ಬೆಂಗಳೂರು: ವಂಚನೆ (Fraud) ಪ್ರಕರಣದಲ್ಲಿ ಚೈತ್ರಾ ಕುಂದಾಪುರ (Chaithra Kundapura) ಮತ್ತು ತಂಡವನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಮೊದಲಿಗೆ ಸುಲಭವಾಗಿ ಸಿಕ್ಕ 50 ಲಕ್ಷ ರೂ.ಗೆ ಚೈತ್ರಾ ಕುಂದಾಪುರ ಫಿದಾ ಆಗಿದ್ದಳು. 3.5 ಕೋಟಿ ರೂ.ಗೆ ಶುರುವಾದ ಪ್ಲಾನ್ 5 ಕೋಟಿ ರೂ.ಗೆ ಏರಿಕೆಯಾಗಿದ್ದೇ ರೋಚಕ. ಈ ಬಗ್ಗೆ ಇಂಚಿಂಚೂ ಮಾಹಿತಿ ಇಲ್ಲಿದೆ.
ಚೈತ್ರಾ ಕುಂದಾಪುರ ಗೋವಿಂದ ಬಾಬು ಪೂಜಾರಿ ಎಂಬ ಉದ್ಯಮಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಮೊದಲಿಗೆ 50 ಲಕ್ಷ ರೂ. ಅಡ್ವಾನ್ಸ್ ಕೊಡಬೇಕು ಎಂದು ಹೇಳಿದ್ದಳು. ನಂತರ ನಾಯ್ಕ್ ಎನ್ನುವವನ ಮೂಲಕ 3 ಕೋಟಿ ರೂ. ತೆಗೆದುಕೊಳ್ಳುವುದು ಎಂಬುದು ಆಕೆಯ ಅಸಲಿ ಪ್ಲಾನ್ ಆಗಿತ್ತು. ಆದರೆ ಯಾವಾಗ ಪೂಜಾರಿ 50 ಲಕ್ಷ ರೂ. ಕೇಳಿದ ಕೂಡಲೇ ಕೊಟ್ಟನೋ ಆಗಲೇ ಮತ್ತೆ ಇನ್ನೊಂದು ಕತೆ ಶುರು ಮಾಡಿದ್ದಳು. ಇಷ್ಟು ಸುಲಭವಾಗಿ ಹಣ ಸಿಕ್ಕಿದರೇ ಜಾಸ್ತಿ ಹಣ ಹೊಡೆಯೋಣ ಎಂದು ಚೈತ್ರಾ ಪ್ಲಾನ್ ಮಾಡಿದ್ದಳು. ಇದನ್ನೂ ಓದಿ: ಚೈತ್ರಾ ಕುಂದಾಪುರ 10 ದಿನ ಪೊಲೀಸ್ ಕಸ್ಟಡಿಗೆ
Advertisement
Advertisement
ಇದಾದ ಬಳಿಕ ಚೈತ್ರಾ ಕುಂದಾಪುರ ಅಭಿನವ ಹಾಲಶ್ರೀಗಳನ್ನು ಭೇಟಿಯಾಗಿ ಸ್ಕ್ರೀನ್ ಪ್ಲೇ ವಿವರಿಸಿದ್ದಳು. ಅದರಂತೆ ಸ್ವಾಮೀಜಿಯೂ ಗೋವಿಂದಬಾಬು ಪೂಜಾರಿ ಬಳಿ 1.5 ಕೋಟಿ ರೂ. ಕೇಳಿದ್ದರು. ಈ ಹಣವನ್ನೂ ಗೋವಿಂದ ಬಾಬು ಪೂಜಾರಿ ಅಚ್ಚುಕಟ್ಟಾಗಿ ಬೆಂಗಳೂರಿನಲ್ಲೇ (Bengaluru) ಸ್ವಾಮೀಜಿಗೆ ತಲುಪಿಸಿದ್ದರು. ಹೀಗೆ ಒಟ್ಟು 5 ಕೋಟಿ ಹಣವನ್ನು ಪಡೆದುಕೊಂಡು ಉದ್ಯಮಿಗೆ ವಂಚಿಸಿದ ಚೈತ್ರಾ ಕುಂದಾಪುರ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ಉಡುಪಿಯಲ್ಲಿ ತಲೆಮರೆಸಿಕೊಂಡಿದ್ದಳು. ಇದನ್ನೂ ಓದಿ: ನಾಪತ್ತೆಯಾಗಿದ್ದ ಚೈತ್ರಾಗೆ ಆಶ್ರಯ ನೀಡಿದ್ದು ಕಾಂಗ್ರೆಸ್ ವಕ್ತಾರೆ
Advertisement
Advertisement
10 ರೂ. ಪಡೆದು ಕೋಟಿ ಡೀಲ್!
ಚೈತ್ರಾ ಮತ್ತು ಗ್ಯಾಂಗ್ ಹವಾಲಾದಂತೆ ಡೀಲ್ ಮಾಡುತ್ತಿದ್ದರು. ನಕಲಿ ವಿಶ್ವನಾಥ್ ಜೀ ಭೇಟಿ ಮಾಡಿದ್ದ ಗೋವಿಂದ ಬಾಬು ಬಳಿ 10 ರೂಪಾಯಿ ನೋಟು ಪಡೆದಿದ್ದರು. 10 ರೂಪಾಯಿ ನೋಟನ್ನು ಇಟ್ಕೊಂಡು ನಾವು ಹೇಳಿದ ಬಳಿಕ ಹಣ ಕೊಡಿ ಎಂದಿದ್ದರು. 10 ರೂಪಾಯಿ ನೋಟನ್ನು ತೆಗೆದುಕೊಂಡಿದ್ದ ಗೋವಿಂದ ಬಾಬು ಮಂಗಳೂರಿಗೆ ಹೋಗಿದ್ದರು. ಗಗನ್ ಹೇಳಿದ ಜಾಗಕ್ಕೆ ಹತ್ತು ರೂಪಾಯಿ ನೋಟು ಕೊಟ್ಟಿದ್ದರು. 10 ರೂಪಾಯಿ ನೋಟಿನ ಜೊತೆಗೆ 3 ಕೋಟಿ ಹಣವನ್ನು ಕೊಟ್ಟು ಹವಾಲ ಹಣದಂತೆ ಕೋಟಿ ಕೋಟಿ ವಹಿವಾಟು ನಡೆಸಿದ್ದರು. ಇದನ್ನೂ ಓದಿ: ಎಂಎಲ್‌ಎ ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಉದ್ಯಮಿಗೆ ಚೈತ್ರಾ ಮೋಸ ಮಾಡಿದ್ದು ಹೇಗೆ? ಪೂರ್ಣ ಕಥೆ ಓದಿ
Web Stories