Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಡಿಮೆ ವೆಚ್ಚದಲ್ಲಿ ಭಯಾನಕ ದಾಳಿ – ಯುದ್ಧದಲ್ಲಿ ಅಗ್ಗದ ಡ್ರೋನ್‌ಗಳ ಮಹತ್ವದ ಪಾತ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕಡಿಮೆ ವೆಚ್ಚದಲ್ಲಿ ಭಯಾನಕ ದಾಳಿ – ಯುದ್ಧದಲ್ಲಿ ಅಗ್ಗದ ಡ್ರೋನ್‌ಗಳ ಮಹತ್ವದ ಪಾತ್ರ

Latest

ಕಡಿಮೆ ವೆಚ್ಚದಲ್ಲಿ ಭಯಾನಕ ದಾಳಿ – ಯುದ್ಧದಲ್ಲಿ ಅಗ್ಗದ ಡ್ರೋನ್‌ಗಳ ಮಹತ್ವದ ಪಾತ್ರ

Public TV
Last updated: March 25, 2026 7:26 am
Public TV
Share
3 Min Read
Drone 5
SHARE

ಆಧುನಿಕತೆ ಮುಂದುವರೆದಂತೆ ಯುದ್ಧ ತಂತ್ರಗಳು ಬದಲಾಗುತ್ತಿವೆ. ರಣಭೂಮಿಯಲ್ಲಿ ಸೈನಿಕರ ಬದಲು ರೋಬೋಟ್‌, ಡ್ರೋನ್‌ಗಳು (Drones) ಯುದ್ಧದಲ್ಲಿ ತೊಡಗಿವೆ. ಅದರಲ್ಲೂ ಅಗ್ಗದ ಡ್ರೋನ್‌ಗಳು (ವಿಶೇಷವಾಗಿ FPV ಮತ್ತು ಶಹೇದ್-136) ಕೇವಲ 15-20 ಲಕ್ಷ ರೂ. ವೆಚ್ಚದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಯುದ್ಧ ಟ್ಯಾಂಕ್‌ಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ನಾಶಮಾಡಿ, ಆಧುನಿಕ ಯುದ್ಧತಂತ್ರವನ್ನೇ ಬದಲಾಯಿಸಿವೆ.

ಪುಟ್ಟ ಡ್ರೋನ್‌ಗಳು ಕಡಿಮೆ ತೂಕದ, ಶತ್ರುಗಳ ಕಣ್ಣಿಗೆ ಬೀಳದೆ ಮತ್ತು ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ರಷ್ಯಾ-ಉಕ್ರೇನ್ ಮತ್ತು ಮಧ್ಯಪ್ರಾಚ್ಯ ಸಂಘರ್ಷಗಳಲ್ಲಿ ಡ್ರೋನ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಯುದ್ಧದಲ್ಲಿ ಕಡಿಮೆ ವೆಚ್ಚದಲ್ಲಿ ಭಾರೀ ಹಾನಿ ಮಾಡುವ ಡ್ರೋನ್‌ಗಳ ಪಾತ್ರದ ಬಗ್ಗೆ ಇಲ್ಲಿ ವಿವರಿಸಲಾಗಿದೆ.

DRONE 1

ಯುದ್ಧದಲ್ಲಿ ಅಗ್ಗದ ಡ್ರೋನ್‌ಗಳ ಪ್ರಭಾವ
ವೆಚ್ಚ: ಅಗ್ಗದ ಡ್ರೋನ್‌ಗಳಿಂದ ಶತ್ರುಗಳ ಕೋಟಿ ಕೋಟಿ ರೂ. ಮೌಲ್ಯದ ಮಿಸೈಲ್‌ಗಳನ್ನು ಹೊಡೆದುರುಳಿಸಲು ಕೆಲವೇ ಲಕ್ಷದ ಡ್ರೋನ್‌ಗಳನ್ನು ಬಳಸುವುದು ಅತ್ಯಂತ ಕಡಿಮೆ ವೆಚ್ಚದಾಯಕವಾಗಿದೆ.

ಪ್ರಮುಖ ಡ್ರೋನ್‌ ಮಾಡೆಲ್‌: ಇರಾನ್‌ನ ಶಹೇದ್-136 (Shahed-136) 2,500 ಕಿ.ಮೀ ದೂರದವರೆಗೆ ಹಾರಿ ಗುರಿಯನ್ನು ತಲುಪಬಲ್ಲದು. ಇವುಗಳನ್ನು ʼಸೂಸೈಡ್‌ ಡ್ರೋನ್‌ʼ ಎಂದೂ ಕರೆಯುತ್ತಾರೆ. ಗಂಟೆಗೆ 185 ಕಿ.ಮಿ ವೇಗದಲ್ಲಿ ಇವು ಸಾಗಬಲ್ಲವು.

ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ, ಈ ಡ್ರೋನ್‌ಗಳು ಶತ್ರುಗಳ ಫಿರಂಗಿಗಳನ್ನು ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಬಳಸಲಾಗಿತ್ತು. ಇವು ಸಣ್ಣ ಸೇನೆಗೂ ಶಕ್ತಿಶಾಲಿ ಸೇನೆಯನ್ನು ಎದುರಿಸುವ ಸಾಮರ್ಥ್ಯವನ್ನು ನೀಡಿವೆ. ಈ ಮೂಲಕ ಯುದ್ಧಭೂಮಿಯಲ್ಲಿ ಅತಿದೊಡ್ಡ ಬದಲಾವಣೆಯನ್ನು ತಂದಿವೆ. ಅಲ್ಲದೇ ಈ ಡ್ರೋನ್‌ಗಳನ್ನು ಹಾರಿಸಲು ಹೆಚ್ಚಿನ ತರಬೇತಿಯ ಅಗತ್ಯವಿಲ್ಲ. ಇವುಗಳ ತಯಾರಿಕೆ ಕೂಡ ಸುಲಭವಾಗಿದೆ.

DRONE 2

ಶಹೆದ್-136 ಡ್ರೋನ್ ಎಂದರೇನು?
ಶಹೆದ್-136 ಏಕಮುಖ ದಾಳಿ ಡ್ರೋನ್ ಆಗಿದೆ. ಇದು ಸರಳ ಕ್ರೂಸ್ ಕ್ಷಿಪಣಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ಜಿಪಿಎಸ್‌ ಆಧಾರಿಸಿ ಸಂಚರಿಸುತ್ತವೆ. ಸುಮಾರು 40-50 ಕಿಲೋಗ್ರಾಂಗಳಷ್ಟು ಪೇಲೋಡ್ ಸಾಮರ್ಥ್ಯವನ್ನು ಹೊಂದಿದ್ದು, 2,500 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿವೆ.

ಕೇವಲ 2 ಲಕ್ಷ ರೂ.ನಿಂದ ಸಾವಿರಾರು ಕೋಟಿ ಭಸ್ಮ!
ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ನೆಲೆಗಳು, ತೈಲಾಗಾರಗಳು, ರಾಯಭಾರ ಕಚೇರಿ, ಕಟ್ಟಡಗಳ ಮೇಲೆ ದಾಳಿ ಮಾಡಲು ಇರಾನ್‌ (Iran Israel War) ಬಳಸುತ್ತಿರುವುದು ತನ್ನ ಶಹೇದ್‌-136 ಕ್ಷಿಪಣಿಗಳನ್ನು. ಇದರ ಬೆಲೆ ಅಂದಾಜು 2 ಲಕ್ಷ ರೂ. ಆದರೆ ಇವುಗಳನ್ನು ತಡೆಯಲು ಅಮೆರಿಕ ಬಳಸುತ್ತಿರುವ ಪ್ಯಾಕ್‌-3 ಪ್ರತಿಬಂಧಕದ ಬೆಲೆ ಬರೋಬ್ಬರಿ 36 ಕೋಟಿ ರೂ. ಥಾಡ್‌ ಕೂಡ ಬಲು ದುಬಾರಿ. ಹೀಗಿರುವಾಗ, ಇರಾನ್‌ ಹಾರಿಸುವ ಕ್ಷಿಪಣಿಗಳ ದಂಡನ್ನು ತಡೆಯುವುದು ಅಮೆರಿಕದ ಪಾಲಿಗೆ ಕಷ್ಟಕರ ಹಾಗೂ ಅತಿ ದುಬಾರಿ.

DRONE 3

ಸಾಲು ಸಾಲಾಗಿ ಬರುವ ಎಲ್ಲಾ ಕ್ಷಿಪಣಿಗಳನ್ನು ಗುರುತಿಸಿ ಹೊಡೆಯುವುದು ಯಾವ ರಕ್ಷಣಾ ವ್ಯವಸ್ಥೆಗೂ ಸಾಧ್ಯವಿಲ್ಲ. ಇವುಗಳಲ್ಲಿ ಕೆಲವಾದರೂ ತಮ್ಮ ಗುರಿಗಳನ್ನು ಧ್ವಂಸಗೊಳಿಸುತ್ತವೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಹೇಳೋದೇನು?
ಶಹೀದ್-136 ಡ್ರೋನ್‌ಗಳು ಕಡಿಮೆ ಎತ್ತರದಲ್ಲಿ ಮತ್ತು ನಿಧಾನವಾಗಿ ಹಾರುವುದರಿಂದ ಅವುಗಳನ್ನು ತಡೆಯುವುದು ಕಷ್ಟ, ಇದರಿಂದಾಗಿ ಸಾಂಪ್ರದಾಯಿಕ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಅವುಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಈ ಡ್ರೋನ್‌ಗಳು ನಿರೀಕ್ಷೆಗಿಂತ ದೊಡ್ಡ ಸವಾಲಾಗಿ ಪರಿಣಮಿಸಿವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಜಂಟಿ ಮುಖ್ಯಸ್ಥರ ಅಧ್ಯಕ್ಷ ಡಾನ್ ಕೈನೆ ಹೇಳಿದ್ದಾರೆ.

DRONE 4

ಉಕ್ರೇನ್‌ ಮಾತು ಕೇಳದೆ ಕೆಟ್ಟ ಟ್ರಂಪ್‌!
ಉಕ್ರೇನ್ ಹಲವಾರು ತಿಂಗಳ ಹಿಂದೆ ಈ ಬೆದರಿಕೆಯ ಬಗ್ಗೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಲ್ಲದೇ ಈ ಡ್ರೋನ್‌ಗಳನ್ನು ಹೊಡೆದುರುಳಿಸಲು ತಂತ್ರಜ್ಞಾನವನ್ನು ಒದಗಿಸಲು ಮುಂದಾಗಿತ್ತು. ಡೊನಾಲ್ಡ್ ಟ್ರಂಪ್ ಆ ಸಮಯದಲ್ಲಿ ಉಕ್ರೇನ್‌ ಮಾತನ್ನು ಕೇಳಿರಲಿಲ್ಲ ಎಂದು ವರದಿಯಾಗಿದೆ.

ಬಳಕೆಯಲ್ಲಿರುವ ಅಗ್ಗದ ಡ್ರೋನ್‌ಗಳು
– ಶಹೇದ್- 136; ಇರಾನ್, ರಷ್ಯಾ, ಹೌತಿ ಬಂಡುಕೋರರು ಬಳಸುತ್ತಿದ್ದಾರೆ.
– ಝಲಾ ಲ್ಯಾನ್ಸೆಟ್; ರಷ್ಯಾ ಬಳಸುತ್ತಿದೆ
– ಹಾರ್ನೆಟ್ ಕ್ವೀನ್ (ವೈಲ್ಡ್ ಹಾರ್ನೆಟ್ಸ್): ಉಕ್ರೇನ್ ಬಳಸುತ್ತಿದೆ.
ಗೆರ್ಬೆರಾ: ರಷ್ಯಾ ಬಳಸುತ್ತದೆ.
‘ಸ್ಟಿಂಗ್’ ಇಂಟರ್‌ಸೆಪ್ಟರ್: ಉಕ್ರೇನ್ ಬಳಸುತ್ತದೆ.
ಸ್ವಿಚ್‌ಬ್ಲೇಡ್ 300 : ಉಕ್ರೇನ್, ಅಮೆರಿಕ ಬಳಸುತ್ತಿದೆ.
ಫೈಬರ್-ಆಪ್ಟಿಕ್ FPV ; ರಷ್ಯಾ ಮತ್ತು ಉಕ್ರೇನ್ ಬಳಸುತ್ತಿವೆ.

TAGGED:donald trumpDronesiranIran Israel WarIsraelಡ್ರೋನ್
Share This Article
Facebook Whatsapp Whatsapp Telegram

Cinema news

Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories
Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World

You Might Also Like

Iran Foreign Minister Abbas Araghchi
Latest

ಶತ್ರುಗಳಿಗೆ ಹಾರ್ಮುಜ್‌ ಜಲಸಂಧಿ ನಿರ್ಬಂಧಿಸುವುದು ಇರಾನ್‌ನ ಕಾನೂನುಬದ್ಧ ಹಕ್ಕು: ವಿಶ್ವಸಂಸ್ಥೆಯಲ್ಲಿ ಅರಘ್ಚಿ ಮಾತು

Public TV
By Public TV
4 minutes ago
Fake Govt job
Districts

ಸರ್ಕಾರಿ ನೌಕರಿ ಕೊಡಿಸೋ ನಕಲಿ ನೇಮಕಾತಿ ಜಾಲ ಪತ್ತೆ – ಲಕ್ಷ ಲಕ್ಷ ಹಣ ನುಂಗಿ ಉದ್ಯೋಗಾಕಾಂಕ್ಷಿಗಳಿಗೆ ನಾಮ

Public TV
By Public TV
14 minutes ago
Kapila Tree Cut 2
Crime

ಕಪಿಲಾ ನದಿ ದಂಡೆಯಲ್ಲಿ 45 ಮರಗಳ ನಾಶ – ಆರೋಪಿ ಬಂಧನ

Public TV
By Public TV
33 minutes ago
Mangaluru Rowdy Sheeter Murder 1
Crime

ಬೆಳ್ಳಂಬೆಳಗ್ಗೆ ಕರಾವಳಿಯಲ್ಲಿ ಹರಿದ ನೆತ್ತರು – ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಕೊಲೆ

Public TV
By Public TV
40 minutes ago
Donald Trump 2
Latest

ಮಾತುಕತೆ ಚೆನ್ನಾಗಿ ನಡೆಯುತ್ತಿದೆ – ಮತ್ತೆ 10 ದಿನ ಕದನ ವಿರಾಮ ಘೋಷಿಸಿದ ಟ್ರಂಪ್‌

Public TV
By Public TV
43 minutes ago
pm modi mann ki baat
Bengaluru City

ಮಧ್ಯಪ್ರಾಚ್ಯ ಬಿಕ್ಕಟ್ಟು: ಇಂದು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಸಭೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?