿರ್ಮಿಸುವ ದೀರ್ಘಾವಧಿ ಯೋಜನೆ ಹಾಕಿಕೊಂಡಿದೆ.

ತೈಲ ಆಮದು ಪ್ರಕ್ರಿಯೆ ಹೇಗೆ ನಡೆಯುತ್ತೆ?
ಸದ್ಯ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು ಕಚ್ಚಾತೈಲ ಆಮದು ಮಾಡಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿವೆ. ಭಾರತದಲ್ಲಿ ಒಟ್ಟು 23 ಸಂಸ್ಕರಣಾ ಘಟಕಗಳಿದ್ದು, ಇವುಗಳಲ್ಲಿ 19 ಸಾರ್ವಜನಿಕ, ಮೂರು ಖಾಸಗಿ ಹಾಗು ಒಂದು ಪಿಪಿಪಿ (ಸಾರ್ವಜನಿಕ, ಖಾಸಗಿ ಸಹಭಾಗಿತ್ವ) ಯದ್ದಾಗಿವೆ. ರಿಲಯನ್ಸ್ ನಿರ್ವಹಿಸುವ ಜಾಮ್‌ನಗರ ಸಂಸ್ಕರಣಾ ಘಟಕವು ವಿಶ್ವದಲ್ಲೇ ಅತಿದೊಡ್ಡದಾಗಿದೆ. ಈ ಸಂಸ್ಥೆಗಳು ಜಾಗತಿಕ ಉತ್ಪಾದಕರೊಂದಿಗೆ ಹೊಸ ಹೊಸ ಖರೀದಿ‌ ಒಪ್ಪಂದಗಳನ್ನ ಮುಂದುವರಿಸುತ್ತಿವೆ. ಮುಂಬೈ, ಗುಜರಾತ್‌ನ ಜಾಮ್‌ನಗರ ಮತ್ತು ವಿಶಾಖಪಟ್ಟಣದಂತಹ ಪ್ರಮುಖ ಬಂದರುಗಳ ಮೂಲಕ ತೈಲ ಸಂಗ್ರಹ ಕೆಲಸಗಳು ನಡೆಯುತ್ತಿವೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಬಂಧಿಸಿದ ವಹಿವಾಟು ಆಗಿರುವುದರಿಂದ ಡಾಲರ್‌ಗಳಲ್ಲೇ ವ್ಯವಹಾರ ನಡೆಯುತ್ತದೆ.

325702249 1 6 1 e1566118011669

 

ತೈಲ ಆಮದು ಮಾಡಿಕೊಂಡ ಬಳಿಕ ದೇಶದಲ್ಲೇ ಕಚ್ಚಾತೈಲ ಸಂಸ್ಕರಿಸಲಾಗುತ್ತದೆ. ಹೀಗಾಗಿ ಇಂದು ಅಮೆರಿಕ, ಚೀನಾ, ರಷ್ಯಾದ ಬಳಿಕ 4ನೇ ಅತಿದೊಡ್ಡ ಸಂಸ್ಕರಣಾಗಾರವಾಗಿದೆ. ಇನ್ನೂ ಸಾರಿಗೆ ವ್ಯವಸ್ಥೆ ನೋಡುವುದಾದ್ರೆ ಭಾರತಕ್ಕೆ ಕಚ್ಚಾತೈಲ ಸಾಗಿಸುವ ತೈಲ ಟ್ಯಾಂಕರ್‌ಗಳಲ್ಲಿ ಸುಮಾರು 95 ಪ್ರತಿಶತ ಖಾಸಗಿ ಒಡೆತನದಲ್ಲಿದೆ. ಭಾರತ ತನ್ನದೇ ಆದ ಹಡಗುಗಳನ್ನ ಸೀಮಿತ ಸಂಖ್ಯೆಯಲ್ಲಿ ಮಾತ್ರ ಹೊಂದಿರುವುದರಿಂದ ವಿದೇಶಿ ಹಡಗುಗಳ ಮೇಲೂ ಅವಲಂಬಿತವಾಗಿದೆ.

ಒಟ್ನಲ್ಲಿ ಒಂದು ಕಡೆ ಅಮೆರಿಕವು ರಷ್ಯಾ ತೈಲ ಖರೀದಿ ನಿಲ್ಲಿಸುವಂತೆ ಭಾರತಕ್ಕೆ ಒತ್ತಡ ಹೇರುತ್ತಲೇ ಇದೆ. ಇದೀಗ ಚೀನಾಗೆ ತೈಲ ಸರಬರಾಜು ನಿಲ್ಲಿಸುವಂತೆ ಇರಾನ್‌ ಮೇಲೆ ಆರ್ಥಿಕ ಒತ್ತಡ ತರಲು ಮುಂದಾಗಿದೆ. ಹೀಗಾಗಿ ಇದು ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ನಡುವೆ ಮುಂದೊಂದು ದಿನ ಬಿಕ್ಕಟ್ಟು ಏರ್ಪಡಿಸುವ ಸಾಧ್ಯತೆಗಳನ್ನ ಎದುರು ನೋಡುತ್ತಿದೆ. ಒಂದು ವೇಳೆ ಈ ಬಿಕ್ಕಟ್ಟಿನಿಂದ ತೈಲ ಸರಬರಾಜಿನಲ್ಲಿ ವ್ಯತ್ಯಯ ಆದ್ರೂ ಭಾರತಕ್ಕೆ ಯಾವುದೇ ಭಯವಿಲ್ಲ ಅನ್ನೋದು ಸ್ಪಷ್ಟವಾಗಿದೆ.

TAGGED:Crude Oildonald trumpindiaOil ImportsPM ModiUASಅಮೆರಿಕಕಚ್ಚಾ ತೈಲತೈಲ ಆಮದುತೈಲ ಸಂಗ್ರಹಭಾರತರಷ್ಯಾ
Share This Article
Facebook Whatsapp Whatsapp Telegram

Cinema news

Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories

You Might Also Like

ABVP Gopi Rangaswamy
Bengaluru City

ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿ ಮಾಡೋ ಮೊದಲು ಸರ್ಕಾರ ತಜ್ಞರ ಸಮಿತಿ ರಚನೆ ಮಾಡಬೇಕು: ಎಬಿವಿಪಿ

Public TV
By Public TV
4 minutes ago
calcutta high court
Court

West Bengal SIR | 60 ಲಕ್ಷ ಆಕ್ಷೇಪಣೆಗಳಲ್ಲಿ 47 ಲಕ್ಷ ಅರ್ಜಿ ಇತ್ಯರ್ಥ – ಸುಪ್ರೀಂಗೆ ಹೈಕೋರ್ಟ್ ವರದಿ

Public TV
By Public TV
31 minutes ago
Munirabad PSI Suspend
Districts

ಅಕ್ರಮಗಳಿಗೆ ಬ್ರೇಕ್ ಹಾಕದೇ ಕರ್ತವ್ಯ ಲೋಪ – ಮುನಿರಾಬಾದ್ ಪಿಎಸ್‌ಐ ಅಮಾನತು

Public TV
By Public TV
37 minutes ago
S.S Mallikarjun
Davanagere

ಸಮರ್ಥ್ ಗೆಲುವಿಗಾಗಿ ಕೆಂಡ ತುಳಿದು ವಿಶೇಷ ಪೂಜೆ ಸಲ್ಲಿಸಿದ ಸಚಿವ ಎಸ್‌.ಎಸ್ ಮಲ್ಲಿಕಾರ್ಜುನ್

Public TV
By Public TV
1 hour ago
Rahul Tewatia
Cricket

ನಿಯಮ ಉಲ್ಲಂಘಿಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ತೆವಾಟಿಯಾ!

Public TV
By Public TV
1 hour ago
chhattisgarh high court 1
Court

ಮನೆಗಳಲ್ಲಿ ಪ್ರಾರ್ಥನಾ ಸಭೆ ನಡೆಸಲು ಪೂರ್ವಾನುಮತಿ ಬೇಡ – ಛತ್ತೀಸ್‌ಗಢ ಹೈಕೋರ್ಟ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?