– ಫ್ಲ್ಯಾಶ್ ಬ್ಯಾಕ್ ಸ್ಟೋರಿ ಓದಿ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜಾಹುಲಿ ಆಗಿದ್ದು ಯಾವಾಗ ಎಂಬ ಪ್ರಶ್ನೆಯನ್ನು ವಿಧಾನಸೌಧದ ಕಾರಿಡಾರ್‍ನಲ್ಲಿ ಒಬ್ಬರು ಕೇಳಿದ್ರು. ಆಗಲೇ ನಮ್ಗೆ 2013ರ ಫ್ಲ್ಯಾಶ್ ಬ್ಯಾಕ್ ಟಕಾಟಕಾ ಅಂತ ನೆನಪಿಗೆ ಬಂದಿದ್ದು.
Advertisement
ಅದು 2012ರ ಡಿಸೆಂಬರ್ 9ರಂದು ಹಾವೇರಿಯಲ್ಲಿ ಕೆಜೆಪಿ ಕಹಳೆ ಮೊಳಗಿಸಿದ್ರು. ಯಡಿಯೂರಪ್ಪ ಅವರ ಆ ದಿನಗಳು ಅವರ ಪಾಲಿನ ಆಗ್ನಿಪರೀಕ್ಷೆಯ ದಿನಗಳಾಗಿದ್ದವು. ಅಧಿಕಾರ ಇರುವಾಗ ಈಗ ಇರುವ ಅಕ್ಕಪಕ್ಕದ ಲೀಡರ್ ಗಳು ಅಂದು ಯಾರೂ ಇರಲಿಲ್ಲ. ಮಲ್ಲೇಶ್ವರಂನ ಮನೆಯೊಂದರಲ್ಲಿ ಕೆಜೆಪಿ ಕಚೇರಿ ಮಾಡಿಕೊಂಡಿದ್ರು. ಆಗ ಸಿ.ಎಂ ಉದಾಸಿ, ಶೋಭಾ ಕರಂದ್ಲಾಜೆ, ದಿವಂಗತ ಧನಂಜಯ್ ಕುಮಾರ್, ಎಂ.ಡಿ. ಲಕ್ಷ್ಮೀ ನಾರಾಯಣ, ರೇಣುಕಾಚಾರ್ಯ ಅವರುಗಳೇ ಸ್ಟಾರ್ ಲೀಡರ್‍ಗಳು. ಆದರೂ ಯಡಿಯೂರಪ್ಪ ಗತ್ತು, ಆತ್ಮವಿಶ್ವಾಸ ಕಡಿಮೆಯಾಗಿರಲಿಲ್ಲ. ಆಗಲೇ ಯಡಿಯೂರಪ್ಪ ಅವರಿಗೆ ರಾಜಾಹುಲಿ ಅನ್ನೋ ಹೆಸರು ಬಂದಿದ್ದು.
Advertisement
Advertisement
ನಿರ್ಮಾಪಕ ಕೆ.ಮಂಜು ಆಗತಾನೇ ರಾಜಾಹುಲಿ ಸಿನಿಮಾ ಸೆಟ್ಟೇರಿಸಿದ್ರು. ಕೆಜೆಪಿ ಸೇರಿದ್ದ ಕೆ.ಮಂಜು ಆಗಾಗ್ಗೆ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಬರ್ತಿದ್ರು. (ತುರುವೇಕೆರೆ ಟಿಕೆಟ್‍ಗೆ ಪ್ರಯತ್ನಿಸಿದ್ರು) ಆ ವೇಳೆಯಲ್ಲಿ ಮಾಧ್ಯಮದವರ ಜೊತೆ ಸ್ವಲ್ಪ ಟೈಮ್ ಮಾತನಾಡ್ತಿದ್ರು. ಒಂದು ದಿನ ಮಾತನಾಡುವಾಗ ನಮ್ ರಾಜಾಹುಲಿ ಯಡಿಯೂರಪ್ಪ, ನಮ್ ಸಿನಿಮಾನೂ ಹಿಟ್ ಆಗುತ್ತೆ. ಇವರೂ ಹಿಟ್ ಆಗ್ತಾರೆ ಎಂದು ಕೆ.ಮಂಜು ಹೇಳ್ತಿದ್ರು.
Advertisement
2013ರ ವಿಧಾನಸಭೆ ಎಲೆಕ್ಷನ್ ನಲ್ಲಿ ಬಿಜೆಪಿಯನ್ನ ಮಲಗಿಸುವಲ್ಲಿ ಕೆಜೆಪಿ ಹಿಟ್ ಆದ್ರೆ 2013ರ ನವೆಂಬರ್ 1ರಲ್ಲಿ ತೆರೆಕಂಡ ರಾಜಾಹುಲಿ ಸಿನಿಮಾ ಕೂಡ ಹಿಟ್ ಆಯ್ತು. ಅಲ್ಲಿಂದ ರಾಜಾಹುಲಿ ಹವಾ ಶುರುವಾಗಿದೆ.