ಮಿಚಾಂಗ್ (Michong) ಚಂಡಮಾರುತಕ್ಕೆ ಬಾಲಿವುಡ್ ನಟ ಆಮೀರ್ ಖಾನ್ ಸಿಲುಕಿದ್ದ ವಿಚಾರ ಇದೀಗ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಅಷ್ಟಕ್ಕೂ ಆಮೀರ್ ಚೆನ್ನೈಗೆ ಬಂದಿದ್ದು ಏಕೆ? ಯಾವ ಕಾರಣದಿಂದಾಗಿ ಅವರು ಚಂಡಮಾರುತಕ್ಕೆ ಸಿಲುಕಿಕೊಂಡರು ಎನ್ನುವ ವಿಚಾರವೂ ಮುನ್ನೆಲೆಗೆ ಬಂದಿದೆ. ಸದ್ಯ ಆಮೀರ್ ಯಾವುದೇ ಸಿನಿಮಾ ಮಾಡುತ್ತಿಲ್ಲ, ಅವರು ಮುಂಬೈನಲ್ಲಿ ವಾಸವಾಗಿದ್ದಾರೆ. ಚೆನ್ನೈಗೆ (Chennai) ಬಂದಿದ್ದು ಏಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
Advertisement
ಆಮೀರ್ ಖಾನ್ ಅವರ ತಾಯಿ ವಾಸಿಸೋದು ಚೆನ್ನೈನಲ್ಲಿ. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ. ತಾಯಿಯ ಆರೈಕೆಗಾಗಿಯೇ ನಟ ಚೆನ್ನೈನಲ್ಲಿ ಹಲವು ದಿನಗಳಿಂದ ವಾಸವಾಗಿದ್ದಾರೆ. ತಾಯಿಯ ಆರೋಗ್ಯದ ಕಡೆ ಗಮನ ಕೊಟ್ಟಿದ್ದಾರೆ. ಹಾಗಾಗಿ ಮಿಚಾಂಗ್ ಹೊಡೆತಕ್ಕೆ ಆಮೀರ್ ತತ್ತರಿಸಿದ್ದಾರೆ.
Advertisement
Advertisement
ನಿನ್ನೆ ನಡೆದದ್ದು ಏನು?
Advertisement
ಚೆನ್ನೈನ ಕರಪಾಕ್ಕಂ ಪ್ರದೇಶದಲ್ಲಿರುವ ತಮಿಳು ನಟ ವಿಷ್ಣು ವಿಶಾಲ್ ಮನೆಗೆ ಆಮೀರ್ ಖಾನ್ ಭೇಟಿ ನೀಡಿದ್ದರು. ಪ್ರವಾಹ ಪರಿಸ್ಥಿತಿಯಿಂದಾಗಿ ವಿಷ್ಣು ವಿಶಾಲ್ ಅವರ ನಿವಾಸದಲ್ಲೇ ಆಮೀರ್ ಖಾನ್ ಸಿಲುಕಿದ್ದರು. ಈ ಸಂದರ್ಭದಲ್ಲಿ ನೀರಿನ ಮಟ್ಟ ತೀವ್ರವಾಗಿ ಏರುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೆಟ್ವರ್ಕ್, ವೈಫೈ ಯಾವುದೂ ಇಲ್ಲವಾಗಿದೆ. ಇದೇ ಸಮಯದಲ್ಲಿ ವಿಷ್ಣು ವಿಶಾಲ್ ಮನೆಯೊಳಗೆ ನೀರು ನುಗ್ಗಿದ್ರಿಂದ ಸಹಾಯಕ್ಕಾಗಿ ನಟ ವಿಷ್ಣು ವಿಶಾಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಮನವಿ ಮಾಡಿದ್ದರು.
ಕೂಡಲೆ ಅಗ್ನಿಶಾಮಕ ದಳ ನಟ ವಿಷ್ಣು ವಿಶಾಲ್ ಮತ್ತು ಆಮೀರ್ ಖಾನ್ (Aamir Khan) ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ. ಮಿಚಾಂಗ್ ಚಂಡಮಾರುತದಿಂದ ನನ್ನ ಮನೆಯೊಳಗೆ ನೀರು ನುಗ್ಗಿದೆ ಅವಾಂತರ ಆಗಿದೆ. ಕರಪಾಕ್ಕಂನಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗುತ್ತಿದೆ. ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ವಿದ್ಯುತ್ ಸಂಪರ್ಕ ಇಲ್ಲ. ವೈಪೈ, ಫೋನ್ ಸಿಗ್ನಲ್ ಇಲ್ಲ. ಇಲ್ಲಿರುವವರ ಸಹಾಯಕ್ಕೆ ಯಾರಾದರೂ ಧಾವಿಸಲಿ ಎಂದು ಬಯಸುತ್ತೇನೆ ಎಂದು ವಿಷ್ಣು ವಿಶಾಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಈ ವಿಷಯ ಅರಿತ, ಅಗ್ನಿಶಾಮಕ ದಳ ವಿಷ್ಣು ಮನೆಗೆ ಧಾವಿಸಿ, ನಟ ವಿಷ್ಣು ಮತ್ತು ಆಮೀರ್ ಖಾನ್ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ತಂಡಕ್ಕೆ ವಿಷ್ಣು ಮತ್ತು ಆಮೀರ್ ಖಾನ್ ಧನ್ಯವಾದ ತಿಳಿಸಿದ್ದಾರೆ.