ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳ ಬೇಕಾದರೆ ಎಲ್ಲಾ ರೀತಿ ಪ್ರಾಣಿ ಪಕ್ಷಿಗಳ ಇರುವಿಕೆ ಅಗತ್ಯ. ಈ ನಿಟ್ಟಿನಲ್ಲಿ ವಿಶ್ವದ ಎಲ್ಲಾ ಕಡೆ ಪ್ರಕೃತಿಯ ಸಮತೋಲನ ಕಾಪಾಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದರಂತೆ ವನ್ಯ ಪ್ರಾಣಿಗಳನ್ನು ಸಂಪತ್ತೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ವನ್ಯ ಜೀವಿಗಳನ್ನು ಹಾಗೂ ಅಳಿವಿನಂಚಿನ ಪ್ರಾಣಿಗಳನ್ನು ರಕ್ಷಿಸಲು ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಭಾರತದಲ್ಲಿ ಹುಲಿಗಳ ಗಣತಿಯನ್ನು (Tiger Estimation) 1973 ರಲ್ಲಿ ಪ್ರಾರಂಭಿಸಲಾಯಿತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಗಣತಿಯನ್ನು ನಡೆಸಲಾಗುತ್ತದೆ.
ಪ್ರಪಂಚದಲ್ಲೇ ಮೊದಲ ಹುಲಿ ಗಣತಿ ಭಾರತದಲ್ಲೇ ಆರಂಭವಾಗಿದ್ದು. ಜಾರ್ಖಂಡ್‌ನ (Jharkhand) ಪಲ್ಮಾವ್ ಹುಲಿ ರಕ್ಷಿತಾರಣ್ಯದಲ್ಲಿ ಮೊದಲಬಾರಿಗೆ ನಡೆಸಲಾಗಿತ್ತು. ಬಳಿಕ 1972ರಲ್ಲಿ ವನ್ಯಜೀವಿ ಕಾಯ್ದೆ (Wildlife Protection Act 1972) ಜಾರಿಗೆ ಬಂದ ನಂತರ ಅದೇ ವರ್ಷ ಹುಲಿ ಗಣತಿಯನ್ನು ರಾಜಸ್ಥಾನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೈಲಾಸ್ ಸಂಕಲ್ ಆರಂಭಿಸಿದರು. ಸಮೀಕ್ಷೆಗಾಗಿ ಭಾರತವನ್ನು ಐದು ವಲಯಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಗಂಗಾ ಬಯಲು, ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳು, ಪಶ್ಚಿಮ ಘಟ್ಟಗಳು, ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರ ಪ್ರವಾಹ ಬಯಲು ಪ್ರದೇಶಗಳು ಮತ್ತು ಸುಂದರಬನಗಳು. ಇದನ್ನೂ ಓದಿ: ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂ.1 – ರಾಜ್ಯದಲ್ಲಿ ಬಂಡೀಪುರಕ್ಕೆ ಮೊದಲ ಸ್ಥಾನ
Advertisement
Advertisement
ಹುಲಿಗಳ ಹೆಜ್ಜೆ ಗುರುತು ಮಾನವನ ಬೆರಳಚ್ಚುಗಳಂತೆ ಪ್ರತಿ ಹುಲಿಯು ವಿಶಿಷ್ಟವಾದ ಹೆಜ್ಜೆಗುರುತನ್ನು ಹೊಂದಿರುತ್ತದೆ. ಇದರಿಂದಾಗಿ ಅರಣ್ಯ ಅಧಿಕಾರಿಗಳು ಹುಲಿಗಳ ಸಂಖ್ಯೆಗಳನ್ನು ಲೆಕ್ಕ ಹಾಕಲು ಗಾಜು ಮತ್ತು ಕಾಗದವನ್ನು ಬಳಸಿ ಹೆಜ್ಜೆಯನ್ನು ಸಂಗ್ರಹಿಸಿ ಮಾಹಿತಿ ಕಲೆಹಾಕುತ್ತಾರೆ. ಮುಂದಿನ ದಿನಗಳಲ್ಲಿ ಲೆಕ್ಕ ಹಾಕುವಾಗ ಹಳೆಯ ಹೆಜ್ಜೆಗುರುತುಗಳ ಮೂಲಕ ಮೊದಲಿನ ಹುಲಿಗಳನ್ನು ಗುರುತಿಸಬಹುದಾಗಿದೆ.
Advertisement
ಆದರೆ ಹುಲಿಯ ಹೆಜ್ಜೆ ಗುರುತುಗಳು ನಿಂತಿರುವಾಗ, ಓಡುವಾಗ ಮತ್ತು ವಿಶ್ರಾಂತಿ ಪಡೆಯುವಾಗ ಭಿನ್ನವಾಗಿರುತ್ತವೆ. ಇದು ಗಣತಿಗೆ ಸ್ವಲ್ಪ ಮಟ್ಟದ ತೊಡಕಾಗಿದೆ. ಇದೇ ಕಾರಣಕ್ಕೆ ಈಗ ರೇಡಿಯೋ ಕಾಲರ್‌ಗಳನ್ನು ಹುಲಿಗಳಿಗೆ ಅಳವಡಿಸಿ, ಕ್ಯಾಮೆರಾ ಟ್ರ್ಯಾಪ್ ಬಳಸಿ ಹುಲಿಗಳ ಸಂಖ್ಯೆಯನ್ನು ಅಂದಾಜಿಸಲಾಗುತ್ತದೆ. ವಿಶ್ವದ 75% ಹುಲಿಗಳು ಭಾರತದಲ್ಲಿವೆ. ಅಲ್ಲದೇ ಗಣತಿಗೆ ಅತೀ ಹೆಚ್ಚು ಕ್ಯಾಮೆರಾ ಟ್ರ್ಯಾಪಿಂಗ್ ಬಳಸುವ ದೇಶ ನಮ್ಮದಾಗಿದೆ. ಈ ಬಾರಿ ಜಿಪಿಎಸ್ ತಂತ್ರಾಂಶ ಬಳಸಲಾಗುತ್ತಿದೆ.
Advertisement
ಇದರೊಂದಿಗೆ ಅರಣ್ಯ ಅಧಿಕಾರಿಗಳ ತಂಡ ಹೆಜ್ಜೆ ಗುರುತು, ಲದ್ದಿ, ಮರಗಳಿಗೆ ಉಜ್ಜಿದ ಗುರುತುಗಳು, ಗರ್ಜನೆ ಬಗ್ಗೆ ಸಂಕ್ಷಿಪ್ತ ಮಾಹಿತಿ ದಾಖಲು ಮಾಡುತ್ತಾರೆ. ಈ ವೇಳೆ ಕಣ್ಣಿಗೆ ಬಿದ್ದ ಪ್ರಾಣಿಗಳ ಸಂಖ್ಯೆ, ನೋಡಿದ ಸಮಯ, ಪ್ರಭೇದ ಮತ್ತು ಗುಂಪಿನ ಪ್ರಮಾಣ ಗುರುತಿಸುತ್ತಾರೆ. ವಾಪಸಾಗುವಾಗ ಸಸ್ಯ ಸಂಪತ್ತು, ಮಾನವ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಎಲ್ಲಾ ರೀತಿಯ ಪರಿಶೀಲನೆಯ ನಂತರ ಹುಲಿಗಳ ಸಂಖ್ಯೆಯನ್ನು ದಾಖಲಿಸಲಾಗುತ್ತದೆ.
2018-19ರ ಹುಲಿ ಗಣತಿಯ ಸಮಯದಲ್ಲಿ ಭಾರತದಲ್ಲಿ ಸುಮಾರು 26,838 ಸ್ಥಳಗಳಲ್ಲಿ 27,000 ಕ್ಯಾಮೆರಾ ಟ್ರ‍್ಯಾಪ್‌ಗಳನ್ನು ಬಳಸಲಾಗಿತ್ತು. ಇದರಿಂದಾಗಿ 34 ಮಿಲಿಯನ್‌ಗಿಂತಲೂ ಹೆಚ್ಚು ಚಿತ್ರಗಳನ್ನು ತೆಗೆಯಲಾಗಿತ್ತು. ಅದರಲ್ಲಿ 2967 ಹುಲಿಗಳು ಇರುವುದು ಪತ್ತೆಯಾಗಿದ್ದವು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಪ್ರಾಣಿಗಳು ಓಡಾಡುವ ಜಾಗಗಳು, ನದಿಪಾತ್ರಗಳಲ್ಲಿ ಕ್ಯಾಮೆರಾ ಟ್ರ‍್ಯಾಪ್‌ಗಳನ್ನು ಸ್ಥಾಪಿಸುತ್ತದೆ. ಇದನ್ನೂ ಹುಲಿಯ ಎರಡೂ ಬದಿಗಳನ್ನು ಸೆರೆಹಿಡಿಯಲು ಅನುಕೂಲವಾಗುವಂತೆ ಕ್ಯಾಮೆರಾ ಟ್ರ‍್ಯಾಪ್‌ಗಳನ್ನು ಜೋಡಿಯಾಗಿ ಹೊಂದಿಸಲಾಗುತ್ತದೆ. ಹಿಂದೆ 2005ರವರೆಗೂ ಹೆಜ್ಜೆಯನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂಲಕ ಅಚ್ಚು ಹಾಕಿಸಲಾಗುತ್ತಿತ್ತು.
ಈ ಬಾರಿ ಭಾರತದಲ್ಲಿ (India) ಹುಲಿಗಳ ಸಂಖ್ಯೆ 3,167 ಆಗಿದೆ. ಹುಲಿಗಳ ಸಂಖ್ಯೆ ಕಳೆದ ಬಾರಿ ಇದ್ದ 2,967 ರಿಂದ 3,167 ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದ್ರು, ಈಗ ಬರ್ತೀವಿ ಅಂದ್ರೂ ಸೇರಿಸಿಕೊಳ್ಳೋರಿಲ್ಲ: ವಿಶ್ವನಾಥ್
Web Stories