ಧೋನಿಯೇ ಬೆಸ್ಟ್ ಕ್ಯಾಪ್ಟನ್ ಎಂಬುವುದು ಮತ್ತೊಮ್ಮೆ ಸಾಬೀತಾಯ್ತು! ವಿಡಿಯೋ ನೋಡಿ

Public TV
1 Min Read
dhoni captain

ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿದಿದ್ದರೂ, ಕ್ಯಾಪ್ಟನ್ಸಿ ಮಾತ್ರ ಧೋನಿ ಅವರನ್ನು ಬಿಡಲ್ಲ.

ಹೌದು, ಬಾಂಗ್ಲಾ ವಿರುದ್ಧ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯ ವೀಕ್ಷಿಸಿದ ಅಭಿಮಾನಿಗಳು ಧೋನಿ ಕುರಿತು ಹೀಗೆ ಹೇಳಿದ್ದಾರೆ. ಇದಕ್ಕೆ ಸೂಕ್ತ ಕಾರಣವೂ ಇದೆ. ಧೋನಿ ತಮ್ಮ ನಾಯಕತ್ವದ ಅನುಭವದಿಂದ ಶುಕ್ರವಾರ ನಡೆದ ಪಂದ್ಯದಲ್ಲಿ ತಂಡಕ್ಕೆ ಮುಳುವಾಗುತ್ತಿದ್ದ ಬಾಂಗ್ಲಾ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್ ಔಟಾಗಲು ಕಾರಣರಾದರು.

ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದ ಕಾರಣ ತಂಡಕ್ಕೆ ಜಡೇಜಾ ಕಮ್ ಬ್ಯಾಕ್ ಮಾಡಿದ್ದರು. ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಜಡೇಜಾ ಮೊದಲ ಓವರ್  ಬೌಲ್ ಮಾಡುತ್ತಿದ್ದರು. ಈ ವೇಳೆ ಶಕೀಬ್ ಅಲ್ ಹಸನ್ ಬೌಂಡರಿ ಮೇಲೆ ಬೌಂಡರಿ ಸಿಡಿಸಿ ಬ್ಯಾಟಿಂಗ್ ನಡೆಸುತ್ತಿದ್ದರು. ಶಕೀಬ್‍ರನ್ನು ಕಟ್ಟಿ ಹಾಕಲು ಉಪಾಯ ಮಾಡಿದ ಧೋನಿ ನಾಯಕ ರೋಹಿತ್ ರನ್ನು ಕರೆದು ಸ್ಲೀಪ್ ನಲ್ಲಿದ್ದ ಧವನ್‍ರನ್ನು ಸ್ಕ್ವೇರ್ ಲೆಗ್ ಬದಲಾಯಿಸುವಂತೆ ಸೂಚನೆ ನೀಡಿದ್ದರು. ಮರು ಎಸೆತದಲ್ಲಿ ನಡೆದದ್ದು ಮಾತ್ರ ಜಾದೂ. ಏಕೆಂದರೆ ಶಕೀಬ್ ಬ್ಯಾಟ್ ಬೀಸುತ್ತಿದಂತೆ ಬಾಲ್ ನೇರ ಧವನ್ ಕೈ ಸೇರಿತ್ತು. ಇದರೊಂದಿಗೆ ಧೋನಿ ಸದಾ ತಂಡದ ಬೆನ್ನಿಗೆ ನಿಂತಿರುತ್ತಾರೆ ಎಂಬುವುದು ಮತ್ತೊಮ್ಮೆ ಸಾಬೀತಾಯಿತು.

ಧೋನಿ ನಾಯಕ ರೋಹಿತ್ ಶರ್ಮಾಗೆ ಸಲಹೆ ನೀಡುತ್ತಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಧೋನಿಯನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದ ಜಡೇಜಾ ತಮ್ಮ ಮೊದಲ ಓವರಿನಲ್ಲೇ ನೋ ಬಾಲ್ ಹಾಗೂ ಡೇಡ್ ಬಾಲ್ ಎಸೆದು ಒತ್ತಡ ಎದುರಿಸಿದ್ದರು. ಆದರೆ ಈ ವೇಳೆ ಧೋನಿ ಸಲಹೆ ಮ್ಯಾಜಿಕ್ ಮಾಡಿತ್ತು. ಪಂದ್ಯದಲ್ಲಿ ಜಡೇಜಾ 10 ಓವರ್ ಎಸೆದು 29 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/DRVcricket/status/1043114455335428097?

https://twitter.com/DRVcricket/status/1043114004233814017?

https://twitter.com/DHONIism/status/1043145580489277440?

Share This Article
Leave a Comment

Leave a Reply

Your email address will not be published. Required fields are marked *