ಮುಂಬೈ: ದೇಶದ ನಂಬರ್ ಒನ್ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಒಡೆತನದ ಜಿಯೋ ನೆಟ್‍ವರ್ಕ್ ಭಾರತದ ಟೆಲಿಕಾಂ ಮಾರುಕಟ್ಟೆಯನ್ನೇ ಬುಡಮೇಲು ಮಾಡಿದೆ. ಒಂದು ಜಿಬಿ ಡೇಟಾ ಪ್ಯಾಕ್ ಹಾಕಲು ಹಿಂದೆ ಮುಂದೆ ನೋಡುತ್ತಿದ್ದ ಜನ ಈಗ ಜಿಯೋದಿಂದ ಪ್ರತಿದಿನ ಒಂದು ಜಿಬಿ ಡೇಟಾದ ಜೊತೆಗೆ ಉಚಿತವಾಗಿ ಕರೆಯನ್ನು ಮಾಡುವಂತೆ ಮಾಡಿದೆ.
2016ರಲ್ಲಿ ಸ್ಥಾಪನೆಯಾದ ಜಿಯೋ ದೇಶದ ಮೂರನೇ ಅತಿದೊಡ್ಡ ನೆಟ್‍ವರ್ಕ್ ಸಂಸ್ಥೆಯಾಗಿ ಹೊರಹೊಮ್ಮಿದೆ. ಮೊದಲನೇ ಸ್ಥಾನದಲ್ಲಿ ಭಾರತಿ ಏರ್‍ಟೆಲ್ ಇದ್ದರೆ, ಎರಡನೇ ಸ್ಥಾನದಲ್ಲಿ ಐಡಿಯಾ ಸೆಲ್ಯುಲರ್ ಹಾಗೂ ವೊಡಾಫೋನ್ ಇದೆ.
Advertisement
Advertisement
1 ಜಿಬಿ ಡೇಟಾ ದರ ಎಷ್ಟಿತ್ತು?
2013ರಲ್ಲಿ ಪ್ರತಿ ಜಿಬಿ ದರ 350 ರೂಪಾಯಿಗಳಾಗಿದ್ದರೆ, 2014ರಲ್ಲಿ 250 ರೂ. ಆಗಿ, ಕ್ರಮೇಣ 2015 ರಲ್ಲಿ 225 ರೂ. ಆಗಿತ್ತು. ಆದರೆ 2016ರಲ್ಲಿ ಜಿಯೋ ಮಾರುಕಟ್ಟೆಗೆ ಪ್ರವೇಶಿಸಿದ ಸಮಯದಲ್ಲಿ ಪ್ರತಿ ಜಿಬಿಗೆ 150 ರೂ. ನಿಗದಿಪಡಿಸಿತ್ತು. ಆರಂಭದ ಮೂರು ತಿಂಗಳು ಜಿಯೋ ಉಚಿತ ಡೇಟಾ ನೀಡಿತ್ತು. 2018 ರಲ್ಲಿ 1 ಜಿಬಿ ಡೇಟಾಗೆ 1.50 ರೂ. ಇದೆ. ಪ್ರಸ್ತುತ ಜಿಯೋದಲ್ಲಿ 449 ರೂ. ರಿಚಾರ್ಜ್ ಮಾಡಿದರೆ ದಿನಕ್ಕೆ ಗರಿಷ್ಟ 1.5 ಜಿಬಿ ಡೇಟಾದಂತೆ 91 ದಿನ ವ್ಯಾಲಿಡಿಟಿ ಇರುವ ಪ್ಯಾಕ್ ಸಿಗುತ್ತಿದೆ.
Advertisement
2016ಕ್ಕೂ ಮೊದಲು ಯಾವೆಲ್ಲ ಕಂಪನಿಗಳು ಇತ್ತು?
ಭಾರತಿ ಏರ್‍ಟೆಲ್ 24.8% ರಷ್ಟು ಗ್ರಾಹಕರನ್ನು ಹೊಂದಿದ್ದರೆ, ವೋಡಫೋನ್ 19.1%ರಷ್ಟು, ಐಡಿಯಾ 17.0%, ಬಿಎಸ್‍ಎನ್‍ಎಲ್/ಎಂಟಿಎನ್‍ಎಲ್ 9.3% ರಷ್ಟು ಗ್ರಾಹಕರನ್ನು ಹೊಂದಿತ್ತು. ಏರ್ ಸೆಲ್ 8.6% ಗ್ರಾಹಕರನ್ನು ಹೊಂದಿದ್ದರೆ, 21.2% ಇತರೆ ಐದು ಕಂಪೆನಿಗಳು ಸ್ಥಾನವನ್ನು ಗಳಿಸಿದ್ದವು. ಇದನ್ನೂ ಓದಿ: ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?
Advertisement
2016ರ ಏನೆಲ್ಲಾ ಬದಲಾವಣೆಗಳಾಯಿತು?
ವೋಡಾಫೋನ್ ಹಾಗೂ ಐಡಿಯಾ ಕಂಪೆನಿಗಳು ವಿಲೀನಗೊಂಡು 38.4% ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ ದೇಶದ ನಂಬರ್ ಒನ್ ಕಂಪನಿಯಾಗಿ ಬದಲಾಗಿದ್ದರೆ, ಭಾರತಿ ಏರ್‍ಟೆಲ್ 29.8% ರಷ್ಟು ಮಾರುಕಟ್ಟೆಯನ್ನು ಹೊಂದುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ರಿಲಯನ್ಸ್ ಜಿಯೋ 19.6% ಮಾರುಕಟ್ಟೆ ಪಾಲನ್ನು ಹೊಂದಿದೆ. ಇತರೇ ಕಂಪನಿಗಳು 12.2% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಜಿಯೋ ನಿವ್ವಳ ಲಾಭ ಏರಿಕೆ- ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?
ಭಾರತ ನಂಬರ್ ಒನ್:
2016ರ ಅವಧಿಯಲ್ಲಿ ವಿಶ್ವದ ಇಂಟರ್ ನೆಟ್ ಬಳಕೆಯಲ್ಲಿ ಭಾರತ 150ನೇ ಸ್ಥಾನದಲ್ಲಿತ್ತು. ಆದರೆ ಜಿಯೋ ಬಂದ ಬಳಿಕ 2017ರಲ್ಲಿ ಭಾರತ ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ
ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ
ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?
ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ
ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv