Connect with us

Cinema

ಸಿನಿಮಾ ನಟರ ತಲೆಯಲ್ಲಿ ಏನೂ ಇಲ್ಲ-ಬಿಜೆಪಿ ಮುಖಂಡನ ಹೇಳಿಕೆಗೆ ನಟ ಫರ್ಹಾನ್ ಅಖ್ತರ್ ಕಿಡಿ

Published

on

ಮುಂಬೈ: ಜಿಎಸ್‍ಟಿ ಬಗ್ಗೆ ಕಟು ಟೀಕೆ ಮಾಡಿದ್ದ ಇಳಯ ದಳಪತಿ ಮರ್ಸಲ್ ಸಿನಿಮಾ ಸುತ್ತ ಹುಟ್ಟಿಕೊಂಡಿರುವ ವಿವಾದ ಕೊನೆಯಾಗಿಲ್ಲ. ಈಗ ಬಿಜೆಪಿ ನಾಯಕ ಜಿವಿಎಲ್ ನರಸಿಂಹರಾವ್ ಸಿನಿಮಾ ಸ್ಟಾರ್‍ಗಳ ತಲೆಯಲ್ಲಿ ಏನೂ ಇಲ್ಲ ಎಂದು ಹೇಳಿ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.

ಸುದ್ದಿಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಅವರು, ಯಾವುದೇ ವಿಷಯವಿರಲಿ, ನಮ್ಮ ಸಿನಿಮಾ ನಟದ ಸಾಮಾನ್ಯಜ್ಞಾನ ಯಾವತ್ತಿದ್ದರೂ ಕಮ್ಮಿನೇ ಅಂತಾ ಹೇಳಿ ವಿಜಯ್‍ಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ನಾಯಕನ ಹೇಳಿಕೆಯನ್ನು ಬಾಲಿವುಡ್ ನಟ ಫರ್ಹಾನ್ ಅಖ್ತರ್ ಖಂಡಿಸಿದ್ದಾರೆ. ಈ ರೀತಿ ಹೇಳಲು ನಿಮಗೆಷ್ಟು ಧೈರ್ಯ? ಎಲ್ಲಾ ಸಿನಿಮಾ ಸ್ಟಾರ್‍ಗಳನ್ನು ಒಂದೇ ರೀತಿ ಕಾಣಲು ಹೇಗೆ ಸಾಧ್ಯ. ನಿಮಗೆ ನಾಚಿಕೆ ಆಗ್ಬೇಕು ಅಂತಾ ತಿರುಗೇಟು ನೀಡಿದ್ದಾರೆ.

 

ಮರ್ಸಲ್ ಸಿನಿಮಾಕ್ಕೆ ಸೂಪರ್ ಸ್ಟಾರ್ ರಜಿನಿಕಾಂತ್ ಕೂಡಾ ಬೆಂಬಲ ಸೂಚಿಸಿದ್ದಾರೆ. ಮಹತ್ವದ ವಿಷಯವೊಂದರ ಬಗ್ಗೆ ಸಿನಿಮಾದಲ್ಲಿ ಚರ್ಚೆಯಾಗಿದೆ ಎಂದು ಹೇಳಿದ್ದಾರೆ. ಆದ್ರೆ ಜಿಎಸ್‍ಟಿ ಎಂದು ನೇರವಾಗಿ ಟ್ವೀಟ್‍ನಲ್ಲಿ ಹೇಳಿಲ್ಲ.

ಚಿತ್ರದ ಬಗ್ಗೆ ವಿವಾದವೇನು?: `ಮರ್ಸಲ್’ ಸಿನಿಮಾದಲ್ಲಿ ನಾಯಕ ನಟ ವಿಜಯ್ ಅವರು, ಔಷಧಿಗೆ ಶೇ. 12ರಷ್ಟು ಜಿಎಸ್‍ಟಿ ವಿಧಿಸಲಾಗಿದೆ ಆದರೆ ಹಲವಾರು ಜನರ ಸಾವಿಗೆ ಕಾರಣವಾಗುವ ಮದ್ಯದ ಮೇಲೆ ಜಿಎಸ್‍ಟಿ ಇಲ್ಲ ಎಂದು ಹೇಳುವ ದೃಶ್ಯವಿದೆ. ಅಷ್ಟೇ ಅಲ್ಲದೆ ಗೋರಖಪುರದಲ್ಲಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಮೃತಪಟ್ಟ ಘಟನೆಗೂ ಈ ದೃಶ್ಯದಲ್ಲಿ ಸಂಬಂಧ ಕಲ್ಪಿಸಲಾಗಿದೆ. ಈ ಎಲ್ಲ ದೃಶ್ಯಗಳಿಗೆ ಕತ್ತರಿ ಹಾಕಬೇಕು ಇಲ್ಲವೇ ಮ್ಯೂಟ್ ಮಾಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಈ ಆಕ್ಷೇಪದ ವಿರುದ್ಧ ಸಾಮಾಜಿಕ ತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಮರ್ಸಲ್ ಬೆಂಬಲಿಗರು, ವಿಜಯ್ ಅಭಿಮಾನಿಗಳು #MersalVsModi  ಎಂಬ ಹ್ಯಾಶ್‍ಟ್ಯಾಗ್ ಬಳಸಿ ಕೇಂದ್ರ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದರು.

Click to comment

Leave a Reply

Your email address will not be published. Required fields are marked *